1984ರ ವೈ ಆರ್ ಸ್ವಾಮಿ ನಿರ್ದೇಶಿತ ಈ ಶತದಿನೋತ್ಸವ ಆಚರಿಸಿದ ಚಿತ್ರದ ನಿರ್ಮಾಪಕರು ಕೂಡ ವೈ ಆರ್ ಸ್ವಾಮಿ ಮತ್ತು ಮನೆಯವರು.
ನಮ್ಮ ಅಣ್ಣಾವ್ರು ಮತ್ತು ನಮ್ಮ ಶಂಕ್ರಣ್ಣ ಒಟ್ಟಿಗೆ ನಟಿಸಿದರೆ ಅದು ಅಪೂರ್ವ ಸಂಗಮ ಅಲ್ಲದೇ ಮತ್ತೇನು?
ಕಥೆ ಮಾತ್ರ 70ರ ದಶಕದಲ್ಲಿ ಯಶಸ್ವಿಯಾದ ಹಿಂದೀ ಚಲನಚಿತ್ರ ಜಾನಿ ಮೇರಾ ನಾಮ್ ಕನ್ನಡ ಅವತರಣಿಕೆ.
ದೇವ್ ಆನಂದ್ ಮಾಡಿದ ಪಾತ್ರ ವಹಿಸಿರುವ ರಾಜ್ ಮೊದಲಿನಿಂದ ಕೊನೆಯ ವರೆಗೆ ಬಲು ಲವಲವಿಕೆಯಿಂದ ನಟಿಸಿದ್ದಾರೆ ಕುಣಿದಿದ್ದಾರೆ ಪ್ರೇಮಿಸಿದ್ದಾರೆ…
ಶಂಕರ್ ನಾಗ್ ಅವರು ಪ್ರಾಣ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಭಾರೀ ಖುಷಿಯಿಂದ ನಟಿಸಿದ್ದಾರೆ.
ಅಂಬಿಕಾ ಹೇಮಾಮಾಲಿನಿಯ ಪಾತ್ರ. ವಜ್ರಮುನಿ ಪ್ರೇಮನಾಥ್ ಮತ್ತು ರೂಪಾ ಚಕ್ರವರ್ತಿ (ಖಂಡವಿದೆಕೋ ಮಾಂಸವಿದೆಕೋ ನೆನಪಿದೆಯೇ?) ಕ್ಯಾಬರೆ ನರ್ತಕಿ ಪದ್ಮಾ ಖನ್ನಾ ಪಾತ್ರಗಳು.
ಪಂಢರೀಬಾಯಿ, ತೂಗುದೀಪ ಶ್ರೀನಿವಾಸ್ (ಒಳ್ಳೆಯ ಪೊಲೀಸ್ ಅಧಿಕಾರಿ), ನೀಗ್ರೋ ಜಾನಿ, ಎಂ ಎಸ್ ಉಮೇಶ್ (ಈತನ ಮೂಲ ಪಾತ್ರ ವಹಿಸಿದ ಐ ಎಸ್ ಜೋಹರ್ ತ್ರಿಪಾತ್ರದಲ್ಲಿದ್ದಂತೆ ನೆನಪು. ಉಮೇಶ್ ಎರಡು ಪಾತ್ರಗಳಲ್ಲಿ ಇರುವ ಹಾಗೆ ತೋರಿತು.
ಬಿಳಿ ಸೂಟುಧಾರಿ ಬಾಲಕೃಷ್ಣ ಮನೆಹಾಳನ ಪಾತ್ರದಲ್ಲಿ ಸಾಕಷ್ಟು ಒದೆ ತಿನ್ನುತ್ತಾರೆ.
ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಬಂಗಾರಿ ನನ್ನ ವೈಯಾರಿ ರಾಜ್ ಸೋಲೋ (ಪಲ್ ಭರ್ ಕೇ ಲಿಯೇ ಕೋಯಿ ಹಮನೆ ಪ್ಯಾರ್ ಕರಲೇ-ಕಿಶೋರ್) ತಾರಾ ಓ ತಾರಾ (ರಾಜ್ಕುಮಾರ್ ಜಾನಕಿಯಮ್ಮನವರ ಡ್ಯೂಯೆಟ್) ಅರಳಿದೆ ತನು ಮನ (ರಾಜ್ಕುಮಾರ್ ಜಾನಕಿಯಮ್ಮ), ನಿನ್ನೆಗಿಂತ ಇಂದು ಚೆನ್ನ-ವಾಣಿ ಜಯರಾಂ ಮತ್ತು ಅಣ್ಣಾವ್ರು ಮತ್ತು ರಮೇಶ್ ಹಾಡಿರುವ ಭಾಗ್ಯ ಎನ್ನಲೇ ಪುಣ್ಯ ಎನ್ನಲೇ ಅಣ್ಣಾವ್ರು ಮತ್ತು ಶಂಕ್ರಣ್ಣ ಡ್ಯೂಯೆಟ್, ಶಂಕರ್ ಗುರು ನಾ ಬೆಂಕಿಯಂತೆ ಹಾಡು ನೆನಪಿಸಿತು.
ಪಂಢರೀಬಾಯಿ ಕೂಡ ವಿಶಿಷ್ಟ ರೀತಿಯಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ಸರಿಸಾಟಿಯಾಗಿ ಸುಳ್ಳು ಹೇಳಿ ಮನರಂಜನೆ ಕೊಡುತ್ತಾರೆ.