ನಿರ್ದೇಶಕ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಭಿಷೇಕ್ ಅಂಬರೀಷ್ ನಟನೆಯ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಬರುವ ಅಕ್ಟೋಬರ್ 5 ರಿಂದ ಪುನಃ ಆರಂಭವಾಗಲಿದೆ.

ಸಾಹಸ ಭರಿತ ಈ ಚಿತ್ರದ ಚಿತ್ರೀಕರಣವನ್ನು ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದ್ದರೂ ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು.
ಸದ್ಯ ಪರಿಸ್ಥಿತಿಯು ಕೂಡ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಕಲಾವಿದರು ಮತ್ತು ಸಿನಿಮಾ ಸಿಬ್ಬಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿದ್ದಾರೆ.