Netflixನಲ್ಲಿ ಇದೊಂದು ಹೊಸ ಪ್ರಯತ್ನ.
ಇದು interactive ಚಿತ್ರ.
ಸ್ಟೆಫಾನ್ ತಾನೋದಿರುವ ಪುಸ್ತಕ Jerome F Davies ರ chose your own adventure ನ್ನು ವಿಡಿಯೋ ಗೇಮ್ ಆಗಿ ಮಾಡುವುದರಲ್ಲಿದ್ದಾನೆ.
ಪುಸ್ತಕದ ಕರ್ತೃ ತನ್ನ ಕೃತಿಯಲ್ಲಿ ಬರಬಹುದಾದಂತಹಾ ಬಹಳಷ್ಟು ಸಾಧ್ಯತೆಗಳ ಬಗ್ಗೆ ಚಿಂತಿಸಿ ಹುಚ್ಚನಾಗಿ ಹೆಂಡತಿಯನ್ನೇ ಕೊಂದಾತ..
ಸ್ಟೆಫಾನ್‌ಗೆ ಆ ಪುಸ್ತಕ ಸಿಕ್ಕಿದ್ದು ಅವನ ಅಮ್ಮನಿಂದ…(ಆಕೆ ಓದಿರಲಿಕ್ಕಿಲ್ಲ ಎಂಬುದು ಅಪ್ಪನ ಅಭಿಮತ)..
ಅವನ ಅಮ್ಮ ತೀರಿಕೊಂಡಿದ್ದು ಟ್ರೈನ್ ಅಪಘಾತದಿಂದ, ಅದು ತನ್ನ ಹಠಮಾರಿತನದಿಂದಲೇ ಆದದ್ದು ಎಂಬ ಭಾವನೆ ಸ್ಟೆಫಾನ್‌ನದ್ದು..
ಇಲ್ಲಿ ಸ್ಟೆಫಾನ್‌ನ ಆಯ್ಕೆಗಳನ್ನು ಮಾಡುವುದು ವೀಕ್ಷಕ.
ಚಿತ್ರ ಮುಂದುವರಿಯುತ್ತಿದ್ದಂತೆ screen ನ ಕೆಳಗಡೆ options ಬರುತ್ತಿರುತ್ತೆ..ಆಯ್ಕೆ ಮಾಡುವವರು ನಾವು.
ನಾವು ಮಾಡಿದ ಆಯ್ಕೆಯ ಪ್ರಕಾರ ಚಿತ್ರ ಮುಂದುವರಿಯುತ್ತದೆ.
ಉದಾಹರಣೆಗೆ ಸುಲಭ ಆಯ್ಕೆಗಳಾದ ..
ಸ್ಟೆಫಾನ್‌ನ ಅಪ್ಪ ಕೇಳುತ್ತಾನೆ..
೧.Sugar puffs / frostries ನಾಷ್ಟಾಕ್ಕೆ..
೨.ಸಂಗೀತದ ಆಲ್ಬಮ್ Phaedra/ the Bermuda triangle , music storeನಲ್ಲಿ..
(ನೆನಪಿಡಿ ಇದೆಲ್ಲಾ ನಡೆಯುವುದು ೧೯೮೪ ರಲ್ಲಿ..ವಿಡಿಯೋ ಗೇಮ್‌ಗಳು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಕಾಲ..)
ಉದಾಹರಿಸಿದ ಮೇಲಿನ ಎರಡು ಆಯ್ಕೆಗಳು ಚಿತ್ರವನ್ನು ಮುಂದುವರಿಸುವುದಿಲ್ಲ…ಅದು ಸುಮ್ನೇ time pass ಆಯ್ಕೆಗಳು.
ಮುಂದೆ ಬರುವ ಆಯ್ಕೆಗಳಲ್ಲಿ ನೀವು ಆಯ್ದಂತೆ ಸ್ಟೆಫಾನ್ ನ ಬದುಕು ನಿರ್ಧರಿತವಾಗುತ್ತದೆ.
ಉದಾಹರಣೆಗೆ.
೧.ಅಪ್ಪನನ್ನು ಕೊಲ್ಲು/ಹಿಂದೆ ಸರಿ
೨.ಕಂಪ್ಯೂಟರ್ ಕೀ ಬೋರ್ಡ್‌ಗೆ ಟೀ ಚೆಲ್ಲು/ಅಪ್ಪನಿಗೆ ಗದರಿಸು
೩.ಕಾಲಿನ್‌ನನ್ನು ಅನುಸರಿಸು/ಡಾ.ಹೇನ್ಸ್‌ನ್ನು ಸಂದರ್ಶಿಸು…
ನಮ್ಮ ಆಯ್ಕೆಯ ಪ್ರಕಾರ ಚಿತ್ರ ಮುಂದುವರಿದು ಚಿತ್ರ ಕೊನೆಗೊಳ್ಳುತ್ತದೆ..
ಚಿತ್ರಕ್ಕೆ ಅನೇಕ ಅಂತ್ಯಗಳಿದ್ದು ಒಂದೆರಡು ಸಲ ನಮ್ಮನ್ನು ಸ್ವಲ್ಪ ಹಿಂದಕ್ಕೆ ಕೊಂಡೊಯ್ದು ಬೇರೆ ಆಯ್ಕೆ ಮಾಡುವ ಅವಕಾಶವನ್ನೂ ನೀಡುತ್ತದೆ.
ಒಂದು review ಪ್ರಕಾರ ಯಾವ ಆಯ್ಕೆಯನ್ನೂ ಮಾಡದಿದ್ದರೆ Netflix ನಮಗಾಗಿ ಆಯ್ಕೆ ಮಾಡುತ್ತದೆ…ಹಾಗೂ ಅದು ಒಂದು ಉತ್ತಮ ಅಂತ್ಯ ನೀಡುತ್ತದಂತೆ..ಗೊತ್ತಿಲ್ಲ.
So far…
ನನ್ನ ending…
1. ಸ್ಟೆಫಾನ್ ಸಾಯುತ್ತಾನೆ
2. ಇದೆಲ್ಲಾ ಒಂದು ಸೆಟ್ ನಲ್ಲಿ ನಡೆಯುತ್ತಿದ್ದು ಅವನಪ್ಪ CUT ಎನ್ನುವಲ್ಲಿ ಚಿತ್ರ ಮುಗಿಯುತ್ತದೆ
3. ಅವನಪ್ಪನನ್ನು ಕೊಲೆ ಮಾಡಿ ಈತ ಜೈಲು ಸೇರುತ್ತಾನೆ…..
ಉತ್ತಮ ಅಂತ್ಯಕ್ಕಾಗಿ ಇನ್ನೊಮ್ಮೆ ಪ್ರಯತ್ನ ಜಾರಿಯಲ್ಲಿದೆ..
ನೀವೂ ಪ್ರಯತ್ನಿಸಿ
ACCEPT/REFUSE