ಒರಿಸ್ಸಾ ಮೂಲದ ವ್ಯಕ್ತಿಯೊಬ್ಬರು ದಿನಾಂಕ 25-05-2021 ರಂದು ಯಲಹಂಕ ಕೆರೆಯಲ್ಲಿ ಬಿದ್ದು, ಕೆರೆಯಲ್ಲಿನ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು ಮೇಲೆ ಬರಲಾರದೆ ಕಷ್ಟಪಡುತ್ತಿದ್ದರು. ಗೃಹರಕ್ಷಕ ದಳ ಮತ್ತು ಪೊಲೀಸರು ಆ ವ್ಯಕ್ತಿಯ ಪ್ರಾಣವನ್ನು ಉಳಿಸಿದ್ದಾರೆ.
ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ನೋಡಿ, ತಕ್ಷಣ ಕಾರ್ಯಪ್ರವೃತ್ತರಾದ ಗೃಹರಕ್ಷಕದಳ ಸಿಬ್ಬಂದಿ, ಪೋಲಿಸ್ ಮತ್ತು ಮೀನುಗಾರರ ಬೋಟಿನ ಸಹಾಯದಿಂದ ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಗೃಹರಕ್ಷಕದಳ ಸಿಬ್ಬಂದಿಗಳಾದ ಬಾಬುಪ್ರಸಾದ್, ನಾಗರಾಜ್ ಎಂ ಎಸ್ ಮತ್ತು ಪ್ಲಟೂನ್ ಕಮಾಂಡರ್ ಆರ್ ಎನ್ ರವೀಂದ್ರ ರವರುಗಳ ಈ ಸಾಹಸಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪ್ಲಟೂನ್ ಕಮಾಂಡರ್ ರವೀಂದ್ರರವರು ಈ ಹಿಂದೆ ಬೆಂಗಳೂರಿನ ಹೆಚ್.ಎಸ್. ಆರ್. ಲೇಔಟ್ ಮತ್ತು ಇತ್ತೀಚೆಗಷ್ಟೇ ಕೊಡಗಿನಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಗಳಲ್ಲೂ ಸಹ ಜೀವದ ಹಂಗು ತೊರೆದು ನೂರಾರು ಜನರ ಪ್ರಾಣವನ್ನು ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.