“ಜೇಮ್ಸ್” ಸಿನಿಮಾದ ಟೀಸರ್ ಹೇಗಿರುತ್ತೆ ಅನ್ನೋ ಕುತೂಹಲಕ್ಕಿಂತ ಪುನೀತ್ರನ್ನ ಕಣ್ತುಂಬಿಸಿಕೊಳ್ಳುವ ಕಾತುರವು ಹೆಚ್ಚಾಗಿದ್ದು “ಪವರ್ ಸ್ಟಾರ್” ಅವರ ಬಿರುದಿಗೆ ತಕ್ಕಂತೆ ಪವರ್ ಫುಲ್ಲಾಗಿ ಕಾಣಿಸಿದ್ದಾರೆ, ಜೊತೆಗೆ ಶಿವಣ್ಣ ಅವರ ಬೇಸ್ ವಾಯ್ಸ್ನಲ್ಲಿ ಬರೋ ಖಡಕ್ ದೈಲಾಗ್ ಟೀಸರ್ನ ಬೆರಗನ್ನು ದುಪಟ್ಟುಗೊಳಿಸಿದೆ.. ಇಲ್ಲಿ ಅಪ್ಪು ಉಕ್ಕಿನ ಗನ್ ಹಿಡಿದು ಪೋಸ್ ಕೊಟ್ಟಿಲ್ಲಾ ಬದಲಿಗೆ ಅವರೇ ಗನ್ನಿನ ಹಾಗೆ ಘನ ಘಟ್ಟಿಯಾಗಿದ್ದು ಬುಲ್ಲೆಟ್ಟಿನಂತೆ ವೇಗವಾಗಿ ಮುನ್ನುಗ್ಗಿದ್ದಾರೆ… ಒಂದುವರೆ ನಿಮಿಷದ ಈ ತುಣುಕನ್ನ ಕೆಲವ ನಿಮಿಷಗಳಲ್ಲಿ 1 ಮಿಲ್ಲಿಯನ್ನಿಗೂ ಹೆಚ್ಚು ಜನ ವೀಕ್ಷಿಸಿ ಹೊಸ ಧಾಖಲೆ ಸೃಷ್ಟಿಯಾಗಿದೆ. ಈಗಾಗಲೇ ಚಿರಸ್ಥಾಯಿಯಾಗಿ ನಮ್ಮ ಹೃದಯಗಳಲ್ಲಿ ಚಕ್ರವರ್ತಿಯಾಗಿ ನೆಲಸಿರುವ ಅಪ್ಪು, ಟೀಸರ್ನ ಕಂಡ ನಂತರ ಮತ್ತೆ ನಮ್ಮ ಹೃದಯಾನ ಕದ್ದರು ಅಥವಾ ಗೆದ್ದರು ಎಂದರೆ ಅದು ಬಹಳ ಚಿಕ್ಕ ಮಾತಾಗುತ್ತದೆ ಆದರೂ ಸಹ ಈ ತುಣುಕನ್ನ ನೋಡುತ್ತಿದ್ದಂತೆ ಅವರ ಮೇಲಿನ ಅಭಿಮಾನದ ಭಾವವು ಉತ್ತುಂಗಕ್ಕೆ ಹೋಗೋದಂತೂ ನಿಜಾ. ” ವ್ಯಕಿಗಿಂತ ವ್ಯಕ್ತಿತ್ವ ದೊಡ್ಡದು” ಅನ್ನೋದನ್ನ ಪುನೀತ್ ರಾಜ್ಕುಮಾರ್ ಅವರು ಸಾಬೀತು ಮಾಡಿದ್ದಾರೆ..
Powerstar as James
