02/12/2022

CHITRODYAMA.COM

SUPER MARKET OF CINEMA NEWS

ನಾನು ಕ್ಷೇಮ ಎಂದ ನಟ ದಿಗಂತ್; ಚಿತ್ರೀಕರಣದಲ್ಲಿ ಬಾಗಿಯಾಗಲು ತವಕ.

diganth

diganth

ಇತ್ತೀಚೆಗೆ ಅಪಘಾತಕ್ಕೆ ಈಡಾಗಿ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತರವರು ಈಗ ಆರಾಮಾಗಿದ್ದು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆ ಬಗ್ಗೆ ಒಂದು ವರದಿ. ಇತ್ತೀಚಿಗೆ ಗೋವಾದಲ್ಲಿ ಸೋಮರ್ ಸಾಲ್ಟ್ ಹೊಡೆಯಲು ಹೋಗಿ ಬೆನ್ನು ಮತ್ತು ಕತ್ತಿಗೆ ಪೆಟ್ಟು ಮಾಡಿಕೊಂಡಿದ್ದ, ನಟ ದಿಗಂತರವರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದು,

ಈಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅಣಿಯಾಗಿದ್ದಾರೆ. ಎಡಗೈಯೆ ಅಪಘಾತಕ್ಕೆ ಕಾರಣ ಎಂಬ ಸಿನಿಮಾದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಇದರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು. ಇನ್ನೇನು ಚಿತ್ರದ ಚಿತ್ರೀಕರಣ ಪ್ರಾರಭಬಾಗಲಿದೆ. ನಟ ದಿಗಂತರವರು ಆಗ ಆದ ಅಪಘಾತದಿಂದ ಆಘಾತಕ್ಕೆ ಒಳಗಾಗಿದ್ದರು.

ಗೋವಾದಲ್ಲಿ ನಡೆದ ಘಟನೆಯಿಂದ ಪತ್ನಿ ಐದ್ರಿತಾರವರು ಕೂಡ ಭೀತಿಗೊಳಗಾಗಿದ್ದರು. ನಂತರ ಅವರನ್ನು ಗೋವಾದಿಂದ ಬೆಂಗಳೂರಿಗೆ ಕರೆ ತಂದು ಅಪೊಲ್ಲೋ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿಸ್ಥೆಯನ್ನು ಮಾಡಿ, ಮನೆಯಲ್ಲಿಯೇ ವಿಶ್ರಮಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು. ಕೆಲವು ದಿನಗಳ ನಂತರ ಈಗ ಕನ್ನಡದ ದೂಧ್ ಪೇಡ ಎಂದೇ ಖ್ಯಾತರಾದ ದಿಗಂತ್ರವರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ವೈದ್ಯರು ಅವರಿಗೆ ಎಲ್ಲ ತರದ ವ್ಯಾಯಾಮಗಳನ್ನು ಮಾಡಲು ಸಲಹೆಯನ್ನು ನೀಡಿದ್ದಾರೆ. ಈಗ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಉತ್ಸಾಹದಲ್ಲಿದ್ದಾರೆ. ಒಟ್ಟಿನಲ್ಲಿ ಮತ್ತೆ ಚಿತ್ರೀಕರಣಕ್ಕೆ ಪಾಲ್ಗೊಳ್ಳಲು ಸಿದ್ದರಾದ, ಅವರಿಗೆ ಚಿತ್ರೋದ್ಯಮ.ಕಾಂ ಶುಭ ಹಾರೈಸುತ್ತದೆ

Leave a Reply

Copyright © All rights reserved. | Newsphere by AF themes.