Bad Genius

ಥಾಯ್ ಚಿತ್ರ.
೨೦೧೭.
IMDB : 7.6

ಸತ್ಯಕತೆಯಂತೆ.
ಲಿನ್ ಪ್ರತಿಭಾವಂತೆ..
ಶಿಕ್ಷಕ ಅಪ್ಪನ‌ ಜೀನಿಯಸ್ ಮಗಳು.ಮೌಖಿಕ ಪರೀಕ್ಷೆಯಲ್ಲಿ ತನ್ನ ಮ್ಯಾತ್ ಪ್ರತಿಭೆಯಿಂದ ಸ್ಕಾಲರ್ಶಿಪ್ ಗಿಟ್ಟಿಸಿಕೊಂಡು ಹಳೆ ಶಾಲೆಯಿಂದ ಹೊಸ ಹೈಸ್ಕೂಲ್ ಸೇರಿಕೊಳ್ಳುವ ಗಟ್ಟಿಗಿತ್ತಿ.

ಮೊದಲ ದಿನ‌ , ಗುರುತು ಚೀಟಿಗೋಸ್ಕರ ಭಾವಚಿತ್ರ ತೆಗೆಯುವಲ್ಲಿ ಸಿಗುವವಳು ಚೆಲ್ಲು ಹುಡುಗಿ ಗ್ರೇಸ್.ಅವಳಿಗೊಬ್ಬ ಶ್ರೀಮಂತ ಬಾಯ್‌ಫ್ರೆಂಡ್.ಅವನಿಗೊಂದಷ್ಟು ಅವನಂತೆಯೇ ಇರುವ ದಡ್ಡ ಮಿತ್ರರು.
ಅವಳಿಗೀಗ ಒಂದು ವಿಷಯ ಗೊತ್ತಾಗಿದ್ದು , ಅಪ್ಪ ತನ್ನಲ್ಲಿ ಮುಚ್ಚಿಟ್ಟು ಸಂದಾಯ ಮಾಡಿದ ಒಂದಷ್ಟು extra ಫೀಸು.
ಮೊದಲಿಗೆ ಗ್ರೇಸ್‌ಳ ದೋಸ್ತಿಯಿಂದಾಗಿ ಹಣ ಗಳಿಸುವ ದಾರಿಯಾಗಿ ಆಕೆ ಕಂಡುಕೊಂಡಿದ್ದು ಪರೀಕ್ಷೆಯಲ್ಲಿ ಚೀಟಿಂಗ್..ಅದಕ್ಕೋಸ್ಕರವೇ ಕಂಡುಕೊಳ್ಳುವ ನಾನಾ ಉಪಾಯಗಳು.
ತರಗತಿಯಲ್ಲೊಬ್ಬ ಬಡವ ವಿದ್ಯಾರ್ಥಿ ಬ್ಯಾಂಕ್, ಅಮ್ಮನ ಮೇಲೆ ಭಾರೀ ಪ್ರೀತಿ, ಮುಗ್ಧ.ಈಕೆಯ ಪ್ರತಿಸ್ಪರ್ಧಿ. ಆದರೆ ಆತನಿಂದಾಗಿ ಈಕೆ ಸಿಕ್ಕಾಕಿಕೊಳ್ಳುತ್ತಾಳೆ..
ಮುಂದೆ…

ಅದೇ ಬ್ಯಾಂಕ್‌ನನ್ನು ಅಂತರ್ರಾಷ್ಟ್ರೀಯ STIC ( ಅಮೇರಿಕಾದ ಕಾಲೇಜುಗಳ ಪ್ರವೇಶಾತಿಗೆ ನಡೆಸುವಂತಹಾ ಪರೀಕ್ಷೆ) ಪರೀಕ್ಷೆಯ ಆಕ್ರಮದಲ್ಲಿ‌ ಭಾಗಿಯಾಗಿಸುತ್ತಾಳೆ..
ಯಶಸ್ವಿಯಾಗುತ್ತಾಳೆಯೇ?
ಮಿಲಿಯನ್ ರೂಪಾಯಿಗಳ ಒಡತಿಯಾಗುತ್ತಾಳೆಯೇ?
ಬ್ಯಾಂಕ್ ಇವಳ ಮನ ಗೆಲ್ಲುತ್ತಾನೆಯೇ? ಆತ ಈಕೆಯ ಕಕ್ಕುಲಾತಿಗೆ ಅರ್ಹನೇ?
ಟೀಚರ್ ಅಪ್ಪ ತನ್ನ ಮಗಳಿಗೆ ಮೌಲ್ಯಗಳನ್ನು ಕಲಿಸಿಕೊಡುವಲ್ಲಿ ಎಡವುತ್ತಾನೆಯೇ?
ಜೀನಿಯಸ್ ಆಗಿದ್ದರೆ ಸಾಕೆ? ಮೌಲ್ಯಗಳು ಬೇಡವೇ?…

ನಮ್ಮನ್ನು ಕುರ್ಚಿಯ ತುದಿಯಲ್ಲಿ ಕುಳಿಸಿಕೊಂಡು ಈ ಚಿತ್ರ ತನ್ನನ್ನು ನೋಡಿಸಿಕೊಳ್ಳುತ್ತದೆ. ೨ ಗಂಟೆ ಕಳೆದದ್ದೇ ತಿಳಿಯುವುದಿಲ್ಲ…..
ಉತ್ತಮ ಅಭಿನಯ, ಚಿತ್ರೀಕರಣ , ನಿರ್ದೇಶನ ಮತ್ತು ಚಿತ್ರಬರಹ(script)..ಈ ಚಿತ್ರದ ಜೀವಾಳ.
ಇದು ಹೈಸ್ಕೂಲ್ ಪ್ರೀತಿ ಪ್ರೇಮ ಪ್ರಣಯದ ಕತೆಯಂತೂ ಅಲ್ಲವೇ ಅಲ್ಲ.
ಈ ಚಿತ್ರ ತನ್ನ ದೇಶದಲ್ಲಿ ಹಲವಾರು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ.

Spoiler: ಚಿತ್ರ ಸುರುವಾಗುತ್ತದೆ….ಇಂಟರ್ ನ್ಯಾಷನಲ್ ಪರೀಕ್ಷಾ ಅಕ್ರಮ ಸ್ಫೋಟಗೊಳ್ಳುವಲ್ಲಿ…

ಟೆಲಿಗ್ರಾಮ್ ಯ್ಯಾಪ್.ನಲ್ಲಿ ” Thai Movies and dramas” ಅಡಿಯಲ್ಲಿದೆ..
HD ಬೇಡ ಅಂತಿದ್ದರೆ 300MB ಯದು ಸಾಕು.

ಓದಿದ್ದು : ಈ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆಯಂತೆ. ಸೋ..ಚಿತ್ರ ಕುಲಗೆಡುವ ಮೊದಲು ಮೂಲ ಚಿತ್ರ ನೋಡಿ..ಆನಂದಿಸಿ.. 😀

ಖಂಡಿತಹಾ ನೋಡ ಚಿತ್ರ.


By : rajesh aithal

Rajesh Aithal

Rajesh Aithal

Leave a Reply