#ತಮಿಳು #Kollywood #Kannada_review
ಸೂರರೈ ಪೋಟ್ರು( ಶೂರರಿಗೆ ಜಯಕಾರ) ಇದು ಗೊರೂರಿನ ಹೆಮ್ಮೆ ಕ್ಯಾ. ಜಿ ಆರ್ ಗೋಪಿನಾಥರ ಜೀವನಚಿತ್ರ ಆಧರಿತ ಹೊಸ ತಮಿಳು ಚಿತ್ರ. ಏರ್ ಲೈನ್ಸ್ ಕನಸನ್ನು ಬೆನ್ನೆತ್ತಿ ಅದನ್ನು ಸಾಕಾರಗೊಳಿಸಿದ ‘ಶೂರ’ ಎಂದು ಶೀರ್ಷಿಕೆಯ ಅರ್ಥತಮಿಳು ಅರ್ಥವಾಗದವರಿಗೆ ಇಂಗ್ಲಿಷ್ ಸಬ್ಟೈಟಲ್ಸ್ ಇದೆ. ಕನ್ನಡ ಡಬ್ಬಿಂಗ್ ಸಹಾ ಇದೆ. ಆದರೆ ತಮಿಳು ಸಂಭಾಷಣೆ ಬಹಳ ಅರ್ಥಗರ್ಭಿತ ಮತ್ತು ಸಹಜ ಶೈಲಿಯಲ್ಲಿದೆ ( ನನಗರ್ಥವಾಗುತ್ತದೆ, ೧೫ ವರ್ಷದಿಂದ ಚೆನ್ನೈ ನಲ್ಲಿರುವುದರಿಂದ )
ಕನ್ನಡದಲ್ಲಿ ಸಹಾ ಬಹಳ ಚೆನ್ನಾಗಿ ಡಬ್ ಮಾಡಿದ್ದಾರೆಂದು ಮಿತ್ರರು ಹೇಳುತ್ತಾರೆ ಆಯ್ಕೆ ನಿಮ್ಮಿಷ್ಟ.!! ಇಡೀ ಚಿತ್ರ ಬಹಳ ನೈಜವಾಗಿ ಮೂಡಿಬಂದಿದೆ. ಕೆಲವು ದೃಶ್ಯಗಳಂತೂ ನಾಯಕ (ನೆಡುಮಾರನ್) ಪಾತ್ರದಲ್ಲಿ ಸೂರ್ಯನ ಭಾವನಾತ್ಮಕ ಕಂಗಳಿಂದ ಮೂಡಿಬಂದ ಅಭಿನಯದಲ್ಲೇ ನೋಡಬೇಕು.
ಮಹಿಳಾ ನಿರ್ದೇಶಕಿ ಸುಧಾ ಕೊಂಗಾರಾ ನಾಯಕಿ ಬೊಮ್ಮಿಯ ( ಅಪರ್ಣ ಬಾಲಮುರಳಿ) ಪಾತ್ರವನ್ನು ಬಹಳ ನೈಜವಾಗಿ ಕಥೆಗೆ ಪೂರಕವಾಗಿ ಚಿತ್ರಿಸಿದ್ದಾರೆ.ಪರೇಶ ರಾವಲ್, ಮೋಹನ್ ಬಾಬು, ಪ್ರಕಾಶ ಬೆಳವಾಡಿ, ಅಚ್ಯುತ ಕುಮಾರ್ ಪೋಷಕ ಪಾತ್ರಗಳಲ್ಲಿ ಅದ್ಭುತ!ಖಂಡಿತಾ ಇದು ಈ ವರ್ಷದ ಕೆಲವು ಅವಾರ್ಡ್ಸ್ ಗೆಲ್ಲಲು ಅರ್ಹ ಚಿತ್ರ. ಉತ್ತಮ ಸಿನೆಮಾಪ್ರಿಯರು ಭಾಷೆಯ ಬೇಧವಿಲ್ಲದೇ ನೋಡಿ ಎಂಜಾಯ್ ಮಾಡಬೇಕಾದ ಚಿತ್ರ.ಪ್ರೈಂ ವಿಡಿಯೋ ದಲ್ಲಿ ನೋಡಲು ಲಭ್ಯ.
ರೇಟಿಂಗ್ = 4/5
https://www.primevideo.com/detail/0RIGXSH2D86B5V2RNHQOZVRGAD/ref=atv_dp_share_mv