Sapta sagaradache ello – Side B ಸಾಂಗ್ ರಿಲೀಸ್

saptasagaradache ello side b

ಹೇಮಂತ್ ಎಂ ರಾವ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಟಿಸಿದ್ದ ‘ಸಪ್ತ ಸಾಗರದಾಚೆ ಎಲ್ಲೋ, ಸೈಡ್ ಎ’ ಈಗಾಗಲೇ ಅಪಾರ ಜನಮನ್ನಣೆ ಗಳಿಸಿ, ಸೈಡ್ ಬಿ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಮಧ್ಯೆ ಚಿತ್ರದ ಚಿತ್ರದ ಮೊದಲ ಸಾಂಗ್ ಬಿಡುಗಡೆ ಆಗಿದೆ. ಚರಣ್‌ರಾಜ್ ಸಂಗೀತದಲ್ಲಿ ಮೂಡಿಬಂದಿರುವ ‘ಒಲವೇ ಒಲವೇ’ ಎಂಬ ಹಾಡಿಗೆ , ಬಿ ಆರ್ ಸುವರ್ಣ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಶ್ರೀಲಕ್ಷ್ಮಿ ಬೆಳ್ಮಣ್ಣು ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ.

ಈ ಹಾಡನ್ನು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಾಗಿದೆ. ಇದಕ್ಕೆ ತೆಲುಗಿನಲ್ಲಿ ಬಟ್ಟು ವಿಜಯ್ ಕುಮಾರ್ ಸಾಹಿತ್ಯ ಬರೆದಿದ್ದರೆ, ತಮಿಳಿನಲ್ಲಿ ಮಧುರಕವಿ ಮತ್ತು ಮಲಯಾಳಂನಲ್ಲಿ ಅಖಿಲ್ ಎಂ ಬೋಸ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ ಮೂರೂ ಭಾಷೆಗಳಲ್ಲಿಯೂ ಶ್ರೀಲಕ್ಷ್ಮಿ ಬೆಳ್ಮಣ್ಣು ಈ ಹಾಡನ್ನು ಹಾಡಿದ್ದಾರೆ.

Chitrodyama Updates

Chitrodyama Updates

Leave a Reply