ರಾಜಾ ಜಾನಿ(1972)( ಹಿಂದಿ)
ಧರ್ಮೇಂದ್ರ- ಹೇಮಾಮಾಲಿನಿ~~~~~
ಎಲ್ಲಿ ನೋಡಬಹುದು- ಯೂಟ್ಯೂಬ್ , ಸೋನಿ ಲಿವ್
ಹಿಂದಿ ಬೆಳ್ಳಿತೆರೆ ಕಂಡ ಅತ್ಯಂತ ಮುದ್ದಾದ ಮತ್ತು ಆಪ್ಯಾಯಮಾನವಾದ ಜೋಡಿ 1970ರ ದಶಕದ ಧರಂ- ಹೇಮಾ.
ಇವರ ರಾಜಾ ಜಾನಿ ಚಿತ್ರ ಜನಪ್ರಿಯ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದು, ಮತ್ತೆ ಮತ್ತೆ ಮೆಲುಕಿ ಹಾಕಲು ನೋಡಲರ್ಹವಾದ ಕುಟುಂಬದವರೆಲ್ಲಾ ಒಟ್ಟಾಗಿ ನೋಡಬಹುದಾದ ಕ್ಲೀನ್ ಮನರಂಜನಾ ಚಿತ್ರ.
ನಾಯಕ ಧರಂ ಒಬ್ಬ ಧನದಾಹಿ ಹಾಗೂ ಪ್ರೀತಿ ಪ್ರೇಮದಲ್ಲಿ ಅವಿಶ್ವಾಸ ಹೊಂದಿದ ಏಕಾಂಗಿ ಯುವಕ. ಅವನ ಸೇವಕ-ಅಡುಗೆಯವನಾಗಿ ಜಾನಿ ವಾಕರ್ ಹಾಸ್ಯ ಸೂಕ್ತವಾದ ಮಿತಿಯಲ್ಲಿ, ಯಾವುದೇ ಡಬಲ್ ಮೀನಿಂಗ್ ಇಲ್ಲದ ಕಾಮೆಡಿ. ಬಂಜಾರ ಅಲೆಮಾರಿ ಯುವತಿ ಶನ್ನೂ ( ಹೇಮಾಮಾಲಿನಿ) ಅವನ ಬಳಿಗೆ ಬಂದು ಆಶ್ರಯ ಪಡೆದಿದ್ದಾಳೆ.
ಹತ್ತಿರದ ರಾಜ್ಯವೊಂದರ ರಾಜಮಾತೆ ಒಂದು ದುರ್ಘಟನೆಯಿಂದ ಹಲವು ದಶಕಗಳಿಂದ ದುಃಖಿತಳಾಗಿರುತ್ತಳೆ. ಆಕೆಯ ಪುತ್ರ ಮತ್ತು ಸೊಸೆಯನ್ನು ಕುಟುಂಬ ವೈರಿಯೊಬ್ಬ ಕುಂಭಮೇಳದ ರಸ್ತೆಯಲ್ಲಿ ಕೊಂದುಹಾಕಿರುತ್ತಾನೆ. ಅವನ ಏಕೈಕ ಕಣ್ಮಣಿಯಂತಹಾ ರಾಜಕುಮಾರಿ ರತ್ನಾ ನೀರಿನ ಪಾಲಾಗಿ ದಶಕಗಳಾದರೂ ಕೈಗೆ ಸಿಕ್ಕಿಲ್ಲ.
ಆಕೆಯ ಆಸ್ತಿ ಸಂಪತ್ತು, ಅಧಿಕಾರ ವಶಪಡಿಸಿಕೊಳ್ಳಲು ರಾಜ್ಯದ ದಿವಾನ್( ಪ್ರೇಮನಾಥ್), ರಾಜಾ ( ಧರ್ಮೆಂದ್ರ)ನ ಸಹಾಯ ಬಯಸಿದಾಗ ಅವರು ಈ ಅಲೆಮಾರಿ ಯುವತಿಗೆ ಟ್ರೈನಿಂಗ್ ಕೊಟ್ಟು ಕಳೆದು ಹೋದ ರಾಜಕುಮಾರಿ ಇವಳೇ ಎಂದು ರಾಜಮಾತೆಗೆ ನಂಬಿಸಲು ಯತ್ನಿಸುತ್ತಾರೆ.
ಮುಂದೆ ನಾನಾ ತಿರುವು, ಬೆಳವಣಿಗೆ ಪಡೆಯುವ ಈ ಚಿತ್ರಕಥೆ ಉದ್ದಕ್ಕೂ ಲೈವ್ಲಿ, ಉಲ್ಲಾಸಕರ ಮತ್ತು ಬಿಗುವಾಗಿ ಆಸಕ್ತಿಕರವಾಗಿದೆ. ಮಸಾಲೆ ಚಿತ್ರವಾದರೂ ಎಲ್ಲೂ ಕೊಂಚವೂ ಬೋರ್ ಆಗದಂತೆ ನಿರ್ದೇಶಕ ಮೋಹನ್ ಸೆಗಾಲ್ ನೋಡಿಕೊಂಡಿದ್ದಾರೆ.
ಧರಂ ಬಹಳ ಹ್ಯಾಂಡ್‍ಸಮ್ ಆಗಿ ಸುಂದರ ಉಡುಪುಗಳಲ್ಲಿ ಚೆಂದ ಕಾಣುತ್ತಾರೆ. ಸಮರ್ಥವಾಗಿ ಅಭಿನಯಿಸಿದ್ದಾರೆ.
ಹೇಮಾಮಾಲಿನಿ ಚಿತ್ರದ ಜೀವಾಳ. ಆಗಿನ್ನೂ ಯುವತಿಯಾಗಿದ್ದ ಹೇಮಾ ಬಹಳ ಸುಂದರಿಯಂತೆ ಕಂಡು ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಕೆಯ ವೇಷಭೂಷಣ, ನೃತ್ಯ ಅಭಿನಯ ಎಲ್ಲವೂ ಫಸ್ಟ್ ಕ್ಲಾಸ್.
ಪ್ರೇಮನಾಥ ಮತ್ತು ಪ್ರೇಮ್ ಚೋಪ್ರಾ ಖಳನಾಯಕರಾಗಿ ಸೂಕ್ತವಾಗಿದ್ದಾರೆ
ಧರಂ- ಹೇಮಾ ಜೋಡಿ ಪ್ರಸಿದ್ಧರಾದ ಮೈಲಿಗಲ್ಲಿನ ಚಿತ್ರ ಇದು.
ಕಿಶೋರ್ ಕುಮಾರ್ ಟೈಟಲ್ ಸಾಂಗ್, ಮೂರು ಲತಾ ಮಂಗೇಶ್ಕರ್ ಹಾಡುಗಳು ಮಧುರವಾಗಿ ನೆನೆಪಿನಲ್ಲುಳಿಯುವ ಯಶಸ್ವಿ ಗೀತೆಗಳು. ಸಂಗೀತ : ಲಕ್ಷ್ಮೀಕಾಂತ್ ಪ್ಯಾರೇಲಾಲ್ ಜೋಡಿಯದು.
ನಿನ್ನೆ ತಾನೇ ಮನೆಯರರೊಂದಿಗೆ ನೋಡಿದೆ. ಮನಸ್ಸಿನಲ್ಲುಳಿಯುವ ರಂಜನೀಯ ಚಿತ್ರ.
https://www.youtube.com/watch?v=Tj_48kPwKtc
https://www.sonyliv.com/movies/raja-jani-1000057835…