ಕನ್ನಡ ಚಿತ್ರರಂಗದಲ್ಲಿ ಹಾಸ್ಯ ದಿಗ್ಗಜರ ಸಾಲಿನಲ್ಲಿ ಕೆಲವರಿಗೆ ಪ್ರಮುಖ ಸ್ಥಾನವನ್ನು ನೀಡುವುದಾದರೆ ಬಾಲಣ್ಣ, ನರಸಿಂಹರಾಜ್, ದ್ವಾಕೀ೯ಶ್, ಉಮೇಶ್, ಎನ್. ಎಸ್. ರಾವ್, ದಿನೇಶ್, ಧಿರೇಂದ್ರ ಗೋಪಾಲ್, ಮುಸುರಿ ಕೃಷ್ಣ ಮೂತಿ೯ ಮುಂತಾದವರೂ ಹಾಗೂ ಈಗಿನ ಹಾಸ್ಯ ಕಲಾವಿದರು ಜಗ್ಗೇಶ್, ರಂಗಾಯಣ ರಘು, ಸಾಧುಕೋಕಿಲ ಮತ್ತು ಚಿಕ್ಕಣ್ಣ.
ಕಲೆ ಅನ್ನೋದು ಯಾರ ಸ್ವತ್ತೂ ಅಲ್ಲ ನಿಜವಾದ ಕಲಾವಿದರಿಗೆ ತನ್ನದೇ ಆದ ಬೆಲೆ ಸಿಗುತ್ತದೆ ಎಂದು ಹೇಳಬಯಸುವ ನಟರು ಹಾಸ್ಯ ದಿಗ್ಗಜರು ದಿ.ಟಿ.ಎನ್.ಬಾಲಕೃಷ್ಣ ರವರು.
ಇವರು ಎಲ್ಲಾ ರೀತಿಯ ಪಾತ್ರಗಳನ್ನು ಅಂದರೆ ಹಾಸ್ಯ ಕಲಾವಿರಾಗಿ, ಖಳನಟರಾಗಿ, ಪೋಷಕ ನಟರಾಗಿ, ಪ್ರೀತಿಯ ತಂದೆಯಾಗಿ 560 ಕ್ಕೂ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ವಿಶೇಷತೆ ಎಂದರೆ ಇವರಿಗೆ ಕಿವಿ ಕೇಳಿಸುವುದಿಲ್ಲ ಆದರೆ ಚಿತ್ರೀಕರಣದ ಸಹಾಯಕರ ತುಟಿಯ ಚಲನೆಗಳನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಪಾತ್ರಗಳನ್ನು ಮಾಡುತ್ತಿದ್ದದ್ದು ತುಂಬಾ ಆಶ್ಚರ್ಯದ ವಿಷಯ. ತುಂಬಾ ಬಡತನದಿಂದ ಬಂದವರು ಕಷ್ಟಗಳನ್ನು ಅನುಭವಿಸಿ ತಮ್ಮದೇ ಆದ ಸ್ಥಾನವನ್ನು ಚಿತ್ರರಂಗದಲ್ಲಿ ಪಡೆದಿದ್ದರು. ಕೆಂಗೇರಿಯಲ್ಲಿ ತಮ್ಮ ಸ್ವಂತ ಸ್ಟುಡಿಯೋ “ಅಭಿಮಾನ್ ” ಸ್ಟುಡಿಯೋ ನಿಮಾ೯ಣ ಮಾಡಿದ್ದಾರೆ ಈಗ ಅವರ ಮಗ ಇದನ್ನು ನೋಡಿಕೊಳ್ಳುತ್ತಿದ್ದಾರೆ.
ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದವರನ್ನು ಗಮನಿಸಿದ ಬಿ. ಆರ್. ಪಂತುಲು ರವರು ಚಿತ್ರರಂಗಕ್ಕೆ ಕರೆತಂದರು.
ಇನ್ನೂ ನಮ್ಮ ಅಣ್ಣಾವ್ರ ಜೊತೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರ ತಾರಾಗಣದಲ್ಲಿ ಮೂಡಿ ಬಂದ ಚಿತ್ರಗಳು ಅವರ ಭಾಂಧವ್ಯದ ಸಂಕೇತ ಅಂತ ಹೇಳಿದರೆ ತಪ್ಪಾಗಲಾರದು.
ನಮ್ಮ ಸಂಸಾರ,
ಜಗಜ್ಯೋತಿ ಬಸವೇಶ್ವರ
ರಣಧೀರ ಕಂಠೀರವ ,
ಭೂದಾನ,
ಮೇಯರ್ ಮುತ್ತಣ್ಣ,
ಕಸ್ತೂರಿ ನಿವಾಸ,
ಬಂಗಾರದ ಮನುಷ್ಯ,
ಗಂಧದ ಗುಡಿ,
ದೂರದ ಬೆಟ್ಟ,
ಸಂಪತ್ತಿಗೆ ಸವಾಲ್,
ಭಕ್ತ ಕುಂಬಾರ,
ಬಂಗಾರದ ಪಂಜರ,
ತ್ರಿಮೂರ್ತಿ,
ಬಡವರ ಬಂಧು,
ನಾ ನಿನ್ನ ಮರೆಯಲಾರೆ,
ಸನಾಧಿ ಅಪ್ಪಣ್ಣ,
ಒಂದು ಮುತ್ತಿನ ಕಥೆ,
ಪ್ರೇಮದ ಕಾಣಿಕೆ,
ಕಾಮನ ಬಿಲ್ಲು,
ಕವಿರತ್ನ ಕಾಳಿದಾಸ,
ಭಾಗ್ಯದ ಲಕ್ಷ್ಮಿ ಬಾರಮ್ಮ,
ಶೃತಿ ಸೇರಿದಾಗ,
ಒಡಹುಟ್ಟಿದವರು,
ಕೇವಲ ಹಾಸ್ಯಕ್ಕೆ ಸೀಮಿತರಾಗದೆ ತಮ್ಮಿಂದ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟ ದಿಗ್ಗಜರು.
❤ಸಂಪತ್ತಿಗೆ ಸವಾಲ್ – ಪುಟ್ಟಯ್ಯ ಪಾತ್ರ ಅಣ್ಣಾವ್ರ ಜೊತೆ ನಟಿಸಿರೋದನ್ನು ಮರೆಯಲಾಗದು.
👑ಕವಿರತ್ನ ಕಾಳಿದಾಸ -ಗುಣಸಾಗರ ( ಶಕುನಿ) ಪಾತ್ರ ಇಬ್ಬರ ನಡುವೆ ಸಂಭಾಷಣೆ ನಕ್ಕು ನಗಿಸುವುದು ಮರೆಯಲಾಗದು.
🌹ಗಂಧದ ಗುಡಿ – ವೆಂಕಟಪ್ಪ ನಾಯಕ ಪಾತ್ರ ( ಖಳನಟ) ಮರೆಯಲಾಗದು .
🌺ಬಂಗಾರದ ಮನುಷ್ಯ – ರಾಚುಟಪ್ಪ – ಸಾಹುಕಾರ ಪಾತ್ರ ತುಂಬಾ ಗೌರವಪೂವ೯ ಅಣ್ಣಾವ್ರ ಮತ್ತು ಬಾಲಣ್ಣ ರವರ ನಟನೆಗೆ ಸಾಕ್ಷಿ.
🌼ತ್ರಿಮೂರ್ತಿ – ಸೀತಾರಾಮ್ – ನಟನೆ ಸೂಪರ್
🌈ಕಸ್ತೂರಿ ನಿವಾಸ – ಭೋಜರಾಜಯ್ಯ ( ಖಳನಟ) ಪಾತ್ರ ಅಭಿನಯ ಚೆನ್ನಾಗಿದೆ.
ಇದಲ್ಲದೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ರವರ ಜೊತೆ ಬೆಟ್ಟದ ಹೂವು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಣಧೀರ ಕಂಠೀರವ ಚಿತ್ರ ನಮ್ಮ ದೇವರು ಮತ್ತು ಜಿ. ವಿ. ಅಯ್ಯರ್ ಸೇರಿ ಚಿತ್ರ ನಿಮಾ೯ಣ ಮಾಡಿದ್ದಾರೆ.
ಅಣ್ಣಾವ್ರಲ್ಲದೇ ಹಲವಾರು ಕಲಾವಿದರ ಜೊತೆ ಪಾತ್ರ ಮಾಡಿದ್ದಾರೆ.
ಮಿತ್ರರೇ ನನಗೆ ತೋಚಿದ ಹಾಗೆ ಬರೆದಿದ್ದೇನೆ ನೀವು ಲೇಖನ ಓದಿ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿದರೆ ನಮಗೂ ಬರೆಯುವುದಕ್ಕೆ ಸ್ಪೂರ್ತಿ ಸಿಗುವುದು.