28/01/2023

CHITRODYAMA.COM

SUPER MARKET OF CINEMA NEWS

ಚಿತ್ರ ಬ್ರಹ್ಮ “ಪುಟ್ಟಣ್ಣ ಕಣಗಾಲ್ ” ಒಂದು ನೆನಪು

( ಮುಂದುವರೆದ ಭಾಗ )

“💓ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ,ವೀರ ನಾರಿಯಾ ಚರಿತೆಯ ನಾನು ಹಾಡುವೆ💓 “

“🐦ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ, ಪಯಣಿಗ ನಾನಮ್ಮ, ಪಯಣಿಗ ನಾನಮ್ಮಾ..🐦”

“🐧ಒಲವೆ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ, ಒಲವೇ ಮರೆಯದ ಮಮಕಾರ, ಒಲವೇ ಮರೆಯದ ಮಮಕಾರ🐧 “

“💟ವಿರಹಾ, ನೂರು ನೂರು ತರಹ, ವಿರಹಾ ಪ್ರೇಮ ಕಾವ್ಯದ ಕಹಿಬರಹ,ಹರಯ ಉಕ್ಕಿ ಪ್ರಣಯ ಹಕ್ಕಿ ಸಹಿಸೆ ಸಹಿಸೆ ತಾನೆಂದಿದೆ💟 “

ಈ ಮೇಲಿನ ಹಾಡುಗಳ ಸಾಲುಗಳನ್ನು ನೋಡುತ್ತಿದ್ದರೆ ನಮಗೆ ತಕ್ಷಣ ನೆನಪಿಗೆ ಬರುವ ಹೆಸರೇ ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿ ಚಿತ್ರರಂಗ ಆಳಿದ ನಿದೇ೯ಶಕರು ಅವರೇ ಶ್ರೀ. ಎಸ್. ಆರ್. ಪುಟ್ಟಣ್ಣ ಕಣಗಾಲ್( ಚಿತ್ರಬ್ರಮ್ಹ ).

ಅಂಬರೀಷ್ ರವರ “ಮೆರೆ ಸಪುನೋಂಕಿ ರಾಣಿ ಕಬು ಆವೋಗಿ ತೂ, ಏ ಬುಲ್ ಬುಲ್ ಮಾತಾಡಕಿಲ್ವ ” ಈ ಒಂದು ಸಂಭಾಷಣೆಯಿಂದ ಚಿತ್ರರಂಗಕ್ಕೆ ಖಳ ನಟರಾಗಿ ಪಾದಾಪ೯ಣೆ ಮಾಡೋ ಹಾಗಾಯಿತು. ವಿಷ್ಣು ವಧ೯ನ್ ರವರ “ಬರೀ ಹಾವಲ್ಲ ಮೇಷ್ಟ್ರೆ ನಾಗರಹಾವು ” ಈ ಸಂಭಾಷಣೆ ಇವರಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಾಗಿ ಪರಿಚಯ ಮಾಡಿದರು.

🍁ಮಿನುಗುತಾರೆ ಕಲ್ಪನ ನಟಿಸಿದ ಶರಪಂಜರ ಚಿತ್ರದ ನಟನೆ ಮರೆಯಲಾಗದು.

🍀ಕಲಾದೇವಿ ಆರತಿ ನಟಿಸಿದ ಶುಭಮಂಗಳ ಚಿತ್ರದ ನಟನೆ ಮರೆಯಲಾಗದು.

🌺ಪದ್ಮಾವಾಸಂತಿ ನಟಿಸಿದ ಮಾನಸಿಕ ಅಸ್ವಸ್ಥೆ ಪಾತ್ರ ಮರೆಯಲಾಗದು.

🕹ಅಭಿನಯ ಶಾರದೆ ಜಯಂತಿ ನಟಿಸಿದ ವಿರಹ ವೇದನೆಯ ಪಾತ್ರ ಮಸಣದ ಹೂವು ಚಿತ್ರ ಮರೆಯಲಾಗದು. ನಮ್ಮ ಅಣ್ಣಾವೃ ನಟಿಸಿದ ಚಿತ್ರ ” ಸಾಕ್ಷಾತ್ಕಾರ ” ಈ ಚಿತ್ರದಲ್ಲಿ ಅಣ್ಣಾವ್ರ ಮತ್ತು ಜಮುನ ರವರ ನಟನೆ ನಿಜಕ್ಕೂ ಮರೆಯಲಾಗದು,  ಈ ಚಿತ್ರದಲ್ಲಿ ಪವಿತ್ರ ಪ್ರೇಮ ಬಂಧನದ ಕುರಿತಾಗಿ ಮತ್ತು ಸಂಸಾರದಲ್ಲಿ ಸಂಬಂಧಿಕರು ಅಸೂಯೆ ಪಡೋದು ಮತ್ತು ಪ್ರೇಮಿಗಳನ್ನು ಬೇಪ೯ಡಿಸಿ ನಂತರ ತಾವು ಅನುಭವಿಸುವ ನೋವನ್ನು ಎಳೆ ಎಳೆಯಾಗಿ ನಿದೇ೯ಶಿಸಿದ್ದಾರೆ, ಅವರ ಎಲ್ಲಾ ಚಿತ್ರಗಳಲ್ಲಿ ಒಂದೊಂದು ಸಂದೇಶವಿರುತ್ತಿತ್ತು, ಸಮಾಜದ ಬಗ್ಗೆ, ಹೆಣ್ಣಿನ ಬಗ್ಗೆ,  ಸಂಸ್ಕೃತಿಯ ಬಗ್ಗೆ ಜನರಿಗೆ ಅರಿವಿಗುವಂತೆ ಹೇಳುತ್ತಿದ್ದರು.

ಇವರ ನಿದೇ೯ಶನಕ್ಕೆ ಹಲವಾರು  ಪ್ರಶಸ್ತಿಗಳು ಲಭಿಸಿವೆ,

❤ಶರಪಂಜರ ಮತ್ತು ಗೆಜ್ಜೆಪೂಜೆ ಚಿತ್ರಕ್ಕೆ ಭಾರತ ಸರ್ಕಾರ ಉತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಪ್ರಶಸ್ತಿ ನೀಡಿದ್ದಾರೆ❤ .

💜ರಂಗನಾಯಕಿ, ಧಮ೯ಸೆರೆ, ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ ಭಾರತ ಸರ್ಕಾರ  ಅತ್ಯುತ್ತಮ ನಿದೇ೯ಶಕ ಪ್ರಶಸ್ತಿ ನೀಡಿದ್ದಾರೆ💜.

1984 ರಲ್ಲಿ ಕನ್ನಡ ಚಲನಚಿತ್ರ ನಿದೇ೯ಶಕರ ಸಂಘದ ಮೊದಲ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಸುಪುತ್ರರಾದ ಶ್ರೀ. ರಾಮು ಕಣಗಾಲ್ ರವರು ಮುಖಪುಟದಲ್ಲಿ ಪರಿಚಯವಾದದ್ದು ನನ್ನ ಪುಣ್ಯ ಎಂದು ಭಾವಿಸುವೆ,  ಆದರೆ ಅವರನ್ನು ಭೇಟಿ ಮಾಡಲು ಅವಕಾಶ ಇನ್ನೂ ಸಿಕ್ಕಿಲ್ಲ ಒಂದು ದಿನ ಭೇಟಿ ಮಾಡೋಣ ಎಂದಿದ್ದಾರೆ, ಅಲ್ಲಿಯವರೆಗೂ ಕಾಯುವೆನು.

ಆತ್ಮೀಯ ಮಿತ್ರರೇ ಎಲ್ಲಾ ಅಭಿಮಾನಿಗಳ ಕೋರಿಕೆ ಅವರ ಹುಟ್ಟೂರಾದ ಪಿರಿಯಾಪಟ್ಟಣದಲ್ಲಿ ಅವರ ಮನೆಯನ್ನು ಒಂದು ಚಲನಚಿತ್ರ ಸಂಗ್ರಹಾಲಯ ಮಾಡಿದರೆ ಬಹಳ ಚೆನ್ನಾಗಿರುತ್ತೆ ಎಂಬುದು, ಇವರ ಚಿತ್ರರಂಗದ ಸೇವೆ ಮರೆಯಲಾಗದು.

ನನಗೆ ತೋಚಿದ ಹಾಗೆ ಬರೆದಿದ್ದೇನೆ ಇದರಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ತಾವೂ ಈ ಲೇಖನ ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ನಮಗೆ ಮುಂದೆ ಬರೆಯೋ ಲೇಖನಕ್ಕೆ ಸ್ಪೂರ್ತಿ ಸಿಕ್ಕ ಹಾಗೆ.

ಕೊನೆಯ ಮಾತು ಕನ್ನಡ ಚಿತ್ರರಂಗ ಇರೋವರೆಗೂ ಚಲನ ಚಿತ್ರಗಳ ದೇವರು (ಗಾಡ್ ಆಫ್ ಸಿನಿಮಾ) ಎನಿಸಿದ ಪುಟ್ಟಣ್ಣ ಕಣಗಾಲ್ ರವರು ಇರುತ್ತಾರೆ ಎಂದು ನನ್ನ ಭಾವನೆ.

Leave a Reply

Copyright © All rights reserved. | Newsphere by AF themes.