ಚಿನ್ನದ ಹೊಲಕ್ಕೆ ಅತಿ ಶೀಘ್ರದಲ್ಲೇ ಕರೆದೊಯ್ಯುವ ಮುನ್ನ ಅದರ ಒಂದು ಸಣ್ಣ ಇಣುಕು ನೋಟವನ್ನು ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. KGF-2 ರ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ನ 5 ಭಾಷೆಗಳ ಟ್ರೇಲರ್ ಇದೇ ತಿಂಗಳ 8ರಂದು ಬೆಳಗ್ಗೆ 10:18ಕ್ಕೆ ಹೊಂಬಾಳೆ ಫಿಲ್ಮ್ಸ್ ನ ಯೂಟ್ಯೂಬ್ ಖಾತೆಯಲ್ಲೇ ಅನಾವರಣಗೊಳ್ಳಲಿದೆ. ಸಿನಿಮಾಗೆ ಸಂಬಂಧಿಸಿದ ಸಣ್ಣ ಪೋಸ್ಟರ್ ನೋಡುವಾಗಲೆಲ್ಲ ಕುತೂಹಲ,ಕಾತುರ ಉರಿಯುವ ಜ್ವಾಲೆಯಂತೆ ಹೆಚ್ಚುತ್ತಿತ್ತು, ಇದೀಗ “KGF ಟೈಮ್ಸ್” ಅನ್ನುವ ನ್ಯೂಸ್ ಪೇಪರ್ ಮಾದರಿಯಲ್ಲಿ ಸಿನಿಮಾದ ಕುರಿತಾದ ಕೆಲವು ಮುಖ್ಯ ಅಂಶಗಳನ್ನ ಪ್ರಕಟಿಸಿದ್ದಾರೆ. KGF ಸಿನಿಮಾದಲ್ಲಿ ಬರುವ ಪ್ರಮುಖ ಸನ್ನಿವೇಶಗಳು ಇಲ್ಲಿ ಸಾಲಾಗಿವೆ. ” ನಾಯಕನಾ ಅಥವಾ ಖಳನಾಯಕನ”? ಅದಕ್ಕೆ ಉತ್ತರವನ್ನು ಸಿನಿಮಾನೇ ಹೇಳುತ್ತೆ…
ಮತ್ತೊಂದೆಡೆ ಸಿನಿಮಾದ ನಾಯಕರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕರಾದ ವಿಜಯ್ ಕಿರಂಗದೂರು ಹಾಗು ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ ಅವರು ನಿನ್ನೆಯಷ್ಟೇ ತಮಿಳುನಾಡಿನಲ್ಲಿರುಕ ಕಾರೈಕಲ್ ನ ಶನೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.