“ಅನ್ನದಾನ ಮಹಾದಾನ” 🙏

“ಅನ್ನದಾತೋ ಸುಖೀಭವ “
“ಅನ್ನಂ ಪರಬ್ರಹ್ಮಂ ಸ್ವರೂಪಂ”

ಹಸಿವು ಅನ್ನೋದು ಯಾರಿಗಿಲ್ಲ ಹೇಳಿ.. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾವ ನೋವನ್ನು ಬೇಕಾದರೂ ತಡೆಯಬಹುದು, ಹಸಿವಿನ ನೋವನ್ನು ತಡೆಯಲು ತಾಳಲು ಸಾಧ್ಯವೇ..

ತನ್ನ ಹಸಿವು ನೀಗಿಸೋಕೆ ಮನುಷ್ಯ ಮಾಡಬಾರದ ಕೆಲಸ ಮಾಡಿ ಹಸಿವು ಕಡಿಮೆ ಮಾಡ್ಕೊತಾನೆ, ಕೆಲವರು ಕಷ್ಟ ಪಟ್ಟು ಕೆಲಸ ಮಾಡಿ ಊಟ ಮಾಡ್ತಾರೆ ಇನ್ನೂ ಕೆಲವರು ಇನ್ನೊಬ್ಬರಿಗೆ ಮೋಸ ಮಾಡಿ ತಿನ್ತಾರೆ, ಪ್ರಪಂಚದಲ್ಲಿ ಎಷ್ಟೋ ಜನಗಳು ಹಸಿವಿನಿಂದ ಜೀವ ಕಳೆದುಕೊಂಡಿರೋ ಸಂಗತಿಗಳು ನಮ್ಮ ಕಣ್ಣ ಮುಂದೆ ಇದೆ, ಇಂದು ವಿಶ್ವ ಹಸಿವಿನ ದಿನ💐🌹

ಯಾರಾದರೂ ಹಸಿವು ಅಂತ ಬಂದಾಗ ಕೈಲಾದರೆ ನಿಮ್ಮ ಹತ್ತಿರ ಇರೋ ಅಲ್ಪ ಸ್ವಲ್ಪ ಏನಾದರೂ ಕೊಡಿ, ಹಾಗೆ ಕಳುಹಿಸಬೇಡಿ, ಯೋಕಂದರೆ ಹಸಿವು ಅನ್ನೋದು ನರಕಕ್ಕಿಂತ ದೊಡ್ಡದು.

ದುಡ್ಡು ಇರೋ ಶ್ರೀಮಂತರು ತಟ್ಟೆಗೆ ಎಷ್ಟು ಬೇಕೋ ಅಷ್ಟು ಹಾಕಿಸಿಕೊಳ್ಳದೆ ಒಂದೇ ಸಮನೆ ಊಟ ಹಾಕಿಕೊಂಡು ತಿನ್ನದೆ ಅಧ೯ಕ್ಕದ೯ ಅನ್ನ ವೇಸ್ಟ್ ಮಾಡ್ತಾರೆ, ಅಂಥವರು ತಮಗೆ ತಿನ್ನಲು ಎಷ್ಟು ಬೇಕೋ ಅಷ್ಟು ಮೊದಲೆ ಹಾಕಿಕೊಂಡರೆ, ಉಳಿದ ಅನ್ನವನ್ನು ಬಡವರಿಗೆ ದಾನ ಮಾಡಿದರೆ ಇದಕ್ಕಿಂತ ಒಳ್ಳೆ ದಾನ ಬೇರೊಂದಿಲ್ಲ. ಮದುವೆ, ಮುಂಜಿ ಶುಭ ಸಮಾರಂಭಗಳಲ್ಲಿ ಎಲೆಯಲ್ಲಿ ಹೆಚ್ಚು ಹಾಕಿಸಿಕೊಂಡು ಹೀಗೆ ವ್ಯಥ೯ ಮಾಡೋದು ದಯವಿಟ್ಟು ಕಡಿಮೆ ಮಾಡಿ, ಮಿಕ್ಕಿದ್ದನ್ನು ಹಸಿವು ಅನ್ನೋರಿಗೆ ಊಟ ನೀಡಿ.

“ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ”

ನಾವು ತಿನ್ನುವ ಅನ್ನ ಎಲ್ಲೋ ಇರೋ ರೈತ ಬೆವರು ಸುರಿಸಿ ಕಷ್ಟ ಪಟ್ಟಿದ್ದಕ್ಕೆ ಅನ್ನ ನಮಗೆ ಸಿಗುತ್ತಿರೋದು, ಅಂತ ಎಷ್ಟೋ ರೈತರುಗಳು ದಣಿವರಿಯದೆ ಇಡೀ ದೇಶಕ್ಕೆ ಅನ್ನ ನೀಡುತ್ತಿರುವ ಮಹಾನ್ ಕಾಯ೯ಕ್ಕೆ ನಮ್ಮ ನಮನಗಳು 🙏

“ಆಹಾರ ಉಳಿಸಿ ಹಸಿವು ನೀಗಿಸಿ”
ನಿಮಗೆ ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಊಟ ಮಾಡಿ.

ಊಟದ ವಿಷಯದಲ್ಲಿ ಎಕ್ಸಾಂಪಲ್ ಅಣ್ಣಾವೃ ಎಲೆಯಲ್ಲಿ ಹಾಕಿದ ಎಲ್ಲಾ ಊಟವನ್ನು ಮುಗಿಸುತ್ತಿದ್ದರು, ಒಂದಗಳೂ ಕೂಡ ಬಿಡುತ್ತಿರಲಿಲ್ಲ. ಒಂದು ಘಟನೆ ನಿಮ್ಮ ಬಳಿ ಹಂಚಿಕೊಳ್ಳುವೆ ಅಣ್ಣಾವೃ ಮತ್ತು ದೊರೈ ಭಗವಾನ್ ತಂಡ ಒಂದು ಊರಿನಲ್ಲಿ ಚಿತ್ರೀಕರಣ ಮಾಡಿ ಮಧ್ಯಾಹ್ನ ಊಟ ಸಮಯಕ್ಕೆ ಆ ಊರಿನಲ್ಲಿ ಯಾರು ಊಟಕ್ಕೆ ಕರಿತರೋ ಅವರ ಮನೆಗೆ ಹೋಗಿ ಊಟ ಮಾಡ್ತಿದ್ದು ವಿಶೇಷ, ಶ್ರೀಮಂತ ಬಡವ ಅನ್ನೋ ಭೇದ ಭಾವ ಇಲ್ಲದೆ ಯಾರು ಕರೆದರೂ ಇಲ್ಲ ಅಂತಿಲಿ೯ಲ್ಲ ಅಣ್ಣಾವೃ.

ಹೀಗೆ ಮಧ್ಯಾಹ್ನ ಇಡೀ ತಂಡ ಊಟ ಮಾಡಲು ಊಟಕ್ಕೆ ಕರೆದವರ ಮನೆಗೆ ಹೋದಾಗ ಮನೆಯವರು ಊಟ ಬಡಿಸಿದರು ಅಣ್ಣಾವೃ ಊಟ ಮಾಡ್ತಿದಾರೆ ದೊರೆ ಭಗವಾನ್ ಅಣ್ಣಾವ್ರ ಮುಖ ನೋಡ್ತಾರೆ ಅದಕ್ಕೆ ಅಣ್ಣಾವೃ ಊಟ ಮಾಡಿ ನೀವು ಅಂದರೆ, ಭಗವಾನ್ ಗೆ ಆಶ್ಚರ್ಯ ಯಾಕೆ ಗೊತ್ತ ಊಟದಲ್ಲಿ ರುಚಿ ಅಷ್ಟಾಗಿರಲಿಲ್ಲ, ಹಂಗೂ ಹಿಂಗೂ ಮಾಡಿ ಊಟ ಮುಗಿಸಿ ಅಣ್ಣಾವ್ರ ಬಳಿ ಬಂದು ಊಟ ಚೆನ್ನಾಗಿತ್ತ ಅಂದ್ರೆ ಹೌದು ಚೆನ್ನಾಗಿತು ಎಂದ್ರಂತೆ ಇದಕ್ಕೂ ಮೊದಲು ಮನೆಯವರು ಈ ಮಾತು ಕೇಳಿದಾಗ ಬಹಳ ಚೆನ್ನಾಗಿದೆ ಅಂದಿದ್ರು ಮತ್ತೆ ಭಗವಾನ್ ರವರು ತಮ್ಮ ಡೌಟ್ ಕ್ಲಾರಿಫೈಗೆ ರುಚಿ ಅಷ್ಟೇನಿಲಿ೯ಲ್ವಲ್ಲ ಅಂದಾಗ ಅಣ್ಣಾವೃ ಹೇಳ್ತಾರೆ “ಅವರು ಕಷ್ಟ ಪಟ್ಟು ನಮಗೆ ಊಟ ಬಡಿಸಿದ್ದಾರೆ, ಚೆನ್ನಾಗಿಲ್ಲ ಅಂತ ಹೇಳಿದರೆ ಅವರ ಮನಸ್ಸಿಗೆ ನೋವಾಗಲ್ವೆ.. ನನಗೂ ಸ್ವಲ್ಪ ರೂಢಿ ಕಡಿಮೆ ಇತ್ತು ಆದ್ರೆ ಅವರಿಗೆ ಬೇಜಾರಾಗಬಾರದು ಅಂತ ಹಾಗೆ ಹೇಳದೆ, ಅನ್ನ ಸಿಕ್ಕಾಗ ಹೀಗೆ ಬೇಕು ಹಾಗೇ ಬೇಕು ಅಂತ ಹೇಳೋದು ಬಿಟ್ಟು ಕೊಟ್ಟಿದ್ದನ್ನು ತೃಪ್ತಿಯಿಂದ ಸ್ವೀಕರಿಸಬೇಕು ಅಂದ್ರು ” ಆ ಮಾತು ಕೇಳಿ ಭಗವಾನ್ ಹೇಳ್ತಾರೆ ಊಟ ಮಾಡೋದನ್ನು ನಿಮ್ಮನ್ನು ನೋಡಿ ಕಲೀಬೇಕು, ಅನ್ನಕ್ಕೆ ಎಷ್ಟು ಬೆಲೆ ಕೊಡ್ತೀರಿ ನೀವೂ ಅಂದ್ರಂತೆ.

“ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ.. “

ಅನ್ನದಾಸೋಹ ಮಾಡುತ್ತಿರುವ ಸಿದ್ದಗಂಗಾ ಮಠ, ಇಸ್ಕಾನ್, ಆದಿ ಚುಂಚನಗಿರಿ ಮಠ ಮತ್ತಿತರ ಸಂಘ ಸಂಸ್ಥೆಗಳಿಗೆ ಈ ಮೂಲಕ ಸಲಾಮ್ 🙏

“ಅನ್ನದಾನ ಮಹಾದಾನ “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply