ಹುಟ್ಟು ಹಬ್ಬದ ಶುಭಾಷಯ ಕೋರಲು ಸಾಗರದಂತೆ ಹರಿದು ಬಂದ ಅಭಿಮಾನಿ ಬಳಗ
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಳಿಯ, ಕಿರುತ್ತಾರೆಯ ಸೂಪರ್ ಸ್ಟಾರ್ “ಅನಿರುದ್ಧ” ಇಂದು 47ನೆ ವಸಂತಕ್ಕೆ ಕಾಲಿಟ್ಟರು. ಕುಟುಂಬದ ಸದಸ್ಯರೊಂದಿಗೆ ಸ್ವಗೃಹದಲ್ಲಿ ಕೇಕ್ ಕಟ್ ಮಾಡಿದ ಬಳಿಕ ಜಯನಗರದಲ್ಲಿರುವ ವಿಷ್ಣು ದಾದಾ ಅವರ ಮನೆಯ ಬಳಿ ಬಂದು ಅಭಿಮಾನಿಗಳ ಜೊತೆಗೆ ಸಂಭ್ರಮದ ಸಮಯಕ್ಕೆ ಸಾಕ್ಷಿಯಾದರು. ಅನಿರುದ್ಧ ಅವರನ್ನು ಕಂಡು ಹುಟ್ಟು ಹಬ್ಬದ ಶುಭಾಷಯ ತಿಳಿಸಲು ಅಭಿಮಾನಿಗಳು ಮಂಡ್ಯ, ದೂರದ ಗುಲ್ಬರ್ಗ ಹಾಗೂ ಮೈಸೂರಿನಿಂದ ಬಂದಿದ್ದರು. ಡಾ. ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ನೆಚ್ಚಿನ ನಾಯಕನ ಅಳಿಯನ ಯಶಸ್ಸು ಏಳಿಗೆಗೆ ಹರಸಿ ಶುಭ ಕೋರಿದರು. ಹಾರ ಪೇಟ ಹಾಕಿ ಸನ್ಮಾನಿಸಿ, ಕೇಕು ಸ್ವೀಟ್ಸ್ ಗಳಿಂದ ಬಾಯಿ ಸಿಹಿ ಮಾಡಿ, ಮನಸ್ಸಿಗೆ ಮುದ ನೀಡುವ ಪ್ರೀತಿಯ ಜಯಘೋಷಗಳಿಂದ “ಯುವ ಕೇಸರಿ ಅನಿರುದ್ಧರ” ಹುಟ್ಟಿದ ದಿನವನ್ನ ವಿಶೇಷವಾಗಿ ಆಚರಿಸಲಾಯಿತು. ಅನ್ನದಾನದ ಏರ್ಪಾಡು ಸಹ ಮಾಡಲಾಗಿತ್ತು. ಬಂದ ಅಭಿಮಾನಿಗಳ ಜೊತೆಗೆ ಮಂದಸ್ಮಿತರಾಗಿ ಫೋಟೊ ಕ್ಲಿಕ್ಕಿಸಿಕೊಂಡ್ರು. ಅಭಿಮಾನಿಯೊಬ್ಬರು ವಿಷ್ಣುವರ್ಧನ್ ಭಾರತಿ ದಂಪತಿ ಹಾಗೂ ಅನಿರುದ್ಧ ಕೀರ್ತಿ ದಂಪತಿಗಳ ಫೋಟೋ ಹಾಕಿಸಿದ್ದ ಮಗಳ ವಿವಾಹ ಆಮಂತ್ರಣ ಪತ್ರಿಕೆ ತಂದಿದ್ದಿದ್ದು ವಿಶೇಷವಾಗಿತ್ತು.
ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅನಿರುದ್ಧ ಅವರು ಅಭಿಮಾನಿಗಳ ಈ ತುಂಬು ಹೃದಯದ ಪ್ರೀತಿಗಿಂತ ದೊಡ್ಡ ಉಡುಗೊರೆ ಯಾವುದು ಇಲ್ಲಾ ಎಂದರು.
ಇಂಡಿಯನ್ ವಿಷ್ಣು ಫಾನ್ಸ್, ವಿಷ್ಣು ಸೇನಾ ಸಮಿತಿ, ಸನ್ ಸ್ಟಾರ್ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಹಾಗೂ ಇನ್ನು ಹತ್ತು ಹಲವು ಅಭಿಮಾನಿ ಸಂಘಗಳ ಸದಸ್ಯರು ದೊಡ್ದ ಗುಂಪಿನಲ್ಲಿ ಆಗಮಿಸಿದ್ದರು.
ಸೂಪರ್ ಸರ್.. ಅನಿರುದ್ಧ ರವರ ಯಶಸ್ಸಿನ ಹಾದಿ ಹೀಗೆ ಸಾಗಲಿ