25/11/2022

CHITRODYAMA.COM

SUPER MARKET OF CINEMA NEWS

ಗಾಳಿಪಟ ಹಾರಿಸೋಕೆ ಬಂದವರು ಫೇಲಾಗೋದ್ರೂ?..ಲಬೋ ಲಬೋ

1 min read

ಪರೀಕ್ಷೆಯಲ್ಲಿ ಫೇಲ್ ಆದಂತಹ ಮಾಹನುಭಾವರ ಮನೋವೇದನೆಯನ್ನ ಕುರಿತು, ಹಾಸ್ಯಭಾರಿತವಾಗಿ ಹಾಡು ರಚಿಸುವ ಉದಾರವಾದ ಮನೋಭಾವ “ಯೋಗರಾಜ್ ಭಟ್” ಅವರಿಗೆ ಮಾತ್ರ ಇರಲು ಸಾಧ್ಯ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ….

ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್, ಅನಂತ್ ನಾಗ್, ದಿಗಂತ್, ಪವನ್ ಕುಮಾರ್, ಶರ್ಮಿಲಾ ಮಾಂಡ್ರೆ, ವೈಭವಿ ಶಾಂಡಿಲ್ಯಾ ಮತ್ತು ನಿಷ್ವಿಕಾ ನಾಯ್ಡು ಸೇರಿದಂತೆ ದೊಡ್ಡ ತಾರಾಗಣವೇ ಹೊಂದಿರುವ ಗಾಳಿಪಟ-2 ಚಿತ್ರದ ಮೊದಲ ಹಾಡು ಹೊರಬಂದು ಬಾರಿ ಸದ್ದನ್ನೇ ಮಾಡಿದೆ. ಹಾಡು ಯಾಕೆ ಮಾಮೂಲಿಗಿಂತ ಹೆಚ್ಚು ಸದ್ದು ಮಾಡ್ತಿದೆ ಅನ್ನೊ ಪ್ರಶ್ನೆಗೆ ಉತ್ತರ ಇಷ್ಟೇ ಹಾಡು ಪ್ರಾರಂಭ ಆಗೋದೇ “ಲಬೋ ಲಬೋ” ಅಂತ ಹೀರೋಗಳು ಬಾಯಿ ಬಡ್ಕೊಳ್ಳೋದ್ರಿಂದ.. ಲಾಸ್ಟ್ ಬೆಂಚಿನ ವಿದ್ಯಾರ್ಥಿಗಳಿಗೆ ಸಿಂಹ ಸ್ವಪ್ನ ಅಥವಾ ದುಃಸ್ವಪ್ನವೆಂದರೆ ಕ್ಲಿಷ್ಟವಾದ ಪ್ರಶ್ನಪತ್ರಿಕೆಯು ಕಣ್ಣೆದುರು ಬಂದಾಗ ನಂತರ ಸಿಂಗಲ್ ಡಿಜಿಟ್ಟಿನ ಸರಮಾಲೆಯ ಹೊತ್ತಿರುವ ರಿಪೋರ್ಟ್ ಕಾರ್ಡ್ ಕೈ ತಲಪೋ ಕ್ಷಣ, ಈ ವ್ಯಥೆಯನ್ನ ವಿನೋದಮಯವಾಗಿ ಭಟ್ರು ವಿವರಿಸೋರೆ ಅರ್ಜುನ ಜನ್ಯ ಅದಕ್ಕೆ ರಾಗ ಹಾಕವ್ರೆ…

Galipata 2

ಆಡು ಭಾಷೆಯಲ್ಲಿ ರಚಿತವಾದ ಈ “ಪರೀಕ್ಷೆಯ” ಹಾಡು ಈಗಾಗಲೇ ಎಲ್ಲರ ಬಾಯಲ್ಲಿ ಹರಿದಾಡಿದೆ. ಹಾಗೆ ಕಾಲೇಜ್ ಹುಡುಗರ ಪಾಲಿನ ಆಂಥೇಮ್ ಕೂಡ ಆಗಿದೆ. ಈ ಹಾಡಲ್ಲಿ ಶಾಲಾ ವಿದ್ಯಾರ್ಥಿಗಳಾಗಿ ಪ್ರತ್ಯಕ್ಷವಾಗಿರೋ ಗಣೇಶ್, ದಿಗಂತ್, ಪವನ್ ಕುಮಾರ್ ಮತ್ತು ಬುಲ್ಲೆಟ್ ಪ್ರಕಾಶ್ ಬಹಳ ಲವ ಲವಿಕೆಯಿಂದಿರುವ ಮುಗ್ಧ ತರುಣರಾಗಿದ್ದಾರೆ.

ಸಿನಿಮಾದಲ್ಲಿ ಅನಂತ್ ನಾಗ್ ಮೇಷ್ಟ್ರಾಗಿ ಬರ್ತಾರೆ, ಮೇಷ್ಟ್ರು ಬಂದಮೇಲೆ
ಸಿನಿಮಾದ ತೂಕಾನ-ಆಯಾಮಾನ ದೊಡ್ಡದಾಗಿಸದೆ ಇರ್ತಾರ್ಯೆ ಇದು ಇಡೀ ಚಿತ್ರ ತಂಡದ ನಂಬಿಕೆ.

ನಿರ್ಮಾಪಕರಾದ ರಮೇಶ್ ರೆಡ್ಡಿ ಅವರಿಗೆ ಇದು ಐದನೇ ಸಿನಿಮಾ, ಈ ಸಿನಿಮಾದ ಮೂಲಕ ದೊಡ್ದ ಯಶಸ್ಸು ಸಾಧಿಸಲೇಬೇಕೆಂಬ ಮಹದಾಶಯ ಅವರನ್ನ ಆವರಿಸಿದೆ, ಅದಕ್ಕೆ ಅವರ ಮುಗ್ಧತೆ ಒಳ್ಳೆ ತನ ಖಂಡಿತ ಸಾತ್ ನೀಡಲಿದೆ.

galipata 2

ಇನ್ನು ಮಹಿಳಾ ಮಣಿಯರ ತಂಡವು ಗ್ಲಾಮರ್ ಹೆಚ್ಚಿಸೋದಕ್ಕೆ ಅಷ್ಟೇ ಅಲ್ಲ ಸಿನಿಮಾ ಗ್ರಾಮರನ್ನ ಕೂಡ ಅಂದವಾಗಸ್ತಾರೆ.

ಭಟ್ರು 2ನೆ ಸಾರ್ತಿ ಪಟಕ್ಕೆ ಸೂತ್ರ ಹಾಕಿ ಭಾವವೆಂಬ ದಾರದ ಮೂಲಕ ಮುಗಿಲ ಮುಟ್ಟಿಸಲು ಸಜ್ಜಾಗಿದ್ದಾರೆ.

ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೇ, ಗುಡಿಯಲ್ಲಿ ಮಂಗಳಾರತಿಯ ನಂತರ ತೀರ್ಥ ಪಡೆಯುವುದು ಹೇಗೆ ಪದ್ಧತಿಯಾಗಿದೆಯೋ ಹಾಗೆ ಭಟ್ಟರ ಸಿನಿಮಾದಲ್ಲಿ ಜಯಂತ ಕಾಯ್ಕಿಣಿ ವಿರಚಿತ ಹಾಡು- ಸಾಹಿತ್ಯ ಕೂಡ ಒಂದು ರೀತಿಯ ಪದ್ದತೀಯೆ ಆಗಿಹೋಗಿದೆ, ಆ ಹಾಡನ್ನ ಕಿವಿ ತುಂಬಿಸ್ಕೊಳ್ಳೋಕೆ ಕಾಯ್ತಾ ಇದ್ದೀವಿ.

Leave a Reply

Copyright © All rights reserved. | Newsphere by AF themes.