30/11/2022

CHITRODYAMA.COM

SUPER MARKET OF CINEMA NEWS

ಜೈಲರ್ ಜೊತೆ ಕನ್ನಡಿಗರು

1 min read

ಸೂಪರ್ ಸ್ಟಾರ್ ರಜನಿಕಾoತ್ (rajnikant) ಅಭಿನಯದ “ಜೈಲರ್” (jailer) ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (shivarajkumar) ಚಿತ್ರೀಕರಣದಲ್ಲಿ ಭಾಗಿಯಗಲಿದ್ದಾರೆ. ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಶಿವಣ್ಣ, ರಜಿನಿಯವರೊಟ್ಟಿಗೆ ಪರದೆ ಹಂಚಿಕೊಂಡು ಬಹು ಮುಖ್ಯ ಪಾತ್ರ ವಹಿಸಲಿದ್ದಾರೆ.

ಇದರ ಜೊತೆಯಲ್ಲೇ ಕನ್ನಡದ ಮತ್ತೋರ್ವ ಪ್ರತಿಭಾನ್ವಿತ ನಟರಾದ “ಹರಿರೀಶ್ ರಾಜ್” (harish raj) ಕೂಡ ಜೈಲರ್ ಸಿನಿಮಾದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಕೆ.ಜಿ.ಎಫ್ (kgf) ಸಿನಿಮಾದಲ್ಲಿ ಯಶ್ (yash) ಜೊತೆ “ಚಾಚಾ” ಪಾತ್ರದಲ್ಲಿ ಕಾಣಿಸಿಕೊಂಡ ತರುವಾಯ ಹರೀಶ್ ರಾಜ್ ಅವರ ಖ್ಯಾತಿಯು ಕನ್ನಡ ಸಿನಿ ಪ್ರೇಕ್ಷಕರಿಗೆ ಸೀಮಿತವಾಗಿರದೆ, ಭಾರತದಾದ್ಯಂತ ಚಿರಪರಿಚಿತರಾದರು. ಕೆಲವು ವಾರಗಳ ಹಿಂದಷ್ಟೆಯೇ ತಾನು ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಾಹಿತಿಯನ್ನು ಖಾತ್ರಿ ಪಡಿಸಿದ್ದರು. ಜೊತೆಗೆ ನಟನೆಗೆ ಎಂದಿಗೂ ಫುಲ್ ಸ್ಟಾಪ್ ಇಡೋಲ್ಲ ಅನ್ನೋದನ್ನ ಕೂಡ ಒತ್ತಿ ಹೇಳಿದ್ರು ಹರೀಶ್ ರಾಜ್. ಈತ ಅಭಿನಯಿಸಿದ ಬಹುಪಾಲು ಚಿತ್ರಗಳಲ್ಲಿ ಮಾಡಿದ್ದೆಲ್ಲಾ ವಿಲ್ಲನ್ ಪಾತ್ರವೇ.

ಆದ್ರೆ ಜೈಲರ್ ಚಿತ್ರದ ಇವರ ಪಾತ್ರದ ಬಗ್ಗೆ ಯಾವ ಸುಳಿವು ಬಿಟ್ಟಕೊಟ್ಟಿಲ್ಲಾ. ಶಿವಣ್ಣ ಅವರ “ಓಂ” ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹರೀಶ್ ಇದೀಗ ಅದೇ ಶಿವಣ್ಣ ಜೊತೆ ಸೇರಿ ಮೊದಲ ಬಾರಿ ತಮಿಳಿನಲ್ಲಿ ಅಭಿನಯಿಸುತ್ತಿರುವುದು ಕಾಕತಾಳಿಯವೇ ಸರಿ. ಒಟ್ಟಿನಲ್ಲಿ ಸಿಕ್ಕಿರುವ ಈ ದೊಡ್ಡ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿದ್ದಲ್ಲಿ ಹರೀಶ್ ರಾಜ್ ವೃತ್ತಿ ಜೀವನದ ಮುಂದಿನ ದಿನಗಳು ಸ್ವರ್ಣಮಯವಾಗಿರುವುದರಲ್ಲಿ ಅನುಮಾನವೇ ಇಲ್ಲಾ.

Leave a Reply

Copyright © All rights reserved. | Newsphere by AF themes.