Happy Birthday ಕಾಶೀನಾಥ್

ವಿಶಿಷ್ಟ ವೈವಿಧ್ಯಮಯ ಕಥೆಗಳನ್ನು ಸೃಷ್ಟಿಸುವಲ್ಲಿ ಮಂಗಳೂರಿನ ಕುಂದಾಪುರ ನಿದೇ೯ಶಕರು, ನಿಮಾ೯ಪಕರು,ನಟರು ಹಾಗೂ ಗಾಯಕರಾದ ಕಾಶೀನಾಥ್ ರವರ ಜನುಮ ದಿನದ ಜಯಂತಿ ಇಂದು 🌹💜💐

“ಅಪರೂಪದ ಅತಿಥಿಗಳ” ಜೊತೆ “ಅಪರಿಚಿತ”ನಾಗಿ ಬಂದು “ಅನುಭವ” ಹೇಳಿಕೊಟ್ಟು “ಲವ್ ಮಾಡಿ ನೋಡು” ಅಂತ ಪ್ರೇಮಿಗಳಿಗೆ ತೋರಿಸಿ ಚೆಲ್ಲಾಟದಿಂದ “ಅನಂತನ ಅವಾಂತರ “ಮಾಡಿ “ಅವಳೇ ನನ್ನ ಹೆಂಡತಿ” ಎಂದು ಪರಿಚಯಿಸಿ “ಶ್ ” ಎಂದು ಎಲ್ಲರಿಗೂ ನಡುಕ ಹುಟ್ಟಿಸಿದ “ಅಜಗಾಜಂತರ”, “ಹೆಂಡತಿ ಎಂದರೆ ಹೀಗಿರಬೇಕು “ಅಂತ ನಿರೂಪಿಸಿ ಜೀವನ ಒಂದು ನಾಕು ಮೂಲೆ “ಚೌಕ” ದಲ್ಲಿ ನಡೆಯುವ ಹೋರಾಟ ಎಂದು “ಜೀವ್ನ ಟಾನಿಕ್ ಬಾಟ್ಲು ಕುಡಿಯೋಕ್ ಮುಂಚೆ ಆಲ್ಲಾಡ್ಸು ” ಕುಣಿಸಿ “ಅಪ್ಪ ಐ ಲವ್ ಯೂ ಪಾ ” ಹಾಡಲ್ಲಿ ಮಾದರಿಯ ತಂದೆಯಾಗಿ ಹಲವಾರು ಅಭಿಮಾನಿಗಳ ಹೃದಯ ಗೆದ್ದ ಈ “ಮಂಗಳೂರು ಮಂಜುನಾಥ “ರನ್ನು ಯಾರಾದರೂ ಮರೆಯೋದುಂಟೆ.

ಅಪರಿಚಿತ, ಅನಂತನ ಅವಾಂತರ ಚಿತ್ರಗಳನ್ನು ನಿಮಾ೯ಣ ಮಾಡಿದವರು.
ಗಾಯಕರಾಗಿ ಅಮ್ಮ ನಾನ್ ಸೇಲಾದೆ (ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್) ಮತ್ತು ಅಪ್ಪಚ್ಚಿ ಚಿತ್ರಗಳಿಗೆ ಹಾಡಿ ಮನರಂಜನೆ ನೀಡಿದ್ದಾರೆ.

ಚೌಕ ಚಿತ್ರದ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಸೈಮಾ ಪ್ರಶಸ್ತಿ ಪಡೆದವರು.

ಕೆಲವು ಜನರು ಇವರು 2ನೇ ರೀತಿಯ ಚಿತ್ರಗಳನ್ನು ಹೆಚ್ಚು ನಿದೇ೯ಶಿಸುತ್ತಾರೆ ಅನ್ನೋ ಸಣ್ಣ ಪುಟ್ಟ ಆಪಾದನೆ ಹೇಳಿದರೂ ಚಿಂತಿಸದೆ ವಾಸ್ತವ ಬದುಕಿನ ನೈಜ ಚಿತ್ರಣ ಜನಗಳಿಗೆ ತಿಳಿಸುವಲ್ಲಿ ಯಶಸ್ವಿಯಾದ ಕ್ರಿಯಾಶೀಲ ವ್ಯಕ್ತಿ. ಯಾವುದೇ ಚಿತ್ರವಾಗಲಿ ಕಥೆಗೆ ತಕ್ಕ ಹಾಗೆ ಪಾತ್ರವಿದ್ದರೆ ಜನರಿಗೆ ತಲುಪುವುದು.

ಯಾರೇ ಒಬ್ಬ ನಿದೇ೯ಶಕರಿಗೆ ತಮ್ಮದೇ ಆದ ಕ್ರಿಯೇಟಿವಿಟಿ, ಹೊಸ ಹೊಸ ಆಲೋಚನೆಗಳು ಇರುತ್ತದೆ, ಇವರು ಕಥೆಯನ್ನು ಚಿತ್ರದಲ್ಲಿ ಹೇಳುವಾಗ ಯಾವುದೇ ಕಲಾವಿದರಾಗಲಿ ಅವರಿಂದ ಸಂಪೂರ್ಣ ನಟನೆ ಮಾಡಿಸಿ ತಮಗೆ ತೃಪ್ತಿ ಆಗೋವರೆಗೂ ಬಿಡಲ್ಲ, ಉಪ್ಪಿ ಸರ್ ಇವರನ್ನು ಗುರು ಅಂತ ಕರೆಯೋದು ಇದೇ ಕಾರಣಕ್ಕೆ, ಕೆಲಸದಲ್ಲಿ ಅಷ್ಟೇ ಶ್ರದ್ದೆ.

ಕೇವಲ ಕನ್ನಡ ಚಿತ್ರರಂಗವಲ್ಲದೆ ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಕೂಡ ನಿದೇ೯ಶನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ.

ಅಜಗಜಾಂತರ ಚಿತ್ರ ಹಿಂದಿಯಲ್ಲಿ ಅನಿಲ್ ಕಪೂರ್, ಶ್ರೀದೇವಿ, ಊಮಿ೯ಳ ನಟನೆಯಲ್ಲಿ ಜುಡಾಯಿ ಸೂಪರ್ ಹಿಟ್ ಆಗಿದೆ.

ಹಸಿರು ಗಾಜಿನ ಬಳೆಗಳೆ.. ಅವನೇ ನನ್ನ ಗಂಡ ಚಿತ್ರದ ಹಾಡು ಎಂದೂ ಮರೆಯಲಾಗದು.

ಇವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ ರಿಯಲ್ ಸ್ಟಾರ್ ಉಪೇಂದ್ರ ರವರಿಗೆ ಇವರಂದ್ರೆ ಪಂಚ ಪ್ರಾಣ, ವಿ. ಮನೋಹರ್, ಸುನೀಲ್ ಕುಮಾರ್ ದೇಸಾಯಿ, ಕುಮಾರ್ ಗೋವಿಂದ್, ಭವ್ಯ, ಅಭಿನಯ, ಅಂಜಲಿ , ಉಮಾಶ್ರೀ ಹಲವಾರು ಕಲಾವಿದರು ಇವರ ಗರಡಿಯಿಂದ ಬಂದವರು.

ಇಂಥ ದಿಗ್ಗಜ ನಿದೇ೯ಶಕರು ಮತ್ತೊಮ್ಮೆ ಹುಟ್ಟಿ ಬರಲಿ ಮತ್ತು ಚಿತ್ರಗಳಲ್ಲಿ ನೈಜ ಘಟನೆಗಳನ್ನು ಹಾಸ್ಯಾತ್ಮಕವಾಗಿ, ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಪ್ರೇಕ್ಷಕರಿಗೆ ತಿಳಿಯುವ ಹಾಗೆ ನಿದೇ೯ಶಿಸುತ್ತಿದ್ದ ನಟರು, ನಿಮಾ೯ಪಕರು ಮತ್ತು ನಿದೇ೯ಶಕರು “ಕಾಶೀನಾಥ್ “.
ಇವರು ನಟಿಸಿದ ಕೊನೆಯ ಚಿತ್ರ “ಓಳು ಮುನಿಸ್ವಾಮಿ”.

ಕೆಲವು ನನ್ನ ಕಲ್ಪನೆಯ ಸಾಲುಗಳು.

ಮತ್ತೆ ಹುಟ್ಟಿ ಬನ್ನಿ ಕಾಶೀನಾಥ್ ಸರ್ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply