28/01/2023

CHITRODYAMA.COM

SUPER MARKET OF CINEMA NEWS

ಲಿವಿಂಗ್ ಲೆಜೆಂಡ್ ಶಿವಣ್ಣ @ 58

1 min read

( ಮುಂದುವರೆದ ಭಾಗ )

ಶಿವಣ್ಣ ರವರು ಹಲವು ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ವೈರಮುಡಿ ಅನ್ನೋ ವಿಭಿನ್ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಡುಗಳು ಅಷ್ಟೇ ಚೆನ್ನಾಗಿರುತ್ತೆ. ಈ ಕೊನೆಯ ಸಂಚಿಕೆಯಲ್ಲಿ ಅವರ ಚಿತ್ರದ ಸಾಲುಗಳು ಮತ್ತು ಎವರ್ ಗ್ರೀನ್ ಡೈಲಾಗ್ ಗಳು ನಿಮಗಾಗಿ.

👒ನಾನು ನಿಮ್ಮವನು ನಿಮ್ಮ ಮನೆಯವನು – ಪುರುಷೋತ್ತಮ

🌺ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ -ಸಮರ

🍀ನಾನು ಕನ್ನಡದ ಕಂದ ಬಂದೆ ಶಾಂತಿಯ ಮಣ್ಣಿಂದ – ಎ ಕೆ 47

🦋ಬೇಡುವೆನು ವರವನ್ನು ಕೊಡೆ ತಾಯೆ ಜನ್ಮವನು – ಜೋಗಿ

🐥ಜನುಮ ಜೋಡಿ ಆದರೂ ಏಕೆ ಅಂತರ – ಜನುಮದ ಜೋಡಿ.

🐎ಸತ್ಯಾನೆ ಉಸಿರಂತೆ ನ್ಯಾಯ ದೇವಿಗೆ ಅವಳೆದೆಯ ಹಾಲಂತೆ ಕಾನೂನಿಗೆ – ವಿಶ್ವ.

🌹ಓ ಗುಲಾಬಿ ಓ ಹೋ ಗುಲಾಬಿ -🕉.

🎸ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ -ಹಗಲುವೇಷ.

🎷ರಾಜ ರಾಜ ಶಿವರಾಜ ನನ್ನ ಗಲ್ಲಿಗೆ ನಾನೆ ಮಹಾರಾಜ – ಚಂದ್ರೋದಯ.

☂️ಗಂಗವ್ವ ಗಂಗಾ ಮಾಯಿ ಮಮತೆಯ ಧಾರೆ, ಗುರಿ ಇರದೆ ಅಲೆವಾ ನನ್ನ ಮೂಲವ ತೋರೆ -ಚಿಗುರಿದ ಕನಸು.

ಅಭಿಮಾನಿಗಳು ಶಿವಣ್ಣ ತೆರೆಯ ಮೇಲೆ ಬಂದ್ರೆ ಸಾಕು ಸಿಳ್ಳೆ ಹೊಡೆದು ಕಾಸು ಎಸೆದು ತಮ್ಮ ಖುಷಿ ವ್ಯಕ್ತಪಡಿಸೋದು ಫೈಟ್, ಡಾನ್ಸ್ ಮತ್ತು ಡೈಲಾಗ್ ಗಳಿಗೆ, ಇವರ ಪಂಚಿಂಗ್ ಡೈಲಾಗಿಗೋಸ್ಕರ ಥಿಯೇಟರ್ ತುಂಬಾ ಹೌಸ್ ಫುಲ್ .

ಅವರು ನಟಿಸಿದ ಕೆಲವು ಚಿತ್ರಗಳಲ್ಲಿ ಪ್ರಮುಖ ಡೈಲಾಗ್ ನೋಡೋಣ :

☂️ಇವನು ಯಾರೋ ನಿನ್ ಜೊತೆ ಕೈ ಮಿಲಾಯಿಸಿದನಂತೆ ಯಾವ ಕೈ ಅಂತ ಕ್ಲಾರಿಟಿ ಇಲ್ದೆ ಹುಡುಗ್ರು ಎರಡು ಕೈನು ತಂದಿದಾರೆ (ಮಫ್ತಿ).

🎻ರಾಕ್ಷಸ ಅಲ್ಲ ರಕ್ಷಕ ಆರಕ್ಷಕ ಏಯ್ ನಾನ್ ಸರಿಯಿಲ್ಲ ಸೈಲೆಂಟಾಗ್ ಸೈಡಲಿದ್ಬುಡಿ (ರಾಕ್ಷಸ).

🎷ಯೋ ಬಕ೯ಯ ಪೇಪರ್ ಮುಂದಗಡೆ ಬಕೋ೯ ಬೆಂಗ್ಳೂರ್ ನಂದು ಇನ್ಮೇಲೆ ಕನಾ೯ಟಕ ಬಾಡ೯ರ್ಲಿ ಯಕಶ್ಚಿತ್ ಒಂದು ನಾಯಿ ಬರ್ಬೇಕಾದ್ರು ನನ್ ಕೇಳ್ಕಂಡ್ ಬಬೇ೯ಕು,  ಅಕಸ್ಮಾತ್ ಬಂತೋ… ಹುಟ್ಟು ಭಿಕ್ಷೆ ಕಣೋ ಬದುಕು ಶಿಕ್ಷೆ ಕಣೋ ಬ್ರಹ್ಮನ ಬರಹಾನೆ ಹಿಂಗೇ ಕಣೋ, ತಿಂತಾರೆ ಜನರು ಕಿತ್ತು ನನ್ನ ಏನ್ ಮಾಡಲಿ, ಬದುಕೋದು ಹೆಂಗೆ ಹೇಳು ಶಿವನೇ ಈ ಭೂಮಿಲಿ.

🐎 ಲಾಂಗ್ ಹಿಡ್ದೋರೆಲ್ಲ ರೌಡಿಗಳೂ ಅಲ್ಲ ಸೌಂಡ್ ಕೊಡೋರೆಲ್ಲ ಪಂಟ್ರುಗಳು ಅಲ್ಲ (ಸಂತ).

🎸ನಾನ್ ಸೈಲೆಂಟಾಗಿದ್ರೆ ರಾಮ… ವೈಲೆಂಟಾದ್ನೊ…. ರಾವಣ…. (ದಿ ವಿಲನ್).

🔫 ಮುಝೆ ಅರೆಸ್ಟ್ ಬೋಲೆತೊ ಅಲಜಿ೯…ಎನ್ಕೌಂಟರ್ ಬೋಲೆ ತೊ ಎನಜಿ೯.

💖ಐ ಲವ್ ಯೂ… ಯೂ ಮಸ್ಟ್ ಲವ್ ಮಿ… 🕉

🦁 ಏನ್ ಡಾಲಿ.. ನಾ ಸುಮ್ನೆ ಬಂದ್ರೆ ಅತಿಥಿ, ಹುಡ್ಕೊಂಡ್ ಬಂದ್ರೆ ನಿಮ್ ತಿಥಿ, ಬ್ಲಾಕಂಡ್ ವೈಟ್ ದುನಿಯಾದಲ್ಲಿ ಕೆಂಪ್ ನೋಟಿನ್ ತುಲಾಭಾರನ, ಬ್ರಹ್ಮ ನಿಮ್ ಹಣೆಬರಹನ ಪೆನ್ನಲ್ ಬರುದ್ರೆ ನಾನ್ ನನ್ ಗನ್ನಲ್ ಬರಿತಿನಿ, ಸಾಮಾನ್ಯವಾಗಿ ನಾನ್ ಸೋಲಲ್ಲ ಒಂದು ವೇಳೆ ಸೋತ್ರು ಆ ಮ್ಯಾಚಲಿ ನಾನೇ ಮ್ಯಾನ್ ಆಫ್ ದಿ ಮ್ಯಾಚ್, ಬಾಸ್ ಅನ್ಸ್ಕೊಳಕು ಯೋಗ ಮತ್ತು ಯೋಗ್ಯತೆ ಇರಬೇಕು ಸುಮ್ ಸುಮ್ನೆ ಯಾರೂ ಬಾಸ್ ಅನ್ಸ್ಕೊಳಕಾಗಲ್ಲ (ಟಗರು).

ಇನ್ನೂ ಬಹಳ ಫೇಮಸ್ ಡೈಲಾಗ್ ಗಳಿವೆ.

ಒಂದು ವಾರದಿಂದ ಶಿವಣ್ಣ ರವರ ವಿಶೇಷ ಸಂಚಿಕೆ ನನಗೆ ತೋಚಿದ ಹಾಗೆ ಬರೆದಿರುವೆ, ನಿಮಗೂ ಅಷ್ಟೇ ಇಷ್ಟ ಆಗಿರಬಹುದು ಅಂತ ನಂಬಿ ಮತ್ತೊಮ್ಮೆ ಸ್ಯಾಂಡಲ್ವುಡ್ ಬಾಸ್ ಶಿವರಾಜ್ ಕುಮಾರ್ ರವರಿಗೆ ಜನುಮ ದಿನದ ಅವರು ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಲಿ ಮುಂಬರುವ ಚಿತ್ರಗಳು ಯಶಸ್ವಿಯಾಗಲಿ ಎಂದು ಆಶಿಸುತ್ತಾ ಈ ಲೇಖನ ಮುಗಿಸುತ್ತಿರುವೆ 🙏

Leave a Reply

Copyright © All rights reserved. | Newsphere by AF themes.