L A Confidential (1997) Hollywood film review~~~~~~~~~~~~~~~~~~~~~~~~~~~~~~
ಹಾಲಿವುಡ್ ಚಿತ್ರಗಳಲ್ಲಿ ಒಂದು “ಗುಡ್ ಕಾಪ್ ಬ್ಯಾಡ್ ಕಾಪ್ “( good cop, bad cop) ಅಂತಾ ಥೀಮ್ ಇದೆ.ಅಂದರೆ ಪೋಲೀಸ್ ಡಿಪಾರ್ಟ್ಮೆಂಟಿನ ಆಂತರಿಕ ಭ್ರಷ್ಟಾಚಾರ, ರಾಜಕೀಯ ಸ್ವಾರ್ಥ ನಿಲುವು, ಒಳಸಂಚು ಇತ್ಯಾದಿ ಬಗ್ಗೆ ಬೆಳಕು ಚೆಲ್ಲುವಂತದ್ದು.
ಈ ಬಗ್ಗೆ ಮೊದಲು ಬಹಳ ಜನಪ್ರಿಯವಾದ ಚಲಚಿತ್ರ, ಕಲ್ಟ್ ಹಿಟ್ ಎಂದು ಕರೆಯಲ್ಪಡುವ ಎಲ್. ಎ.ಕಾನ್ಫಿಡೆಂಷಿಯಲ್.ಲಾಸ್ ಏಂಜಲೀಸ್ ನಗರದಲ್ಲಿ ವ್ಯವಸ್ಥಿತ ಭೂಗತ ಲೋಕವಿದೆ. ಅದಕ್ಕೆ ದೊಡ್ಡ ದೊಡ್ಡವರ ಹಿನ್ನೆಲೆ ಬೆಂಬಲ ಎಲ್ಲಾ ಇದೆ. ಆ ಪೋಲಿಸ್ ಡಿಪಾರ್ಟ್ಮೆಂಟ್ ಹಲವು ವರ್ಷಗಳಿಂದ ಈ ಮಾಫಿಯಾ ಲೋಕದವರನ್ನು ಅವರ ಜಾಲವನ್ನು ಭೇಧಿಸಲು ಯತ್ನಿಸುತ್ತಲೇ ಇರುತ್ತಾರೆ.
ಅಂತಹಾ ಕಾಲಘಟ್ಟದ ಕಥಾನಕ ಜೇಮ್ಸ್ ಎಲ್ರಾಯ್ ಎಂಬ ಕ್ರೈಂ ಲೇಖಕ ಬರೆದ ಕಾದಂಬರಿ ಆಧರಿತ ಈ ಚಿತ್ರ 1997 ರಲ್ಲಿ ಜನಪ್ರಿಯ ಹಿಟ್ ಆಗಿತ್ತು,2 ಆಸ್ಕರ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಈ ಚಿತ್ರಕ್ಕೆ ಲಭಿಸಿವೆಇದರಲ್ಲಿ ರಸೆಲ್ ಕ್ರೋ, ಗೈ ಪಿಯರ್ಸ್, ಕೆವಿನ್ ಸ್ಪೇಸಿ ಅಂತಹಾ ಕ್ಲಿಷ್ಟ ವ್ಯವಸ್ಥೆಯಲ್ಲಿ ಸಿಕ್ಕಿರುವ ಮೂರು ವಿಭಿನ್ನ ವ್ಯಕ್ತಿತ್ವದ ಪೋಲಿಸ್ ಪತ್ತೇದಾರರು ( ಡಿಟೆಕ್ಟಿವ್ಸ್).ನಗರದಲ್ಲಿ ಮಾಫಿಯಾ ಸಂಬಂಧಿತ ಕೊಲೆಗಳ ಸರಣಿ ಎಲ್ಲರನ್ನೂ ಬೆಚ್ಚು ಬೀಳಿಸುತ್ತದೆ.
ಅವರು ಮೂವರಲ್ಲಿ ಯಾರೂ ಪೂರ್ತಿ ಒಳ್ಳೆಯವರಾಗಲಿ,ಪೂರ್ತಿ ಕೆಟ್ಟವರಾಗಲೀ ಅಲ್ಲ. ಗ್ರೇ ( ಬೂದು) ಬಣ್ಣದ ವ್ಯಕ್ತಿತ್ವಗಳು.. ಅದೇ ಈ ಸಿನೆಮಾದ ವೈಶಿಷ್ಟ್ಯತೆ, ನೈಜತೆ..ತಮ್ಮ ತಮ್ಮದೇ ಆದ ಅಜೆಂಡಾ ಇರುವ, ಬಲಹೀನತೆ, ಅಸಹಾಯಕತೆಗಳೆಲ್ಲಾ ಇರುವ ವ್ಯಕ್ತಿಗಳು ಈ ಮೂರು ನಾಯಕರು. ಹೇಗೆ ಆ ನಗರದ ಮಾಫಿಯಾ ವ್ಯವಸ್ಥಿತ ಕ್ರೈಂಜಾಲವನ್ನು ಭೇಧಿಸುತ್ತಾರೆ.
ಯಾರು ಅದರ ನಾಯಕ, ಹೇಗೆ ಅವನು ಎಲ್ಲರನ್ನೂ ನಿಯಂತ್ರಿಸುತ್ತಿದ್ದ ಎಂಬುದನ್ನು ಬಹಳ ಸಸ್ಪೆನ್ಸ್ ಮತ್ತು ನಿಗೂಢತೆಯಿಂದ ನಿರ್ದೇಶಕ ರೂಪಿಸಿದ್ದಾರೆ. ಇವರೆಲ್ಲರ ನಡುವೆ ಪೀತಪತ್ರಿಕೆ ನಡೆಸುವ ಹಗರಣಗಳನ್ನು ಸ್ಟಿಂಗ್ ಮಾಡುವ ಪತ್ರಕರ್ತ ಸಹಾ.ನಾಯಕಿ ಕಿಂ ಬ್ಯಾಸಿಂಗರ್ ಸುಂದರಿ, ಶ್ರೀಮಂತ ವೇಶ್ಯೆ…ಆಕೆಯ ಮನಸ್ಸೇನಲ್ಲೇನಿದೆ? ಏನವಳ ಪಾತ್ರ?…
ಹೀಗೆಲ್ಲಾ ನಮ್ಮನ್ನು ಕೊನೆಯವರೆಗೂ ಸೀಟಿನ ತುದಿಯಲ್ಲಿಡುತ್ತದೆ ನಿರೂಪಣೆ.ಎಲ್ಲರೂ ಈ ಸ್ಕ್ರಿಪ್ಟ್ ಪ್ರಕಾರ ಬಹಳ ಸಮರ್ಥವಾಗಿ ಅಭಿನಯಿಸಿದ್ದಾರೆ.ಆದರೆ ಹಲವಾರು ಹಿಂಸಾತ್ಮಕ ದೃಶ್ಯಗಳಿವೆ, ಆದರೆ ಅವೆಲ್ಲಾ ನೈಜ ಸನ್ನಿವೇಶಗಳೇ ಆಗಿವೆ. ಖಂಡಿತಾ ಮೆಚೂರ್ ವಯಸ್ಕರಿಗಾಗಿ ಈ ಚಿತ್ರ.ನನ್ನ ರೇಟಿಂಗ್: 4.5/5 ಇದು ಈಗ ಅಮೆಝಾನ್ ಪ್ರೈಂ ವಿಡಿಯೋ ದಲ್ಲಿ ನೋಡಬಹುದು
.https://www.primevideo.com/…/ref=stream_prime_sd_mv…View Insights48 Post Reach
1Ranjan Hemanth G Mangalore