30/01/2023

CHITRODYAMA.COM

SUPER MARKET OF CINEMA NEWS

ಶ್ರಾವಣ ಬಂತು @ 37 ರ ಸಂಭ್ರಮ 🌹💜💙🌹

1 min read

Shravana Bantu

ವಿಶ್ವದಲ್ಲೇ ಹೆಸರಾದ ಪವಿತ್ರ ಕ್ಷೇತ್ರ ಅದುವೆ ಧಮ೯ಸ್ಥಳ, ಈ ಕ್ಷೇತ್ರದಲ್ಲಿ ಇದುವರೆಗೂ ಫಿಲಂ ಚಿತ್ರೀಕರಣ ಮಾಡಿರೋದು 2 ಚಿತ್ರ ಒಂದು ಶ್ರಾವಣ ಬಂತು ಮತ್ತೊಂದು ಶೃತಿ ಸೇರಿದಾಗ, ಕ್ಷೇತ್ರದ ಧಮಾ೯ಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬ ಅಣ್ಣಾವ್ರ ಒಂದು ಹಾಡಿನಲ್ಲಿ ಕಾಣಿಸುತ್ತಾರೆ “ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ “
ಈ ಹಾಡು ಈಗಲೂ ಯಾವುದೇ ಮದುವೆ ಸಮಾರಂಭದಲ್ಲಿ ಹಾಕದೇ ಇರೊಲ್ಲ ಅಷ್ಟು ಅಥ೯ಪೂಣ೯ವಾಗಿದೆ, ಹೊಸ ಜೋಡಿಗೆ ಶುಭ ಹೇಳಲು.

ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಆಗೋ ನವ ಜೋಡಿಗಳಿಗೆ ತಾಳಿ ಮತ್ತು ಉಡುಗೊರೆ ನೀಡೋ ಸೀನ್, ಗಾಯಕರಾಗಿ ಅಣ್ಣಾವೃ, ಕ್ಲೂ ಸಿಕ್ಕಿಬೇ೯ಕಲ್ವಾ ಯಾವ ಮೂವಿ ಅಂತ.. “ಶ್ರಾವಣ ಬಂತು” ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 37 ವಷ೯ಗಳು 🌹💜💙🌹

ಪ್ರಮುಖ ಪಾತ್ರವಗ೯ ಊವ೯ಶಿ, ಶ್ರೀನಾಥ್, ಕೆ ಎಸ್ ಅಶ್ವಥ್, ಲೀಲಾವತಿ, ತೂಗುದೀಪ ಶ್ರೀನಿವಾಸ್, ಶಿವರಾಂ, ಎಂ ಎಸ್ ಉಮೇಶ್, ಉಮಾ ಶಿವಕುಮಾರ್…

2 ಜನ್ಮದ ಕಥೆ, ಕುಮಾರ್ -ಅಣ್ಣಾವೃ, ವಿಶ್ವ (ಶ್ರೀನಾಥ್). ಹಿಂದಿನ ಜನ್ಮದಲ್ಲಿ ಇಬ್ಬರೂ ಸ್ನೇಹಿತರು, ಕುಮಾರ್ ಕವಿ ಮತ್ತು ಗಾಯಕ, ವಿಶ್ವ ಒಬ್ಬ ನೃತ್ಯಗಾತಿ೯ ಊವ೯ಶಿ ಇಷ್ಟ ಪಡೋದು ಅದರೆ ನಟಿಗೆ ಈತನ ಮೇಲೆ ಇಷ್ಟವಿರಲ್ಲ ಬದಲಾಗಿ ವಿಶ್ವ ಹೇಳುವ ಕವಿತೆ ಮೇಲೆ ಇಷ್ಟ ವಿಶ್ವ ಪ್ರತೀ ಸಲ ಕುಮಾರ್ ಹತ್ತಿರ ಕವಿತೆ ಬರೆಸಿ ಆ ನಾಯಕಿಗೆ ಕೊಟ್ಟು ತಾನೇ ಬರೆದವನಂತೆ ಜಂಭ ಕೊಚ್ಚಿಕೊಳ್ಳೋದು, ಒಂದು ಬಾರಿ ಇದ್ದಕ್ಕಿದ್ದ ಹಾಗೆ ನಟಿ ತನ್ನನ್ನು ಹೊಗಳು ಎಂದಾಗ ತಬ್ಬಿಬ್ಬಾಗೋ ದೃಶ್ಯ ಕವಿತೆ ಬರೆಯೋ ಕುಮಾರ್ ಬಗ್ಗೆ ಗೊತ್ತಾಗೋದು, ಒಮ್ಮೆ ದೇವಸ್ಥಾನದಲ್ಲಿ ಆಕೆಯನ್ನು ನೋಡಿ ಮನಸೋತ ಅಣ್ಣಾವೃ “ಬಾನಿನ ಅಂಚಿಂದ ಬಂದೆ ” ಕುಮಾರ್ ರವರ ಗಾಯನ ನೋಡಿ ಇಷ್ಟ ಪಟ್ಪರು ಇಬ್ಬರಿಗೂ ಪ್ರೀತಿ ಉಂಟಾಗುತ್ತೆ, ವಿಶ್ವ ಈಕೆಯನ್ನು ಮದುವೆಯಾಗು ಅಂದಾಗ ತಾನೂ ಮೊದಲೇ ಒಬ್ಬರನ್ನು ಪ್ರೀತಿ ಮಾಡೋದಾಗಿ ಹೇಳೀ ನಂತರ ಕೋಪ ದ್ವೇಷಕ್ಕೆ ತಿರುಗಿ ಆತನನ್ನು ಸಾಯಿಸೋದು, ನಂತರ ತಿಳಿವುದು ಆ ಗಂಡು ಬೇರಾರು ಅಲ್ಲ ತನ್ನ ಮಿತ್ರ ಎಂದು ಸಂಕಟಪಡೋ ದೃಶ್ಯ. ತನ್ನ ತಪ್ಪನ್ನು ಅರಿತ ವಿಶ್ವ ಆತ್ಮಹತ್ಯೆ ಮಾಡಿಕೊಳ್ಳೋದು, ಇಬ್ಬರು ಪ್ರೇಮಿಗಳ ಪ್ರೀತಿ ತಾನೇ ಕೊಂದೆನೆಂಬ ತಪ್ಪು ಸದಾ ಕಾಡುವುದು.

ಕುಮಾರ್ ಗೆ ಯಾತ್ರೆ ಮಾಡೋದು ಇಷ್ಟ, ಅಲ್ಲಿ ವಿಶ್ವ ಕುಮಾರನನ್ನು ನೋಡಿ ಆಶ್ಚರ್ಯಚಕಿತನಾಗಿ ಹಿಂದಿನ ಜನ್ಮದ ಕಥೆ ಎಲ್ಲಾ ಹೇಳೋದು ನಂತರ ಪಟ್ಟಣಕ್ಕೆ ಬಂದು ಊವ೯ಶಿ – ಮೇರಿ ಕ್ರಿಶ್ಚಿಯನ್ ಹುಡುಗಿ ರವರನ್ನು ಪ್ರೀತಿಸೋದು, ಆಕೆಯ ಪ್ರೀತಿಯನ್ನು ಪಡೆಯಲು ಪಟ್ಪ ಕಷ್ಟ, ಲವ್ ಸಾಂಗ್ “ಮೆರಿ ಮೆರಿ ಮೆರಿ ಐ ಲವ್ ಯೂ” ಹಾಡು ಬರೋ ಸಾಲುಗಳು “ನನ್ನ ರೂಪ ಎಂದೋ ಕಂಡ ನೆನಪು ಬಾರದೆ, ನನ್ನ ಮಾತು ಎಲ್ಲೋ ಕೇಳಿದ..
ಕ್ರಿಶ್ಚಿಯನ್ ಧಮ೯ದವರಾದರೂ ಇಬ್ಬರನ್ನು ಒಂದು ಮಾಡೋದು ವಿಶ್ವ ತಾನು ಮಾಡಿದ ತಪ್ಪಿಗೆ ಈ ಇಬ್ಬರ ಜೋಡಿಗಳ ಪ್ರೀತಿಯನ್ನು ಗೆಲ್ಲಿಸೋಕೆ ಮಾಡೋ ತಂತ್ರಗಳು … ಮೇರಿ ಮತ್ತು ಕುಮಾರ್ ಇಬ್ಬರು ಮದುವೆ ಆಗ್ತಾರ, ಮೇರಿಗೆ ಬಲವಂತವಾಗಿ ಮದುವೆ ಆಗುತ್ತಾ, ಮೇರಿ ಹಿಂದಿನ ಜನ್ಮದ ಕಥೆ ಕೇಳಿ ಬದಲಾಗ್ತಾರ,
“ಇದೇ ರಾಗದಲ್ಲಿ ಇದೇ ತಾಳದಲ್ಲಿ” ಕುಮಾರ್ ಮೇರಿಯನ್ನು ಕೇವಲ ಒಪ್ಪಂದಕ್ಕಾಗಿ ಮದುವೆ ಆಗ್ತಾರಾ.
ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಚಿತ್ರ ನೋಡಿದ ಮೇಲೆ ತಿಳಿಯುವುದು.

ಚಿತ್ರದ ಇತರೆ ಮಾಹಿತಿಗಳು :
🌻ನಿದೇ೯ಶನ :ಸಿಂಗೀತಂ ಶ್ರೀನಿವಾಸ ರಾವ್.
🌹ನಿಮಾ೯ಪಕರು : ಕಾಮೇಶ್ವರ ರಾವ್.
🎵ಸಂಗೀತ : ಎಂ ರಂಗರಾವ್.
📟ಛಾಯಾಗ್ರಹಣ : ಎಸ್ ವಿ ಶ್ರೀಕಾಂತ್.
🎙ಸಂಕಲನ : ಪಿ ಭಕ್ತವತ್ಸಲಂ.
🔔ನಿಮಾ೯ಣ ಸಂಸ್ಥೆ : ಚಂದ್ರಕಲ ಆಟ್೯ ಎಂಟರ್ ಪ್ರೈಸಸ್.
🐿ಸಂಭಾಷಣೆ ಮತ್ತು ಸಾಹಿತ್ಯ : ಚಿ ಉದಯಶಂಕರ್.
💪ಸಾಹಸ : ವೈ ಶಿವಯ್ಯ
🎩ನೃತ್ಯ ನಿದೇ೯ಶನ : ತಾರಾ.

ಅಣ್ಣಾವೃ ಎಲ್ಲಾ ಹಾಡುಗಳಲ್ಲಿ ಬಹಳ ಚೆನ್ನಾಗಿ ಕಾಣಿಸ್ತಾರೆ, ಊವ೯ಶಿ ಕೂಡ ಮುದ್ದು ಮುಖದ ಗೊಂಬೆ.

ಶ್ರಾವಣ ಮಾಸ ಬಂದಾಗ ಆನಂದ ತಂದಾಗ..

ಬದುಕಿನಲ್ಲಿ ಜಾತಿ ಧರ್ಮ ಯಾವುದು ಇಲ್ಲ ಮನುಷ್ಯನ ಮಾನವಿಯತೆ ಒಂದೇ ಮುಖ್ಯ ಎಂದು ಸಂದೇಶ ಸಾರಿದ ಚಿತ್ರ ನನ್ನ ಆರಾಧ್ಯ ದೈವ ಅಭಿನಯದ ಸೂಪರ್ ಹಿಟ್ ಚಿತ್ರ, ಸುಮಧುರ ಗೀತೆಗಳ ಚಿತ್ರ, ಮನೆಮಂದಿ ಎಲ್ಲಾ ಕುಳಿತು ನೋಡುವಂತ ಚಿತ್ರ ” ಶ್ರಾವಣ ಬಂತು ” ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು ನರ್ತಕಿ, ನಂದ, ನಳಂದ, ನವರಂಗ್, ಗೀತಾಂಜಲಿ ಹಾಗೂ ರಾಜ್ಯದಾದ್ಯಂತ, ಇಂಥ ಸಾಮಾಜಿಕ ಕಳಕಳಿ ಇರುವ ಚಿತ್ರಗಳನ್ನು ನಮಗೆ ನೀಡಿದ ಅಣ್ಣಾವ್ರು ಅವರನ್ನು ಪಡೆದ ನಾವೇ ಧನ್ಯರು 🙏

Leave a Reply

Copyright © All rights reserved. | Newsphere by AF themes.