ಅಂಜನೀಪುತ್ರ

ಕನ್ನಡ ಚಿತ್ರ: ಅಂಜನೀಪುತ್ರ (೨೦೧೭)

ನಿರ್ದೇಶಕ : ಎ.ಹರ್ಷಾ

  ಎ. ಹರ್ಷಾ ನಿರ್ದೇಶನದ ಮತ್ತು ನಟ ಪುನೀತ್ ರಾಜಕುಮಾರ್ ಅಭಿನಯದ ಚಿತ್ರ ಅಂಜನಿಪುತ್ರ ಮೂಲ ನಟ ವಿಶಾಲ್ ಅಭಿನಯದ ತಮಿಳು ಸೂಪರ್ ಹಿಟ್ ಪೂಜಾಯಿ ಚಿತ್ರದ ರಿಮೇಕ್ ಆಗಿದ್ದರೂ ಚಿಕ್ಕ ಬದಲಾವಣೆಗಳೊಂದಿಗೆ ಚಿತ್ರವನ್ನು ನಿರ್ಮಿಸಿಲಾಗಿದೆ. 

ವಿರಾಜ್ ಎನ್ನುವ ವ್ಯಕ್ತಿಯ ಕೌಟುಂಬಿಕ ಹಿನ್ನೆಲೆಯುಳ್ಳ ಪ್ರಯಣ ಭರಿತ ಚಿತ್ರವಾಗಿದ್ದು ನಾಯಕ ವಿರಾಜ್ ತನ್ನ ತಂದೆಯ ಮರಣದ ನಂತರ ತನ್ನ ತಂದೆಯ ಜವಳಿ ಉದ್ಯಮ ರಾಜ್ ಗ್ರುಪ್ ಆಫ್ ಇಂಡಸ್ಟ್ರಿಯ ಮಾಲೀಕರಾಗುತ್ತಾರೆ. ಆದರೆ ಒಂದು ದಿನ ಕುಟುಂಬದ ಸಮಾರಂಭದಲ್ಲಿ ಸೋದರ ಸಂಬಂಧಿಯ ಮಗಳ ವಿಷಯದಲ್ಲಿ ತಪ್ಪು ಗ್ರಹಿಕೆಯಿಂದ ವಿರಾಜ್ ನ ತಾಯಿ ಅಂಜನಾ ದೇವಿ ಮಗನ ಬಗ್ಗೆ ತಿಳಿದಿದ್ದರೂ ಮಾಡದ ತಪ್ಪಿಗಾಗಿ ಆಲೋಚಿಸದೇ ಮನೆಯಿಂದ ಹೊರಗೆ ಹಾಕುತ್ತಾಳೆ.

ನಾಯಕ ವಿರಾಜ್ ಪ್ರಾಮಾಣಿಕನಾಗಿದ್ದರಿಂದ ತಾಯಿಯ ಮಾತನ್ನು ವಿರೋಧಿಸದೇ ಮನೆಯಿಂದ ಹೊರಗೆ ಬರುತ್ತಾನೆ. ಚಿತ್ರದಲ್ಲಿ ನಾಯಕ ಕಷ್ಟದಲ್ಲಿ ಇರುವವರೆಗೆ ಸಾಲ ಕೊಡುವವನಾಗಿದ್ದು ಒಳ್ಳೆಯ ಸಂಸ್ಕಾರ ಹುಡುಗನಾಗಿರುತ್ತಾನೆ.ಇವನು ಪ್ರೀತಿಸುವ ಹುಡುಗಿ ಇವನ ದೈನಂದಿನ ಜೀವನವನ್ನು ನೋಡಿ ಪ್ರೀತಿಯನ್ನು ತಿರಸ್ಕರಿಸುತ್ತಾಳೆ.ಆಗ ನಾಯಕನ ಸ್ನೇಹಿತ ವಿರಾಜ್ ನ ರಾಜಮನೆತನದ ಹಿನ್ನೆಲೆಯನ್ನು  ಮತ್ತು ಮನೆಯವರ ತಪ್ಪು ಗ್ರಹಿಕೆಯಿಂದ ದೂರವಿರುವುದನ್ನು ನಾಯಕಿ ಗೀತಾಳಿಗೆ ತಿಳಿಸುತ್ತಾನೆ. ಪುನಃ ತನ್ನ ಕುಟುಂಬವನ್ನು ಸೇರುವ ನಾಯಕ ವಿರಾಜ್ ತನ್ನ ಕುಟುಂಬದವರ ರಕ್ಷಣೆಗಾಗಿ ಖಳನಾಯಕನೊಂದಿಗೆ ಹೋರಾಡಿ ತನ್ನ ಕುಟುಂಬವನ್ನು ರಕ್ಷಿಸುತ್ತಾನೆ.

ಇದು ಕೌಟುಂಬಿಕ ಪ್ರಧಾನ ಚಿತ್ರವಾಗಿದ್ದು ಇದರಲ್ಲಿ ಹಾಸ್ಯಕ್ಕೆ, ರೋಮಾಂಚನಕಾರಿ ಸಾಹಸ ಸನ್ನಿವೇಶಗಳಿಗೆ ಕೊರತೆಯಿಲ್ಲದ ಉತ್ತಮ ಗುಣಮಟ್ಟದ ಮನೋರಂಜನೆಯ ಚಿತ್ರವಾಗಿದೆ. ಮುಖ್ಯವಾಗಿ ಪುನೀತ್ ರಾಜಕುಮಾರ್ ನಟನೆಯ ಚಿತ್ರವಾಗಿರುವುದರಿಂದ ಈ ಚಿತ್ರದಲ್ಲಿ ತಪ್ಪುಗಳು ಕಂಡು ಬರುವ ಅವಕಾಶವೇ ಇಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply