Supertoys Last All Summer Long

2001ರಲ್ಲಿ ತೆರೆ ಕಂಡ ಚಿತ್ರ.

AI ..Stanley Kubric ನ ಕನಸಿನ ಕೂಸು ..ಬ್ರಿಯಾನ್ ಆಲ್ಡಿಸ್ ನ ಕತೆ “Supertoys Last All Summer Long” ನ ಹಕ್ಕುಗಳನ್ನು ೧೯೭೦ರ ಮೊದಲೇ ಪಡಕೊಂಡಿದ್ದರೂ , 2001: A space odessey ಯ ನಿರ್ಮಾಪಕ ನಿರ್ದೇಶಕ‌ ಕ್ಯುಬ್ರಿಕ್ ಗೆ ಇದರಲ್ಲಿನ ಮುಖ್ಯ ಪಾತ್ರ David ನ್ನು‌ ಸೃಷ್ಟಿಸಲು ಬೇಕಾದ computer-generated imagery ಆ ಕಾಲದಲ್ಲಿ ಲಭಿಸಿರಲಿಲ್ಲ.
ಆಗ ಸಿಕ್ಕವನು Steven Spielberg.


ಹೆನ್ರಿ ಮತ್ತು ಮೊನಿಕಾರ ಪುತ್ರ ಮಾರ್ಟಿನ್ ಯಾವುದೋ ಕಾರಣ ಗೊತ್ತಿಲ್ಲದ ಐಬಿನಿಂದ #suspended_animation ನಲ್ಲಿದ್ದಾನೆ. ಮೊನಿಕಾ ದುಃಖಿ. ಆಗ ಹೆನ್ರಿ ಮನೆಗೆ ಕರೆ ತರುತ್ತಾನೆ ಡೇವಿಡ್ ಎಂಬ ರೊಬೋಟ್ ಅನ್ನು…ಆಕೆಗೆ ನಂಬಲಾಗುವುದಿಲ್ಲ ಆತ ಒಂದು‌ mecha..ರೊಬೋಟ್..ನಿಜವಾಗಲೂ ಮನುಷ್ಯನಂತಿದ್ದಾನೆ.. ಕೆಲ ದಿನ ಹಿಂಜರಿಯುತ್ತಾಳೆ….#imprinting protocol activate ಮಾಡಲು..

ಆದರೆ ಮಾತೃತ್ತ್ವದ ಒಂದು‌ ಭಾವನಾತ್ಮಕ ಸನ್ನಿವೇಶದಲ್ಲಿ ಡೇವಿಡನ್ನು activate ಮಾಡುತ್ತಾಳೆ..ಅದುವರೆಗೂ ಮೊನಿಕಾ ಅನ್ನುತ್ತಿದ್ದ ಡೇವಿಡ್…ಅಮ್ಮಾ…ಅನ್ನುತ್ತಾನೆ.
…..ಆವಾಗ ಮಾರ್ಟಿನ್ ಗುಣಮುಖನಾಗಿ ಮನೆಗೆ ಬರುತ್ತಾನೆ…ದಾಯಾದಿ ಮತ್ಸರ…
….ಡೇವಿಡ್ ಗೆ ಅವನಮ್ಮ ಮಾರ್ಟಿನ್ ನ ಆಟಿಕೆ..ರೊಬೋಟ್ teddy ಕರಡಿ ಯನ್ನು ಕೊಟ್ಟಿರುತ್ತಾಳೆ…ಅದು ಕೊನೆ ವರೆಗೂ ಈತನ‌ ಜೊತೆಯಲ್ಲಿರುತ್ತದೆ……..


ಡೇವಿಡ್ ಗೆ ಅವನಮ್ಮ ಪಿನಾಕಿಯೋನ ಸಾಹಸಗಳ ಕತೆ ಹೇಳಿರುತ್ತಾಳೆ..
ಮರದ ಗೊಂಬೆಯಾಗಿದ್ದ ಪಿನಾಕಿಯೋನನ್ನು Blue Fairy ಹೇಗೆ ಮಾನವನ್ನಾಗಿ ಮಾಡಿದ್ದಳು ಎಂದು…….ಒಂದು ದಿನ ಅಮ್ಮ ಆತನನ್ನು ತ್ಯಜಿಸುತ್ತಾಳೆ….. mechaಗಳನ್ನು ನಾಶ ಪಡಿಸುವ ಕಾಡಿನೊಳಗೆ..ನಿನ್ನ ನ್ನು ನೀ ರಕ್ಷಿಸಿಕೋ ಎಂಬ ಕಾಳಜಿಯೊಂದಿಗೆ…

ಪ್ರೀತಿಯನ್ನೂ ವ್ಯಕ್ತ ಪಡಿಸುವ mecha ಡೇವಿಡ್ ಗಿರುವ ಗುರಿ ಒಂದೇ blue fairy ಯನ್ನು ಹುಡುಕುವುದು.ಅವನ ಆಸೆ blue fairy ತನ್ನನ್ನು ಮಾನವನಾಗಿಸಬಲ್ಲಳು..orga..ಮಾನವನಾದಲ್ಲಿ ನನ್ನಮ್ಮ ನನ್ನನ್ನು ಪ್ರೀತಿಸುತ್ತಾಳೆ…….
ಆಗ ಜೊತೆಯಾಗುವವನು ಜೋ..ಒಬ್ಬ Gigolo……


2000 ಸಂವತ್ಸರಗಳ ನಂತರ…ಮನುಷ್ಯ ಸಂತತಿಯೇ ಇರದ ಕಾಲದಲ್ಲಿ ..ಮುಂದುವರೆದ mecha ಗಳಿಗೆ ಡೇವಿಡ್ ಸಿಗುತ್ತಾನೆ.ಅವರಿಗೆ ಖುಷಿ … ಈತ ಮನುಷ್ಯರನ್ನ‌ ನೋಡಿದವ..ಡೇವಿಡ್ ಗೆ ಆತನಮ್ಮ ಸಿಗುತ್ತಾಳೆಯೇ?
AI.Artificial Intelligence.ಹಂದರ ಚೆನ್ನಾಗಿದೆ.ಆದರೆ Steven Spielberg ನ ಯೋಗ್ಯತೆಗಿದು below average.ಅದು ಹೇಗಿದೆ ಅಂದರೆ ನೊಲಾನ್ Dunkirk ಮಾಡಿದಂತೆ..ಅದು ಅವನ genre ಅಲ್ಲ.

Edit: ನೋಲಾನ್ ನ‌ Interstellar ಗೆ ಕ್ಯುಬ್ರಿಕ್ ನ‌ 2001: A Space odessey ಸ್ಪೂರ್ತಿ.. 

Rajesh Aithal

Rajesh Aithal

Leave a Reply