02/12/2022

CHITRODYAMA.COM

SUPER MARKET OF CINEMA NEWS

ಥ್ರಿಲ್ಲರ್ ಮಂಜುಗೆ ಶಂಕರ್ರಣ್ಣನ ಆಶೀರ್ವಾದ

ಇವತ್ತಿನ ಕನ್ನಡ ಸಿನಿಮಾದ ಸ್ಟಂಟ್ಮಾಸ್ಟರ್ಗಳ ಅಗ್ರಜ ಅಂತ ಯರನ್ನಾದ್ರೂಕರೆಯೋದಾದ್ರೆ,ಅದು ನಮ್ಮ “ಥ್ರಿಲ್ಲರ್ ಮಂಜು” ಅವರಿಗೆ ಹೊಂದುತ್ತೇ.ಇಲ್ಲಿಯ ತನಕ ಅಂದಾಜು 550 ಚಿತ್ರಗಳಲ್ಲಿ  ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಕನ್ನಡದ ಎಲ್ಲಾ ಅಷ್ಟದಿಗ್ಗಜರಿಗೂಫೈಟ್ಸ್ಹೇಳಿಕೋಟ್ಟು, ಅತಿ ಅಪಾಯಕಾರಿ ಸನ್ನಿವೇಶಗಳನ್ನುನೋಡುಗನಿಗೆರೋಮಾಂಚನವಾಗುವಂತೆ ಮಾಡುವುದೇ ಇವರ ವಶೇಷ.

ಇದೆಲ್ಲ ಶುರುವಾದದ್ದುಹೇಗಂದ್ರೆ,ಪರಿಪೂರ್ಣ ಸಾಹಸ ನಿರ್ದೇಶಕ ಆಗುವ ಮುನ್ನ ಸುಮಾರು 150 ಸಿನಿಮಾಗಳಲ್ಲಿಫೈಟರ್(ಸಾಹಸ ಕಲಾವಿದ)ಆಗಿ ಕೆಲಸ ಮಾಡಿದ ಅನುಭವವಿತ್ತು.80ರ ದಶಕದಲ್ಲಿ ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ ಪ್ರಮುಖ ಸ್ಟಂಟ್ಮಾಸ್ಟರ್ಗಳೆಲ್ಲ ಹೊರ ರಾಜ್ಯದವರೆ;

ಜೂಡೊರತ್ನಮ್,ವಿಜಯ್,ಸೊಹೈಲ್,ಹಿರ್ಸ್ಮನ್ ಬಾಬು ಮತ್ತು ಶಿವಯ್ಯ ಮಾಸ್ಟರ್. ಹೀಗಿರುವಾಗ ಒಮ್ಮೆ “ಶಂಕರನಾಗ್” ಅಭಿನಯಾದ ನರಸಿಂಹ ಅನ್ನೋ ಸಿನಿಮಾ ಸೆಟ್ಟೇರಲಿದೆ ಅನ್ನೋ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟಿಗಿಂಡಿತ್ತು.

ಆ ಸಿನಿಮಾಗೆ ತಾನು ಸಾಹಸ ನಿರ್ದೇಶಕನಾಗಿ ಕೆಲಸ ಮಾಡಬೇಕು ಅನ್ನೋ ಹಂಬಲ ಮಂಜು ಅವರಲ್ಲಿ ಮೂಡುತ್ತೆ.ನೇರವಾಗಿಶಂಕರನಾಗ್ ಅವರ ಬಳಿ ಹೋಗಿ ತಮ್ಮ ಅಭಿಲಾಷೆಯನ್ನುಹಂಚಿಕೊಂಡಾಗ, ಶಂಕರನಾಗ್ ಅವರು ಮರು ಚಿಂತಿಸದೆ ಮಂಜು ಅವರ ಬೆನ್ನು ತಟ್ಟಿ “ಖಂಡಿತ ನೀನು ಮಾಡು ನಿನಗೆ ಒಳ್ಳೆಯುದುಆಗುತ್ತೆ, ಮೇಲಾಗಿ ನೀನು ನಮ್ಮ ಕನ್ನಡದ ಹುಡುಗ ನೀನು ಈ ಕ್ಷೇತ್ರದಲ್ಲಿ ಬೆಳೆಯಬೇಕು” ಅಂತ ಹೇಳಿ ಮಂಜು ಅವರನ್ನ ಮೊದಲ ಬಾರಿಗೆ ಪರಿಪೂರ್ಣ ಸಹಾಸ್ನಿರ್ದೇಶಕರಾಗಿ ಕೆಲಸ ಮಾಡಲು ಅವಕಾಶ ನೀಡುತ್ತಾರೇ. ಅಂದು ಶಂಕರ ನಾಗ್ ಬೆನ್ನು ತಟ್ಟಿ ಹೇಳಿದ್ದನ್ನ, ಆಶೀರ್ವಾದವನ್ನಾಗಿ ಪರಿಗಣಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆಫೈಟ ಮಾಸ್ಟರ್ “ಥ್ರಿಲ್ಲರ್ ಮಂಜು” ಅವ್ರು.

Leave a Reply

Copyright © All rights reserved. | Newsphere by AF themes.