K.G.F -2 ಸಿನಿಮಾದ ಶೂಟಿಂಗ್ ಪುನರಾರಂಭಗೊಂಡಿದೆ. ಸಿನಿಮಾಗೆ ಪ್ರಕಾಶ್ ರಾಜ್ ಹೊಸ ಸೇರ್ಪಡೆ. ದಕ್ಷಿಣ ಭಾರತದ ಅಪ್ರತಿಮ ಕಲಾವಿದ, ಅನ್ಯ ಭಾಷಿಕರು ಪ್ರೀತಿಸುವ ಕನ್ನಡಿಗ ಇದೀಗೆ K.G.F-2 ನ ಬಹುಮುಖ್ಯ ಪಾತ್ರವಾಗಿ ಬರಲಿದ್ದಾರೆ.ಲಾಕ್ಡೌನ್ ವೇಳೆ ಚಿತ್ರದ ಸ್ಕ್ರಿಪ್ಟ್ ಅನ್ನ ಸ್ವಲ್ಪ ಬದಲಾಯಿಸಿ ಮತ್ತಷ್ಟು ಟ್ವಿಸ್ಟ್ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಸಿನಿಮಾದ ಶೂಟಿಂಗ್ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಾಗಿದೆ. ಪ್ರಕಾಶ್ ರಾಜ್ರ ಸ್ಟಿಲ್ ಗಳನ್ನ ಗಮನಿಸಿ ಹಲವರು ತಿಳಿದಿದ್ದರೆ ಅವರು ಅನಂತ್ ನಾಗ್ ಅವರ ಪಾತ್ರ ವಹಿಸಿ, ಅನಂತ ನಾಗ್ ಅವರಿಗೆ ಪರ್ಯಾಯವಾಗಲಿದ್ದಾರೆ ಅಂತ. ಆದ್ರೆ ಅದು ಜನರ ಊಹೆ ಅಷ್ಟೇ,ಯಾವುದು ನಿಜ ಅಲ್ಲ ಅಂತ ನಿರ್ದೇಶಕ ಸ್ಪಷ್ಟ ಪಡಿಸಿದ್ದಾರೆ. KGF2 ಸಿನಿಮಾದಲ್ಲಿ ಅನಂತ್ ನಾಗ್ ಇರ್ತಾರೆ ಜೊತೆಗೆ ಪ್ರಕಾಶ್ ರಾಜ್ ಕೂಡ ಇರ್ತಾರೆ …
ಪ್ರಕಾಶ್ ರಾಜ್ in K.G.F.2
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಒಂದು ಕತ್ತಲ ರಾತ್ರಿ. ಒಬ್ಬಳು ಹುಡುಗಿ ಒಂಟಿಯಾಗಿ ಕಾರ್ ಡ್ರೈವ್ ಮಾಡುತ್ತಾ ಬರುತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಾರಿನಲ್ಲಿದ್ದ ರೇಡಿಯೋದಲ್ಲಿ ಈಗ ನಾವಿರುವ ಭೂಮಿಯ ಪಕ್ಕದಲ್ಲೇ ಮತ್ತೊಂದು ಭೂಮಿ ಕಾಣಿಸಿಕೊಂಡಿರುವ…
ಆನಂದ್ ಅತಿ ಶ್ರೀಮಂತ. ಅವನಿಗೆ ಸಿಕ್ಕ ಅತಿ ವೃದ್ಧ ದಂಪತಿಗಳು ಹೆಂಡತಿಗಿರಬೇಕಾದ ಆರು ಗುಣಗಳನ್ನು ಹೇಳುತ್ತಾರೆ. ಆನಂದ್ ಅವಳನ್ನು ಹುಡುಕಿ ಹೊರಡುತ್ತಾನೆ. ಒಬ್ಬ ಹಾವಾಡಿಗರ ಹುಡುಗಿ, ಒಬ್ಬ…