26/11/2022

CHITRODYAMA.COM

SUPER MARKET OF CINEMA NEWS

ಕನ್ನಡದಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾ ಮಾಡ್ತಾರೆ!!

1 min read

Anushka Shetty

ನಂಜನಗೂಡಿನ ಮೂಲ ನಿವಾಸೀಯಾಯಾದ ಶ್ರೀಮತಿ ನಾಗರತ್ನಮ್ಮ ಅವರು ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.. ಅದು ಕೇವಲ ಬೆರಳೆಣಿಕಯಷ್ಟು ಜನರಿಗೆ ಮಾತ್ರ ತಿಳಿದಿರುವುದು. ಆಕೆ ಮಹಾನ್ ನೃತ್ಯಗಾರ್ತಿ,ವಿದುಷಿ.ಓರ್ವ ದೇವದಾಸಿಗೆ ಜನಿಸಿದ್ದು ಜೀವನದಲ್ಲಿ ದೊಡ್ಡ ದೊಡ್ಡ ಸುಂಟರಗಾಳಿಗಳನ್ನು ಎದುರಿಸಿದ್ದು,ಎಂದಿಗೂ ಕುಗ್ಗದೆ ದಿಟ್ಟಿವಾಗಿ ಸಾಧನೆ ಹಾದಿಯಲ್ಲಿ ಉತ್ತುಂಗವನ್ನು ತಲುಪಿದ ಮಾನಿನಿ ಈಕೆ.

ಕರ್ನಾಟಕ ಸಂಗೀತ ಜನಕರಾದ “ತ್ಯಾಗರಾಜ”ರಿಗಾಗಿ ತಮಿಳುನಾಡಿನಲ್ಲಿ ಗುಡಿಯೊಂದನ್ನು ಕಟ್ಟಿಸುವ ಸಲುವಾಗಿ ತಮ್ಮ ಇಡೀ ಆಸ್ತಿಯನ್ನೆ ಮುಡಿಪಾಗಿಟ್ಟ ಮಾಹನ್ ಚೇತನ, “ತನು ಮನ ಧನ” ವನ್ನೂ  ಅರ್ಪಿಸಿ ಅಮರರಾಗಿದ್ದರೆ..” ಬೆಂಗಳೂರಿನನಾಗರತ್ನಮ್ಮ”.

ನಟಿ ಅನುಷ್ಕಾ ಶೆಟ್ಟಿ  ಪರಿಪೂರ್ಣವಾದ ಕನ್ನಡ ಸೊಗಡು ಮತ್ತು ಕನ್ನಡಿಗರಿಗೆ ಹೆಮ್ಮೆ ತರುವ ಕಥೆಯಲ್ಲಿ ನಟಿಸುತ್ತಿದ್ದಾರೆ.”ಅನುಷ್ಕಾ ಈಗ ನಾಗರತ್ನಮ್ಮ”. ಬೆಂಗಳೂರು ನಾಗರತ್ನಮ್ಮ ಅವರ ಜೀವನದ ಕಥೆ ಸಿನಿಮಾ ರೂಪದಲ್ಲಿ ಬರಲಿದೆ..

ಅರುಂಧತಿ, ಭಾಗಮತಿ, ರುದ್ರಮ್ಮದೇವಿ ಅಂತಹ ನಾಯಕಿಪ್ರಧಾನ ಸಿನಿಮಾದಲ್ಲಿ ನಟಿಸಿ,ಜನರ ಚಪ್ಪಾಳೆ ಗಿಟ್ಟಿಸಿಕೊಂಡು,ಗಲ್ಲ ಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಕಂಡು ಬಂದಿದೆ.ಈಗ ಕಲಾ ಸಂಸ್ಕೃತಿಯ ಬೀಜ ಬಿತ್ತಿ ಅದನ್ನು ಹೆಮ್ಮರವಾಗಿ ಬೆಳಸಿrದ ವನಿತೆಯ ಕಥೆಯಲ್ಲಿ ಯಾವ ರೀತಿಯಾದ ಜಾದು ಮಾಡ್ತಾರೋ.

ಕನ್ನಡತಿಯೇ ಆದ ಅನುಷ್ಕಾ ಸೌತ್ ಇಂಡಿಯನ್ ಸಿನಿಮಾದ ಬಹು ಬೇಡಿಕೆಯ ನಟಿ.ಒಳ್ಳೆ ಕಥೆ ಸಿಕ್ಕಿದರೆ ಖಂಡಿತ ಕನ್ನಡಲ್ಲಿ ನಟಿಸುವುದಾಗಿ ಹಲವು ಬಾರಿ ಸಂದರ್ಶನಗಳಲ್ಲಿ ಅನುಷ್ಕಾ ಹೇಳಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.ಚಿತ್ರಕ್ಕೆ ಸಂಬಂಧ ಪಟ್ಟ ಹಾಗೆ ಇನ್ನಷ್ಟು ಮಾಹಿತಿಗಳು ಸದ್ಯದಲ್ಲೇ ಹೊರಬರಲಿದೆ..

Leave a Reply

Copyright © All rights reserved. | Newsphere by AF themes.