ಅಂಧಾಧುನ್: ಗಳಿಗೆಗೊಂಡು ತಿರುವು ಪಡೆಯುವ ಥ್ರಿಲ್ಲರ್!- ವಿಮರ್ಶೆ~~~~~~~~~~~~~~~~~~~~~~~~~~~~~~~~~~~~~~
ಈಗ ಪ್ರದರ್ಶನವಾಗುತ್ತಿರುವ ಹಿಂದಿ ಚಿತ್ರ ಅಂಧಾಧುನ್ (ಕುರುಡನ ರಾಗ)- ಒಂದು ಉಸಿರು ಬಿಗಿ ಹಿಡಿದು ನೋಡುವಂತಾ ಉತ್ತಮ ದರ್ಜೆ ಯ ಥ್ರಿಲ್ಲರ್. ಕುರುಡನೊಬ್ಬನು ಕೊಲೆ ಮಾಡಿದ್ದನ್ನು ’ನೋಡಿ’ದರೆ, ಅವನಿಗೆ ಅದು ಗೊತ್ತಾಗಿಬಿಟ್ಟರೆ, ಅದು ಮಿಕ್ಕವರಿಗೂ ತಿಳಿದುಬಿಟ್ಟರೆ ಆಗ ನಡೆಯುವ ಗೋಜಲು, ಗೊಂದಲ, ಜಟಿಲ ತಿರುವುಗಳನ್ನು- ಶ್ರೀರಾಮ್ ರಾಘವನ್ –ನಿರ್ದೇಶಕ ಸಮರ್ಥವಾಗಿ ತೂಗಿಸಿಕೊಂಡು ಹೋಗಿದ್ದಾರೆ. ಲೋಭ, ಕಾಮ, ದುರಾಸೆ, ಅವಸರ ಇವೆಲ್ಲ ದೌರ್ಬಲ್ಯ ಮತ್ತು ಅಸಹಾಯಕತೆಗಳನ್ನು ತೋರುವ ಪಾತ್ರಗಳು ನಮ್ಮನ್ನು ಮುಂದೇನು? ಎಂದು ಊಹಿಸಲಾಗದಂತೆ ಮಾಡುತ್ತವೆ. ಕೊನೆಯ ಸೀನಿನ ಕೊನೆ ಫ್ರೇಮಿನವರೆಗೂ ನೋಡಬೇಕು, ಹಾಗೆ ಚಿತ್ರಿಸಿ ನಿಲ್ಲಿಸುತ್ತಾರೆ. ವಾಹ್! ಇದಕ್ಕಿಂತಾ ಹೆಚ್ಚು ಕತೆ ಬಿಟ್ಟುಕೊಡಲಾರೆ. ನೋಡಿ ಆನಂದಿಸಿ.
ತಾರಾಗಣದಲ್ಲಿ ನಾಯಕನಾಗಿ ಆಯುಷ್ಮಾನ್ ಖುರಾನಾ, ಟಬು, ರಾಧಿಕಾ ಅಪ್ಟೆ, ಹಿರಿಯ ನಟ ಅನಿಲ್ ಧವನ್-ಎಲ್ಲರೂ ಅಧ್ಭುತವಾದ ನಟನೆ ತೋರಿಸಿದ್ದಾರೆ.
ಅನಿಲ್ ಧವನರ 70ರ ದಶಕದ ಹಿಂದಿ ಚಿತ್ರಗಳ ರಫಿ, ಕಿಶೋರ್ ಕುಮಾರ್ ಹಾಡುಗಳನ್ನು ಹಾಗೇ ಮರು ಬಳಕೆ ಮಾಡಿರುವುದು ಇನ್ನೊಂದು ವಿಶೇಷ.ಕುರುಡ ಸಂಗೀತಗಾರ ಪಿಯಾನೋ ವಾದಕನ ಕತೆಯಾದರಿಂದ ಸಂಗೀತ (ಅಮಿತ್ ತ್ರಿವೇದಿ ಇತರರು) ಸೂಕ್ತವಾಗಿ ಕತೆಯಲ್ಲಿ ಹಾಸುಹೊಕ್ಕಂತಿದೆ.ನನ್ನ ರೇಟಿಂಗ್:4/5
https://www.imdb.com/title/tt8108198/