28/01/2023

CHITRODYAMA.COM

SUPER MARKET OF CINEMA NEWS

ಚಿತ್ರರಂಗಕ್ಕೆ ಬಂದು 30 ವರ್ಷಗಳ ಪಯಣ ಸವೆಸಿದ ಶಾರುಖ್ ಖಾನ್,

ಬಾಲಿವುಡ್ಡಿನ ಖ್ಯಾತ ನಟ ಶಾರುಖಾನ್ ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಸಂದಿವೆ, ಇದೆ ಖುಷಿಯಲ್ಲಿ ತಮ್ಮ ಮುಂದಿನ ಚಿತ್ರ ಪಠಾಣ್ ಸಿನಿಮಾದ ಫಸ್ಟ್ ಲುಕ್ ಹಂಚಿಕೊಡಿದ್ದಾರ.

ಉದ್ದ ಕೂದಲು, ಗಡ್ಡ ಬಿಟ್ಟಿರುವ, ತಮ್ಮ ಪಠಾಣ್ ಸಿನಿಮಾದ ಚಿತ್ರವನ್ನು ಹಂಚಿಕೊಂಡಿದ್ದಾರೆ, ಚಿತ್ರರಂಗಕ್ಕೆ ಬಂದು 30 ವರ್ಷಗಳು ಸಂದಿದ್ದು, ಅದು ಹೇಗೆ ಕಳೆದನೆಂದು ಗೊತ್ತೇ ಆಗಲಿಲ್ಲ. ಅದಕ್ಕೆಲ್ಲ ನೀವು ತೋರಿಸಿದ ಪ್ರೀತಿ, ವಿಶ್ವಾಸವೇ , ಕಾರಣ ಎಂದು ಈ ಸಂದರ್ಭದಲ್ಲಿ ಹಂಚಿಕೊಡಿದ್ದಾರೆ,

ಬಾಲಿವುಡ್ನಲ್ಲಿ ತಮ್ಮದೇ ಸಹಜ ಅಭಿನಯದಿಂದ ಖ್ಯಾತಿ ಹೊಂದಿರುವ ನಂತರದ ಶಾರುಖಾನ್ ರ ಹೊಸ ಚಿತ್ರ ಪಠಾಣ್ ಮುಂದಿನ ವರ್ಷ ತೆರಯ ಮೇಲೆ ರಾರಾಜಿಸಲಿದೆ ಶಾರುಖಾನ್ ಚಿತ್ರಗಳೆಂದರೆ, ಪ್ರೀತಿ , ನವಿರಾದ ಹಾಸ್ಯ , ಕುಟುಂಬ ಸಮೇತ ನೋಡಬಹುದಾದ ಚಿತ್ರಗಳಾಗಿರುತ್ತದೆ,

ಅವರ ಎಲ್ಲ ಚಿತ್ರದಲ್ಲೂ ಅಂದರೆ ಕರಣ್ ಅರ್ಜುನ್ ನಲ್ಲಿ ತಾಯಿ ಪ್ರೀತಿಯ ಬಗ್ಗೆ ಕುರಿತಾದ ಚಿತ್ರವಾದರೆ, ಕುಚ್ ಕುಚ್ ಹೋತ ಹಾಯ್ ನಲ್ಲಿ ನವಿರಾದ ಪ್ರೇಮಕಥೆ, ಹೀಗೆ ಶಾರುಖಾನ್ ಸಿನಿಮಾಗಳು ವೈವಿಧ್ಯಮಯವಾಗಿರುತ್ತದೆ,

ಸರ್ಕಸ್ ಎಂಬ ಟಿವಿ ಸೀರಿಯಲ್ ನಿಂದ ಬಂದ ಒಬ್ಬ ನಟ ಈ ಪರಿಯಾಗಿ ಬೆಳದದ್ದು ಒಂದು ಇತಿಹಾಸ, ಒಟ್ಟಿನಲ್ಲಿ ಶಾರುಖಾನ್ ರವರು ಮುಂದೆ ಇನ್ನು ಹೆಚ್ಚು ಚಿತ್ರಗಳನ್ನು ಕೊಟ್ಟು ಸಿನಿಮಾ ರಸಿಕರಿಗೆ ಉಣಬಡಿಸಲೆಂದು ಹಾರೈಸುತ್ತೇವೆ

Leave a Reply

Copyright © All rights reserved. | Newsphere by AF themes.