The Walk

The Walk

ಆಗಸ್ಟ್ 7, 1974 ರ ಮುಂಜಾನೆ. ಅದೇ ತಾನೇ ಉದಯಿಸುತ್ತಿದ್ದ ಸೂರ್ಯ ರಶ್ಮಿಗಳು ನ್ಯೂಯಾರ್ಕ್ ನಗರವನ್ನು ಚುಂಬಿಸಿ ಮುತ್ತಿಡುತ್ತಿದ್ದ ಸಮಯ. ನ್ಯೂಯಾರ್ಕ್ ನಗರಿಗರು ಬೆಳಗಿನ ವಾಕಿಂಗೊ, ಜಾಗಿಂಗಿಗೆಂದೋ ವರ್ಲ್ಡ್ ಟ್ರೇಡ್ ಸೆಂಟರ್ ನ ಬಳಿ ನಡೆದಾದುತ್ತಿದ್ದವರೆಲ್ಲ ನಿಂತಲ್ಲೇ ನಿಂತು, ಆಕಾಶವನ್ನೇ ದಿಟ್ಟಿಸಿ ನೋಡದ ಹತ್ತಿದರು. ಎಂತಹ ಧೈರ್ಯಶಾಲಿಗಾದರೂ ಸರಿ, ಹೃದಯ ನಿಂತು ಹೋದೀತು ಅಂತಹ ಆಶ್ಚರ್ಯ. ಅಂತಹ ಮೈ ಝುಮ್ಮೆನ್ನುವ ಸಾಹಸ.ಸರಿಸುಮಾರು 1350 ಅಡಿಗಳ ಮೇಲೆ ಯಾವುದೇ ರಕ್ಷಣೆಯಿಲ್ಲದೆ ವರ್ಲ್ಡ್ ಟ್ರೇಡ್ ಸೆಂಟರ್ ನ ಎರಡು ಗೋಪುರಗಳ ನಡುವೆ ಕೇವಲ ಒಂದು ತಂತಿಯ ಮೇಲೆ ಅವನು ನಡೆದಾಡುತ್ತಿದ್ದ. ಅದೂ ಸುಮಾರು 25 ಕೆಜಿ ತೂಗುವ 26 ಅಡಿ ಉದ್ದದ ಬ್ಯಾಲೆನ್ಸಿಂಗ್ ಕೋಲನ್ನು ಕೈಯಲ್ಲಿ ಹಿಡಿದು. ಸುಮಾರು 45 ನಿಮಿಷ ನಡೆದ ಈ ಸಾಹಸವನ್ನು ಕಣ್ಣಿನ ರೆಪ್ಪೆ ಮುಚ್ಚದೆ ನ್ಯೂಯಾರ್ಕ್ ನಗರಿಗರು ನೋಡಹತ್ತಿದರು.

The Walk

ಹೌದು. ಇಂತಹ ಒಂದು ಅದ್ಭುತ ಸಾಹಸಿಗನೆ 24 ರ ಹರೆಯದ ನಮ್ಮ ಹೀರೋ ಫಿಲಿಪ್ ಪಟಿಟ್. ಮೂಲತಹ ಫ್ರೆಂಚ್ ಪ್ರಜೆಯಾಗಿದ್ದ ಇವ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ತಂತಿಯ ಮೇಲೆ ನಡೆಯಬೇಕೆಂಬ ಧೃಢ ನಿಶ್ಚಯದೊಂದಿಗೆ ಬಂದು ಸೇರಿದ್ದು ನ್ಯೂಯಾರ್ಕ್ ನಗರಕ್ಕೆ. ಆಗಿನ್ನೂ ವರ್ಲ್ಡ್ ಟ್ರೇಡ್ ಸೆಂಟರ್ ನಿರ್ಮಾಣವಾಗುತ್ತಿದ್ದ ಸಮಯ. ಕಟ್ಟಡ ನಿರ್ಮಾಣ ಕಾರ್ಮಿಕನಂತೆ ವೇಷ ಮರೆಸಿಕೊಂಡು,ಟ್ವಿನ್ ಟವರ್ ನ ಇಂಚಿಂಚೂ ಅಲೆದಾಡಿದ.ಅವನ ಮೆದುಳಿನ ಮೆಮೊರಿ ಚಿಪ್ ತುಂಬೆಲ್ಲ ಟ್ವಿನ್ ಟವರ್ನ ಉದ್ದ, ಅಗಲ, ಎತ್ತರಗಳೇ ಮುಂತಾದ ಡಾಟಾಗಳಿಂದ ತುಂಬಿ ಹೋಗಿತ್ತು. ತನ್ನ ಸ್ನೇಹಿತರ ನೆರವಿನಿಂದ ಎರಡೂ ಟವರ್ ಗಳ ನಡುವೆ ಹಗ್ಗ ಹಾಯಿಸಿ, ಅದರ ಮೂಲಕ ಸುಮಾರು 200 ಕೆಜಿ ಭಾರದ ತಂತಿ ಬಿಗಿದು, ತನ್ನ ಸಾಹಸಕ್ಕೆ ವೇದಿಕೆ ಸಿದ್ದಗೊಳಿಸಲು ತೆಗೆದುಕೊಂಡ ಸಮಯ ಕೇವಲ ಒಂದು ರಾತ್ರಿ.ಅದೂ ಕೆಲಸಗಾರರ ಕಾವಲುಗಾರರ ಕಣ್ಣು ತಪ್ಪಿಸಿ ಮಾಡಬೇಕಾದ ಕೆಲಸ. ಇಂತಹ ಸಾಹಸ ಮಾಡುವಾಗ ರಕ್ಷಣೆಗಾಗಿ ಒಂದು ಹಗ್ಗ ಬಿಗಿದಿರು ಎಂಬ ತನ್ನ ಗುರುಗಳಾದ ಪಾಪ ರೂಡಿಯ ಮಾತನ್ನೂ ಸಹ ನಯವಾಗೆ ತಿರಸ್ಕರಿಸಿದ. ತಾನಾಯಿತು ತನ್ನ ಕನಸಾಯಿತು ಗುರಿಸಾಧನೆಗೆ ಬೇಕಾದ ವಿಷಯವಾಯಿತು ಇವಿಷ್ಟೇ ಅವನ ಪ್ರಪಂಚ.ಕಡೆಗೂ ಗೆದ್ದೇ ಬಿಟ್ಟ. ಇದೇ ನ್ಯೂಯಾರ್ಕ್ ನಗರವೇ ನಿಬ್ಬೆರಗಾಗುವ ಸಾಹಸ ಮಾಡಿಬಿಟ್ಟ.ಅದೂ ಸುಮಾರು 45 ನಿಮಿಷಗಳ ಕಾಲ.ಟ್ವಿನ್ ಟವರ್ ಗಳ ನಡುವೆ ಎಂಟು ಬಾರಿ ಓಡಾಡಿದ್ದ ಕೇವಲ ಒಂದು ಹಗ್ಗದ ಮೇಲೆ.ಒಮ್ಮೆಯಂತೂ ಹಗ್ಗದ ಮೇಲೆ ಮಲಗೆಬಿಡ್ತಾನೆ.ಆ ದೃಶ್ಯ ನೋಡಿದಾಗಲಂತೂ ಎದೆ ಧಸಕ್ಕೆನ್ನುವುದು ಸತ್ಯ.

ತನ್ನ ಈ ಸಾಹಸವನ್ನೆಲ್ಲ ಅವನು ತನ್ನ ಪುಸ್ತಕವಾದ To Reach the Clouds
ನಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾನೆ.ಅವನ ಈ ಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವಲ್ಲಿ ಸಹ Robert Zemeckis ಅದ್ಭುತ ಕೆಲಸ ಮಾಡಿದ್ದಾರೆ. ಮನಸಿಗೆ ತುಂಬಾ ಬೇಜಾರಾದಾಗ ನಾನು ನೋಡುವ ಕೆಲವು ಚಿತ್ರಗಳಾದ The forrest Gump, Cast Away, A Beautiful Mind, The Pursuit of happiness, The shashawnk Redemption, The theory of everyting ಗಳ ಸಾಲಿಗೆ ಹೊಸ ಸೇರ್ಪಡೆ The Walk …ಇಂತಹ ಒಂದು ಉತ್ತಮ ಮೊಟಿವೆಶನಲ್ ಚಿತ್ರ ಕೊಟ್ಟ ರಾಬರ್ಟ್ ಅವರಿಗೊಂದು ಸ್ಪೆಶಲ್ ಥ್ಯಾಂಕ್ಸ್. ದಯವಿಟ್ಟು ಮಿಸ್ ಮಾಡದೆ ಒಮ್ಮೆ ನೋಡಿ….

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply