K. G.F. 2

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ಹೊಂಬಾಳೆ ಫಿಲ್ಮ್ಸ್ ನ ರೂವಾರಿ ಹಾಗೂ  KGF ಸಿನಿಮಾದ ನಿರ್ಮಾಪಕರಾದ ವಿಜಯ್ ಕಿರಿಗಂದೂರ್ಯಶ್ಅವರಿಗೆ ಮತ್ತು ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ನೀಡಿದ್ದಾರೆ.

K.G.F 2 ರ ಟೀಸರ್.

ಭೀಕರ ಇವಭೋರ್ಗರ” ಅನ್ನೋ ಸಾಲು K.G.F ಸಿನಿಮಾದ ಮೊದಲ ಭಾಗದಲ್ಲಿ ಕೇಳಿಬರುತ್ತೆ , ಅದು ಎರಡನೇ ಭಾಗವು ಅನ್ವಯಿಸುತ್ತೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ K.G.F ಸಿನಿಮಾದ ಎರಡನೇ ಭಾಗದ ಟ್ರೇಲರ್ಬಿಡುಗಡೆಯಾಗಿದ್ದು ಅದರ ಅಬ್ಬರ ಈಗಾಗಲೇ ಅಂಬರಕ್ಕೇರಿದ. ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸ್ಟೈಲ್, ಮಾಸ್ ಅಪೀಲ್ ಕಂಡ ಪ್ರೇಕ್ಷಕನ ತಲೆ ಗಿರ್ರಿಕ್ಕಿಸಿದೆ, ಅಧೀರನಾಗಿ (ಕುತಂತ್ರಿ, ಕ್ರೂರಿ) ಆರ್ಭಟಿಸಲಿರುವ ಸಂಜಯ ದತ್ತ ರ ಪಾತ್ರವನ್ನ ಕಣ್ತುಂಬಿಸಿಕೊಳ್ಳುವ ಕಾತುರ ದುಪ್ಪಟ್ಟಾಗಿದೆ, ರಾಮಿಕಾಸೇನ್ (ರವೀನಟಂಡನ್)  ಏನು ನಿರ್ಣಯ ಕೈಗೊಳ್ತಾಳೆ ಅನ್ನೋ ಕುತೂಹಲ ಇನ್ನು ಹೆಚ್ಚಿದೆ.

ಶರವೇಗದಲ್ಲಿ ಸಾಗುವ 2 ನಿಮಿಷದ ಟೀಸರ್ ನಲ್ಲಿ ಚಿನ್ನ  ಕಳೆದುಕೊಂಡವನ ನೋವು, ಅದನ್ನು ಹೇಗೆ ಕದಿಯಬೇಕೆಂಬ ಹುನ್ನಾರ, ರಾಜಕೀಯ, ತಾಯಿಗೆ ಕೋಟ್ಟ ವಚನ, ನಾಯಕನು ಬಡಿಸುವ ಭರ್ಜರಿ ಗುಂಡಿಟಿನಬಿಸಿಯೂಟ, full meals  ಆದ್ಮೇಲೆಸೆದೋ KING ಸಿಗ್ರೇಟ್ ಮತ್ತು ನರಾಚಿಯ ಪಕ್ಷಿ ನೋಟ ಎಲ್ಲವನ್ನು ಅತಿ ತೀಕ್ಷ್ಣವಾಗಿ -ಸೂಕ್ಷ್ಮವಾಗಿ ಪರೀಚಯಿಸಿದ್ದಾರೆ. ಆಗಸ ಹೇಗಿದೆ?

ಅಂದ್ರೆ ಅದಕ್ಕೆ ನನ್ನ ಉತ್ತರ  ಪ್ರಶಾಂತವಾಗಿದೆ ಹಾಗೂ ನೀಲಿಯಾಗಿದೆ.. ಚಿತ್ರ ರೂಪಿಸುವ ಕುಂಚ ಹಿಡಿದು, ಅಪರೂಪದ ಚಿತ್ತಾರ ಹೆಣೆದಿರುವ ನಿರ್ದೇಶಕ  ಪ್ರಶಾಂತ್ ನೀಲ್ ಅವರ ಶ್ರಮ ಅಕ್ಷರಶಃ ಗಗನ ಗಾತ್ರದ್ದು.  ಪರದೆಯ ಮೇಲೆ ದೊಡ್ಡ ಜಗತ್ತನ್ನೇ ಪ್ರಸ್ತುತ ಪಡಿಸಲಿದ್ದಾರೆ. ಭಾವಕ್ಕೆತಕ್ಕ ಬೆಳಕು, ನಾದ ಇದ್ದಲ್ಲಿಯೇ ಚಿತ್ರ ಪರಿಪೂರ್ಣಗೊಳ್ಳುವುದು..

ಕ್ಯಾಮೆರಾ ಹಿಡಿದ ಭುವನ್ ಗೌಡ ಹಾಗೂ ಸಂಗೀತ ಸಂಯೋಜಿಸಿದ ರವಿ ಬಸ್ರುರರವರ ಕೆಲಸ ನೋಡ್ತಾಇದ್ರೆ   ಇಬ್ಬರು, ಓಬ್ಬರ ಮೇಲೆ ಮತ್ತೊಬ್ಬರು ಪೈಪೋಟಿಗೆಬಿದ್ದಂತೆಕಾಣ್ತಿದೆ. ಸಧ್ಯದ ಪರಿಸ್ಥಿತಿಯ ಕಾರಣವಾಗಿ ಸಿನಿಮಾದ ಬಿಡುಗಡೆ ತಾರೀಕು ಇನ್ನು ನಿಗದಿಪಡಿಸಿಲ್ಲ.

ಟೀಸರ್ ಅಂದು ಕೊಂಡ ಹಾಗೆ ಬಿಡುಗಡೆಯಾಗದಿದ್ದರು, ಅಂದುಕೊಂಡಕ್ಕಿಂತ ಹೆಚ್ಚು ಧಾಖಲೆರುಜುಮಾಡಿದೆಅನ್ನೋದೇ ಸಂತಸದ ವಿಷಯ,  ಕನ್ನಡದ ಸಿನಿಮಾವೊಂದಿ 4 ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರತದಾದ್ಯಂತಸುನಾಮಿಯಂತೆ ಸದ್ದು ಮಾಡಿ ಅನ್ಯ ಭಾಷೆ ಸಿನಿಮಾಗಳಿಗೆಸೆಡ್ಡು ಹೊಡೆದು ಸಾಗಿದೆ ಅಂದ್ರೆ ಅದು ನಮಗೆ ಹೆಮ್ಮೆ ಮತ್ತು ಸಂತಸದ ಸುದ್ದಿ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ 1 ಘಂಟೆಯ ಸಮಯದಲ್ಲಿ 5ಮೀಲ್ಲಿಯನ್ (50 ಲಕ್ಷ) ವಿಕ್ಷಣೆ ಪಡೆದು 1 ಮಿಲಿಯನ್ ಲೈಕ್ಸ್ ಪಡೆದು ರಾಷ್ಟ್ರ ಮಟ್ಟದಡಲ್ಲಿ ಹೊಸ ಧಾಖಲೆಯನ್ನ ರಚಿಸಿದೆ.

ಇಂತಹ ಸಿಹಿ ಸಂಭ್ರಮಕ್ಕೆಕಾರಣರಾದ ಎಲ್ಲರಿಗೂ ಸಾವಿರದ ಶರಣು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply