#Tenet (2020)-ವಿಚಿತ್ರ ಸತ್ಯ ಹೇಳುವ ವೈಜ್ಞಾನಿಕ ಥ್ರಿಲ್ಲರ್…ಕಾಲಯಾನಕ್ಕೆ ಸವಾಲ್!
#Timetravel Mysteryಇದೀಗ ಚಿತ್ರಮಂದಿರಗಳಲ್ಲಿ…~~~~~~~~~~~~~~~~~~~~~~~~~~~~~~
ಕ್ರಿಸ್ಟೋಫರ್ ನೋಲನ್ ತಲೆ ಕೆರೆದುಕೊಳ್ಳುವಂತಹಾ ಪ್ಲಾಟ್ ಇರುವ ಚಿತ್ರಗಳನ್ನುಮಾಡುವುದರಲ್ಲಿ ನಿಸ್ಸೀಮ( Inception, memento, Interstellar ಇತ್ಯಾದಿ)ಈ ಚಿತ್ರವನ್ನು ಸಹಾ ಅರ್ಥಮಾಡಿಕೊಳ್ಳಲು ಸ್ವಲ್ಪ ಹೆಣಗಬೇಕಾಗುತ್ತದೆ. ಸುಲಭವಲ್ಲವೇ ಅಲ್ಲ!ಜಾನ್ ಡೇವಿಡ್ ವಾಶಿಂಗ್ಟನ್ ಎಂಬ ಸಿ ಐ ಎಗೆ ಸೇರಿದ ನಾಯಕನಿದ್ದಾನೆ. ಟೆನೆಟ್ ಎಂಬ ವಿಶೇಷ ದಳ ಅವನಿಗೆ ಅಸೈನ್ಮೆಂಟ್ ಕೊಟ್ಟಿದೆ… ಭವಿಷ್ಯದವರು ಕಾಲದಲ್ಲಿ ಹಿಂದಕ್ಕೆ ಬರುವ ತಂತ್ರ ಉಪಯೋಗಿಸಿ ವರ್ತಮಾನದ ಮೇಲೆ ಯುದ್ಧ ಸಾರಿದ್ದಾರಂತೆ…ಅವರನ್ನು ಇವನು ಸೋಲಿಸಬೇಕಂತೆ…ಇದರಲ್ಲಿ ಹಿಂದಕ್ಕೆ ಬರಬಲ್ಲ ವಸ್ತುಗಳು,ಹಿಂದಕ್ಕೆ ಗನ್ ಗೆ ವಾಪಸ್ ಬರುವ ಬುಲೆಟ್, ಹಿಂದಕ್ಕೆ ಹೋಗುವ ಕಾರುಗಳು…ಅದರಲ್ಲಿ ಪಯಣಿಸುವ ವಿಲನ್ ಕಡೆಯ ಧೂರ್ತರು…ಚಿತ್ರದಲ್ಲಿ ಎಲ್ಲಾ ಹಿಂದಕ್ಕೆ ಹೋದಂತೆ ಕಾಣುತ್ತದೆ…ಚಿತ್ರ ಮಾತ್ರ ಮುಂದಕ್ಕೆ ಓಡುತ್ತದೆ…ಅಲ್ಲೊಬ್ಬ ರಶ್ಯನ್ ಮಿಲಿಯನೇರ್ ಖದೀಮ,ಪ್ರಪಂಚದ ಮೇಲೆ ಯುದ್ಧ ಕಾರಿರುವ ದುಷ್ಟ ನಾಯಕನಿಗೆ ಸಹಾಯ ಮಾಡುವ ದುಷ್ಟನ ಹೆಂಡತಿ.. ಅವನಿಗೆ ಕಾಲದಲ್ಲಿ ಉಲ್ಟಾ ಹೋಗುವ ಬುಲೆಟ್ಸ್ ಸರಬರಾಜು ಮಾಡುವ ಗನ್ ಡೀಲರ್ ಆಗಿ ಡಿಂಪಲ್ ಕಪಾಡಿಯಾ…ನಾಯಕನ ಜತೆ ರಾಬರ್ಟ್ ಪಾಟ್ಟಿನ್ಸನ್ ಎಂಬ ಜೊತೆಗಾರ!ಚಿತ್ರ ವಿಚಿತ್ರ ಸಾಹಸಮಯ ದೃಶ್ಯಗಳಿವೆ ಭರಪೂರವಾಗಿ.ಇದು ಯಾಕೆ, ಹೇಗೆ ಎಂದು ನೀವು ಯೋಚಿಸಬೇಕಾಗುತ್ತದೆ… ಚಿತ್ರ ಮುಗಿದ ಮೇಲೂ ಸಹಾ!! ( ಇದಕ್ಕೆ ನೀವು ಫಿಸಿಕ್ಸಿನ ಎಂಟ್ರೋಫಿ,ಇನ್ವರ್ಶನ್ ಸಿದ್ಧಾಂತವನ್ನು ಓದಿಕೊಳ್ಳಬೇಕಾಗುತ್ತದೆ)ಸುಮ್ಮನೆ ಎಂಜಾಯ್ ಮಾಡಲು ಖಂಡಿತಾ ಅಡ್ಡಿಯಿಲ್ಲ..ಭೇಷ್ ಎನ್ನಬಹುದಾದ ಸ್ಪೆಶಲ್ ಎಫೆಕ್ಟ್ಸ್ ಇವೆ…
3.5/5