Secret lock ಓಪನಿಂಗ್ ಸೂನ್

ಕಲ್ಯಾಣ ಕರ್ನಾಟಕದ ಪ್ರತಿಭೆಗಳ ನೂತನ ಪ್ರಯತ್ನದಲ್ಲಿ ಮೊದಲ ಬಾರಿಗೆ ಬರಲಿರುವ ವೆಬ್ ಸೀರಿಸ್
ಕಲ್ಯಾಣ ಕರ್ನಾಟಕದ ಪ್ರತಿಭೆಗಳ ನೂತನ ಪ್ರಯತ್ನದ ಫಲವಾಗಿ ಮೊದಲ ಬಾರಿಗೆ ಒಂದು ವೆಬ್ ಸೀರೀಸ್ ಮೂಡಿ ಬರಲಿದ್ದು ಬನ್ನಿ ಈ ಚಿತ್ರದ ಕುರಿತು ತಿಳಿಯೋಣ. ಅದಕ್ಕೂ ಮೊದಲು ಈ ಚಿತ್ರದ ಕಾಗುಣಿತದ ಬಗ್ಗೆ ಹೇಳುತ್ತೇನೆ ಕೇಳಿ.
     ಈ ಚಿತ್ರದಲ್ಲಿ ನಟಿಸಿರುವ ಕಲಾವಿದರು ಬಹಳಷ್ಟು ಜನರಿಗೆ ಪರಿಚಯವಿಲ್ಲದಿದ್ದರೂ ಈ ಚಿತ್ರವನ್ನು ನೋಡಿದವರಿಗೆ ಒಂದು ವಿಶಿಷ್ಟ ಅನುಭವ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಈಗಾಗಲೇ ಪ್ರೀತಿ, ಸ್ನೇಹ ಮತ್ತು ಹಣದ ಸಂಬಂಧದ  ಕುರಿತು ಹೊಂದಿರುವಂತಹ ಚಿತ್ರವನ್ನು ಮಾಡಿರುವ ನಮ್ಮ ಪ್ರಣಂ ಚಿತ್ರ ತಂಡವು ಒಂದು ಹೊಸತನವನ್ನು ಸೃಷ್ಟಿಸಲು ದಿಟ್ಟ ಹೆಜ್ಜೆಯೆನ್ನಿಟ್ಟಿದೆ. ಅದುವೇ ಈ ವೆಬ್ ಸೀರೀಸ್.
      ವೆಬ್ ಸೀರೀಸ್ ಅಂದರೆ ಇದೇ ರೀತಿ ಇರಬೇಕು, ವಿಭಿನ್ನವಾಗಿರಬೇಕು ಮತ್ತು ಕುತೂಹಲವನ್ನು ಸೃಷ್ಟಿಸಲು ಸಜ್ಜಾಗಿದ್ದು ಈಗಾಗಲೇ ಮೊದಲ ಭಾಗದ ಹಿನ್ನಲೆ ಕಥೆಯನ್ನು ಕೇಳಿದವರು ಸೆಕೆಂಡ್ ಎಪಿಸೋಡ್ ಯಾವಾಗ ಬರುತ್ತದೆಂದು ಕಾಯುವ ಕುತೂಹಲ ಮೂಡಿಸುವ ಚಿತ್ರವಾಗಿದೆ.
     ಚಿತ್ರಗಳಿಗೆ ಹೆಸರನ್ನು ಇಡಲು ನಾವು ನೀವುಗಳೆಲ್ಲ ಬಹಳಷ್ಟು ವೆರೈಟಿ ಹೆಸರುಗಳನ್ನು ಕೇಳಿರುತ್ತೇವೆ, ನೋಡಿರುತ್ತೇವೆ, ಆದರೆ ನಮ್ಮ ಪ್ರಣಂ ಟೀಂ ಸ್ವಲ್ಪ ಡಿಫರೆಂಟ್, ಇಷ್ಟೆಲ್ಲಾ ಹೇಳುತ್ತಿರುವ ಈ ಚಿತ್ರದ ಹೆಸರು ಸೀಕ್ರೆಟ್ ಲಾಕ್ (ಭಾಗ 1), ಹೆಸರನ್ನು ಕೇಳಿದವರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಕಥೆಯೇ ವಿಭಿನ್ನವಾಗಿರುವ ಕಾರಣ ಟೈಟಲ್ ಕೂಡ ವಿಭಿನ್ನವಾಗಿರಬೇಕು, ಅಲ್ವಾ, ಆದ್ದರಿಂದ ಈ ಟೈಟಲ್ ನ್ನು ಫೈನಲ್ ಮಾಡಲಾಗಿದೆ. ನಮ್ಮ ಚಿತ್ರದಲ್ಲಿ ಕೂಡ ಫೈಟ್, ಸೆಂಟಿಮೆಂಟ್, ಹಾಸ್ಯ  ಎಲ್ಲವೂ ಇದ್ದು ಭರಪೂರ ಮನರಂಜನೆ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲ. ನಮಗೆ, ನಿಮಗೆ ಎಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಚಿತ್ರದಲ್ಲಿ, ವೆಬ್ ಸೀರಿಸ್ ನಲ್ಲಿ ಅಷ್ಟೇ ಅಲ್ಲ ಶಾರ್ಟ್ ಮೂವಿಯಲ್ಲಿ ಕೂಡ ಹೀರೋ, ಹೀರೋಯಿನ್ ಇದ್ದೇ ಇರುತ್ತಾರೆ. ಆದರೆ ನಮ್ಮ ಸೀಕ್ರೆಟ್ ಲಾಕ್ ವೆಬ್ ಸೀರೀಸ್ ನಲ್ಲಿ ಒಂದು ಎಡವಟ್ಟು ಆಗಿದ್ದು ಅದು ಏನು ಗೊತ್ತಾ? ಈಗಾಗಲೇ ನಮ್ಮ ಚಿತ್ರ ತಂಡ ಈ ಚಿತ್ರವನ್ನು ನೋಡಿದ್ದು ಇದುವರೆಗೂ ನಮಗೆ ಹೀರೋ, ಹೀರೋಯಿನ್ ಯಾರು ಎಂದು ತಿಳಿಯಲು ಸಾಧ್ಯವಾಗಿಲ್ಲ. ಇದನ್ನೆಲ್ಲ ಕೇಳಿ  ಇದಲ್ಲ ಏನು ಎಂದು ನಿಮಗೆ ಯೋಚನೆ ಬಂದಿರಬೇಕಲ್ಲ?  ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.
ಇದೇ ಬರುವ ಜನೆವರಿ 26 ರಂದು ಕೇವಲ 20 ನಿಮಿಷ ಕಾಲಾವಕಾಶ ಬಿಡುವು ಮಾಡಿಕೊಳ್ಳಿ, ಅದೇ ದಿನ ನಮ್ಮ ವೆಬ್ ಸೀರೀಸ್ ನ ಮೊದಲ ಭಾಗವಾದ ಸೀಕ್ರೆಟ್ ಲಾಕ್ (ಭಾಗ 1) ಚಿತ್ರವು ಅಂತರ್ಜಾಲದಲ್ಲಿ ಬಿಡುಗಡೆಯಾಗಲಿದ್ದು ತಾವುಗಳು ತಪ್ಪದೇ ನೋಡಿ ಹಾಗೂ ನಮ್ಮ ಯೂಟ್ಯೂಬ್ ಚ್ಯಾನಲ್ ನ್ನು ತಪ್ಪದೇ subscribe ಮಾಡಿ,ಲೈಕ್ ಮಾಡಿ ಮತ್ತು ಶೇರ್ ಮಾಡಿ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply