ಸೋರ್ಸ್ ಕೋಡ್ (2011)- ಪರ್ಯಾಯ ವಿಶ್ವಗಳು ಅಥವಾ “ಹಲವು” ನಾವುಗಳು ಇದ್ದರೆ ಎಂಬ ಥ್ರಿಲ್ಲರ್!

~~~~~~~~~~~~~~~~~~~~~~~~~~~~~~~~~~~~~~~~~

ಇದೊಂದು ಮೈಂಡ್ ಬೆಂಡರ್ ಎಂದರೆ ಅದೇ….ತಲೆ ಧಿಮ್ಮೆನ್ನುವಂತಹಾ ಹೊಸ ಕಥೆ ಎಂದು!

ಇದು ಕೇವಲ ಥ್ರಿಲ್ಲರ್ ಚಿತ್ರವಲ್ಲ, ಇದೊಂದು ಹೊಸ ವೈಜ್ಞಾನಿಕ ಸಿದ್ಧಾಂತ-ಆಲ್ಟರನೇಟ್ ರಿಯಾಲಿಟಿಯ ಮೇಲೆ ನಿಂತ ಕುತೂಹಲಕಾರಿ ಸಾಧ್ಯತೆ!ಚಿತ್ರ ಹೀಗೆ ಶುರುವಾಗುತ್ತದೆ…ಒಬ್ಬ ಸೈನಿಕ ( ಪಾತ್ರದ ಹೆಸರು ಸ್ಟೀವನ್ಸ್) ಒಂದು ಚಿಕಾಗೋ ರೈಲಿನಲ್ಲಿ ಎಚ್ಚರಗೊಳ್ಳುತ್ತಾನೆ, ತನ್ನ ಸೀಟಿನಲ್ಲಿ.. ಎದುರಿಗೆ ಯಾವುದೋ ಯುವತಿ ಪರಿಚಯವಿದ್ದವಳಂತೆ ಮಾತಾಡಿಸುತ್ತಿದ್ದಾಳೆ…ಅವನಿಗೆ ತಾನಲ್ಲಿಗೇ ಹೇಗೆ ಬಂದೆನೆಂಬುದು ನೆನಪಿಲ್ಲ… ಕನ್ನಡಿಯಲಿ ಮುಖ ನೋಡಿಕೊಂಡರೆ ದಿಗ್ಭ್ರಮೆಯಾಗುತ್ತದೆ.ತಾನು ಅವನಲ್ಲ!!.ಯಾವುದೋ ಅಪರಿಚಿತ ವ್ಯಕ್ತಿ ( ಶಾನ್) ಯ ಮುಖ ಕಾಣುತ್ತಿದೆ…ಅಯ್ಯೋ! ಎಂದು ಗಾಬರಿಯಿಂದ ಜೇಬಿನಿಂದ ಪರ್ಸ್ ತೆಗೆದು ನೋಡಿದರೆ ಅದೇ ಅಪರಿಚಿತ ವ್ಯಕ್ತಿಯ ಐ ಡಿ ಎಲ್ಲಾ ಇದೆ.. ಎಂಟು ನಿಮಿಷದಲ್ಲಿ ಆ ಟ್ರೈನ್ ಬಾಂಬ್ ದಾಳಿಯಿಂದ ಛಿದ್ರ ಛಿದ್ರವಾಗುತ್ತದೆ.

ಆದರೆ ಮರುಗಳಿಗೆಯೇ ನಾಯಕ ಯಾವುದೋ ಕತ್ತಲ ಚೇಂಬರಿನಲ್ಲಿದ್ದಾನೆ,. ಎದುರಿಗೆ ಆರ್ಮಿಯ ಅಧಿಕಾರಿಣಿಯೊಬ್ಬಳು “ನೀನು ಈಗ ಅದೇ ರೈಲಿಗೆ ವಾಪಸ್ ಹೋಗುತ್ತೀಯೆ, ಅದೇ ಎಂಟು ನಿಮಿಷ ಮುಂಚಿನ ಕಾಲಕ್ಕೆ. ಅಲ್ಲಿ ನಡೆಯುವ ಬಾಂಬ್ ದಾಳಿ ಯಾರದು , ಯಾರವನು ಎಂದು ಪತ್ತೆ ಹಚ್ಚಿ ವಾಪಸ್ ಹೀಗೆ ಬಂದು ನಮಗೆ ಹೇಳು, ನಾವು ಆದದ್ದಾಯಿತು ಎಂದು ಮುಂದಿನ ಅವನ ದಾಳಿಯನ್ನು ತಡೆಯಲು ಕಾರ್ಯ ಮಾಡುತ್ತೇವೆ ಎನ್ನುತ್ತಾರೆ.‘ಅರೆರೆ, ನಾನೆಲ್ಲಿ ಹೋದೆ, ನಾನೊಬ್ಬ ಸೈನಿಕ, ಆಫ್ಘಾನಿಸ್ಥಾನದಲ್ಲಿ ಹೆಲಿಕಾಫ್ಟರಿನಲ್ಲಿ ಹಾರುತ್ತಿದ್ದೆ, ಇಲ್ಲಿಗೇಕೆ ಬಂದೆ.. ನಾನೇನಾದೆ,. ನೀವೆಲ್ಲಾ ಯಾರು? ’ಎಂಬ ಪ್ರಶ್ನೆಗಳಿಗೆ ತಕ್ಷಣ ಉತ್ತರವಿಲ್ಲ

ಮತ್ತೆ ಅವನನ್ನು ಅದೇ ರೈಲಿನ ಸೀಟಿಗೆ ಅದೇ ಕ್ಷಣಕ್ಕೆ ಕಳಿಸುತ್ತಿರುತ್ತಾರೆ. ಅವನು ಎಷ್ಟು ಸಲ ವಿಫಲನಾದರೂ ಅಷ್ಟೂ ಸಲ ಮತ್ತೆ ಮತ್ತೆ ಬಾಂಬರನನ್ನು ಹಿಡಿ ಎಂದು ಕಳಿಸುತ್ತಾರೆ.ಅವನು ಆಗ ಅಲ್ಲಿ ಹೊಸ ಹೊಸದನ್ನು ಕಲಿತು ನಿಧಾನವಾಗಿ ಪತ್ತೆ ಮಾಡುತ್ತಾ ಇರುತ್ತಾನೆ, ರೈಲಿನ ಯುವತಿ ಮತ್ತಿತರ ಪ್ರಯಾಣಿಕರು ಮತ್ತೆ ಮತ್ತೆ ಹಾಗೆ ಸಿಗುತ್ತಿರುತ್ತಾರೆ. ಆದರೆ ಆಸ್ಫೋಟವಾಗುವ 8 ನಿಮಿಷಕ್ಕೆ ಮಾತ್ರ.ಮಧ್ಯದಲ್ಲೇ, ಸೈನಿಕನಾಗಿದ್ದ ತಾನು ನಿಜವಾಗಿಯೂ ಸತ್ತುಹೋಗಿದ್ದೇನೆ, ಇದು ಅವನ ಆತ್ಮ ಮಾತ್ರ ಎಂದು ಅರಿವಾಗಿಬಿಡುತ್ತದೆಹೀಗೆ “ಟೈಮ್ ಲೂಪ್” ಅಥವಾ ಕಾಲದ ಸುಳಿಯಲ್ಲಿ ಸಿಕ್ಕ ನಾಯಕ ಸ್ಟೀವನ್ಸ್ ಮತ್ತೆ ಮತ್ತೆ ಶಾನ್ ಎಂಬವನ ದೇಹದಲ್ಲಿ 8 ನಿಮಿಷ ಕಾಲ ಪುನರ್ಜನ್ಮ ಪಡೆಯುತ್ತಾನೆ.

ಕೊನೆಗೆ ನಾಯಕ ಸ್ಟೀವನ್ಸ್ ಆ 8 ನಿಮಿಷದ ವಿಂಡೋ ನಲ್ಲಿ ಅವನು ತನಗೆ ಕೊಟ್ಟ ಮಿಷನ್ ಪೂರೈಸಿದನೆ?ಅವನು ತನ್ನ ನಿಜವಾದ ಅಪ್ಪನ ಜತೆ ಮಾತಾಡಬೇಕಿತ್ತಲ್ಲ. ಈಗ ಅವನ ಆತ್ಮ ಮಾತ್ರ ಹೊಸ ಶರೀರದಲ್ಲಿ ಸೇರಿತಲ್ಲ…!ಆ ಬಾಂಬರ್ ಯಾರು? ಅವನನ್ನು ಎಂಟೇ ನಿಮಿಷದಲ್ಲಿ ಹೇಗೆ ಕಂಡುಹಿಡಿಯುವುದು?ಅವನನ್ನು ಹಿಡಿದ ನಂತರ ತಾನು ನಿಜಕ್ಕೂ ಸತ್ತೇಹೋಗುವೆನೆ?ಅಥವಾ ಆ ಹೊಸ ಭವಿಷ್ಯದ ದಿನದಲ್ಲಿ ಬದುಕುತ್ತಲೇ ಇರುವೆನೆ?ಇದನ್ನು ನೀವು ಚಿತ್ರ ನೋಡಿಯೇ ಪತ್ತೆ ಹಚ್ಚಬೇಕು!

ನಮ್ಮ ಮಿದುಳನ್ನು ಬಹಳ ಕೆದಕುವ ಕಥಾವಸ್ತು ಇದು…

ಎಲ್ಲರಿಗೂ ಇಷ್ಟವಾಗುತ್ತದಾ, ಮೊದಲು ಅರ್ಥವಾಗುತ್ತದಾ ಎಂದು 10 ವರ್ಷಗಳಿಂದ ಜಗದಾದ್ಯಂತ ಚರ್ಚೆಯಾಗುತ್ತಿದೆನೀವೆ ನೋಡಿ ನಿರ್ಧರಿಸಿ…(ಇದರ ನಂತರ ಹಲವು ಚಿತ್ರಗಳು ಇದೇ ವಸ್ತು ಬಗ್ಗೆ ಬಂದಿವೆ ಇಂಗ್ಲೀಷಿನಲ್ಲಿ. ಎಡ್ಜ್ ಆಪ್ ಟುಮಾರೋ, ಡಾ. ಸ್ಟ್ರೇಂಝ್, ಲೂಪರ್, ಡೆಜಾ ವೂ ಇತ್ಯಾದಿ. ಪ್ರಶಾಂತ್ ಭಟ್ ಅವರು – ಕಾಲಯಾನ ಎಂಬ ಕಾದಂಬರಿಯಲ್ಲಿ ಈ ವಿಷಯವನ್ನೇ ತೆಗೆದುಕೊಂಡಿದ್ದಾರೆ!)

ನನ್ನ ರೇಟಿಂಗ್ = 4.5/5

ಅಮೆಝಾನ್ ಪ್ರೈಮ್ ವಿಡಿಯೋದಲ್ಲಿ ಸಿಗುತ್ತದೆ.

https://www.primevideo.com/detail/0H7N38U2TT05RH54QE4CMK2QU6/ref=atv_dp_share_cu_r

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

Leave a Reply