“ಕ್ಯಾಪ್ಟನ್ ಆಫ್ ದಿ ಷಿಪ್ “
1 min read
ನಿದೇ೯ಶಕರು “ಕ್ಯಾಪ್ಟನ್ ಆಫ್ ದಿ ಷಿಪ್ ” ಇದ್ದ ಹಾಗೆ, ದೋಣಿ ನಡೆಸಿಕೊಂಡು ಹೋಗಲು ಕ್ಯಾಪ್ಟನ್ ಅಂದ್ರೆ ಷಿಪ್ ಚಲಾಯಿಸುವವರು ತುಂಬಾ ಮುಖ್ಯ, ಸರಿಯಾಗಿ ಚಲಿಸಲಿಲ್ಲವಾದಲ್ಲಿ ಅಫಘಾತ ಆಗುವುದು ಖಂಡಿತ.
ಹಾಗೆ ಒಂದು ಚಿತ್ರ ನಿದೇ೯ಶಿಸುವುದು ಸುಲಭದ ಮಾತಲ್ಲ, ಇಡೀ ಚಿತ್ರ ನಿಲ್ಲುವುದು ಒಬ್ಬ ಚಾಣಾಕ್ಷ, ಬುಧ್ಧಿವಂತರಾದ ನಿದೇ೯ಶಕರ ಮೇಲೆ, ಒಂದು ವೇಳೆ ಚಿತ್ರ ಚೆನ್ನಾಗಿಲ್ಲವಾದಲ್ಲಿ ನಿದೇ೯ಶಕರು ಕೆಲವು ಸಮಯದಲ್ಲಿ ಹೊಣೆಗಾರರಾಗಿರುವುದು ನಿಮಗೆ ತಿಳಿದಿರೋ ವಿಷಯ, ಚಲನಚಿತ್ರ ನಿದೇ೯ಶನವೊಂದು ಕಲೆ, ಹೇಗೆ ತಮ್ಮ ಮಗುವನ್ನು ಎಷ್ಟು ಪ್ರೀತಿಸುತ್ತಾರೋ ಹಾಗೆ ಚಲನಚಿತ್ರ ನಿದೇ೯ಶಿಸಿ ಪ್ರೇಕ್ಷಕರು ಮೆಚ್ಚುವಂತೆ ಮಾಡುವುದು ನಿಜಕ್ಕೂ ಒಂದು ರೀತಿಯ ಸಾಹಸ.
“ಯಾವ ಚಿತ್ರದ ಸನ್ನಿವೇಶ ,ಸಂಭಾಷಣೆ , ಗೀತೆ, ಫೈಟ್ಸ್ ಹೇಗೆ ಬಂದೆ ಜನಗಳು ಮೆಚ್ಚುತ್ತಾರೆ ಎನ್ನುವುದನ್ನು ತುಂಬಾ ತಲೆ ಕೆಡಿಸಿಕೊಂಡು ಅಧ್ಭುತವಾದ ಚಿತ್ರ ನೀಡುವುದು ಅವರ ಹೊಣೆಯಾಗಿರುತ್ತೆ”.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಮತ್ತು ಮುಂಬರುವ ಎಲ್ಲಾ ನಿದೇ೯ಶಕರುಗಳಿಗೆ ನಮ್ಮ ಅನಂತ ಅನಂತ ನಮನಗಳು 🙏
ನಿದೇ೯ಶಕರ ದಿನ
ಶ್ರೀನಿವಾಸ್ ಅವರ ಲೇಖನಗಳು ಬಾಳ ಸೊಗಸಾಗಿ ಇದೆ.. ಇನ್ನು ಸ್ವಲ್ಪ.ವಿಸ್ತಾರ ಮಾಡಿ ವರದಿ ಬಂದರೆ ಇನ್ನು ಚೆನ್ನಾಗಿ ಇರುತ್ತೆ.
Thank u.
Please read our articles regularly, Please tell your friends to read the articles also regularly.