ಚಾಲೆಂಜಿಂಗ್ ಸ್ಟಾರ್ ದರ್ಶನ್ನಾಡ ದೇವತೆ ಚಾಮುಂಡೇಶ್ವರಿಯ ಪರಮ ಭಕ್ತರು. ಹೊಸ ಕಾರ್ ಖರೀದಿಸಿದರು, ಹೊಸ ಸಿನಿಮಾದ ಮುಹೂರ್ತವಾದರು , ಮೊದಲು ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಯ ದರುಶನ ಪಡೆದು, ಪೂಜೆ ಸಲ್ಲಿಸಿ ಬರುತ್ತಾರೆ. ಲಾಕ್ಡೌನ್ ಸಮಯದಲ್ಲಿ ಸುಮಾರು 5 ತಿಂಗಳಿಂದ ದೇವಸ್ಥಾನ ತೆರೆದಿರಲಿಲ್ಲ, ಮೊನ್ನೆ ವರದಂತಿಯ ಅಂಗವಾಗಿ ವಿಶೇಷ ಪೂಜೆ ಜರಗಿತು ಅದರಲ್ಲಿ ಈಗಿನ ಮೈಸೂರ್ರಾಜರಾದ “ಯದುವೀರ್ಒಡೆಯರ್”ಭಾಗಿಯಾಗಿದ್ದರು ಜೊತೆಗೆ D-ಬಾಸ್ದರ್ಶನ್ ಅವರು ಕೂಡ ಭಾಗಿಯಾಗಿ ದೀಕ್ಷಿತರ ಆಶೀರ್ವಾದ ಕೂಡ ಪಡೆದರು. ಭಕ್ತಿ ಪರವಶರಾಗಿ, ಧನ್ಯ ಭಾವನೆಯಿಂದ ತುಂಬಿದ್ದರು.
ಬೆಂಗಳೂರಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಒಂದು ಆಘಾತಕಾರಿ ಸುದ್ದಿ ಕೇಳಿಸಿತು. ಆವರ ಆಪ್ತ ವಲಯದಲ್ಲಿ ಒಬ್ಬರಾದ ನೆಚ್ಚಿನ “ಮೇಕಪ್ ಆರ್ಟಿಸ್ಟ್” ಶ್ರೀನಿವಾಸ್ ಅವರು ತೀರಿ ಹೋಗಿದ್ದರು. ದರ್ಶನ್ ಅವರಿಗೆ 20 ವರ್ಷಗಳಿಂದ ಇವರೇ ಮೇಕಪ್ ಮಾಡುತ್ತಿದ್ದಾರು. ಮೆಜೆಸ್ಟಿಕ್ಸಿನಿಮಾದಿಂದ ಶುರುವಾದ ಈ ಅನುಭಂದ ಕುರುಕ್ಷೇತ್ರ, ರಾಬರ್ಟ್ಸಿ ನಿಮಾವರೆಗೂ ಜೋಡಿ ಹಳಿಯಂತೆ ಸಾಗಿತ್ತು.. ಗೆಳೆಯನ ಸಾವಿಗೆ ಕಂಬನಿ ಸುರಿಸಿದರು ದರ್ಶನ.
ಇವರ ಅಗಲಿಕೆಯಿಂದ ಕುಟುಂಬಕಷ್ಟೇ ಅಲ್ಲ ಸಿನಿಮಾ ವಲಯದಲ್ಲೂ ಕಹಿ ಆವರಿಸಿದೆ.