ಸುರೇಶ್ (ರಾಜ್ ಕುಮಾರ್) ಪ್ರೀತಿಸಿರುವ ಸರಸಾಳ ಅಕ್ಕ ಶರ್ಮಿಷ್ಠಾ ಮಹಾನ್ ಪುರುಷ ದ್ವೇಷಿ. ಅವಳೊಂದು ಪುರುಷದ್ವೇಷಿ ಸಂಘ ಕಟ್ಟಿರುತ್ತಾಳೆ. ಅವಳ ಬಾಯಿಗೆ, ಅವಳ ಕೈಲಿನ ಹಂಟರ್‌ಗೆ ಬಲಿಯಾಗದವರಿಲ್ಲ. ಅವಳಿಗೆ ಬುದ್ಧಿ ಕಲಿಸುವ ಕಥೆ ಈ ಸಿನಿಮಾ 1959ರದ್ದು. ಮೈನಾವತಿ ಇಡೀ ಸಿನಿಮಾವನ್ನು ‘ಅಬ್ಬಾ ಆ ಹುಡುಗಿ’ ಆಗಿ ಆಕ್ರಮಿಸಿಕೊಂಡಿದ್ದಾರೆ. ಅವರ ಭಾವನಾ ಮಾರ್ಪಾಡುಗಳನ್ನು ನೋಡಲು ಚಂದ.
ಇದರಲ್ಲಿ ಫೇಮಸ್ ಅಮ್ಮಂದಿರ ದಂಡೇ ಇದೆ. ಇದರಲ್ಲಿ ಎಲ್ಲರೂ ಯೌವನವತಿಯರು! ಪಂಢರೀಬಾಯಿ, ಲೀಲಾವತಿ, ಎಂ. ವಿ. ರಾಜಮ್ಮ, ಆದವಾನಿ ಲಕ್ಷ್ಮೀದೇವಿ (ಈಕೆ ನರಸಿಂಹರಾಜು ಜೋಡಿ), ರಮಾದೇವಿ… ಮಲಯಾಲಂ ಭಾಷೆಯ ಜನಪ್ರಿಯ ಅಮ್ಮ ಸುಕುಮಾರಿ ಇದರಲ್ಲಿ ನರ್ತಕಿ. ನಿರ್ದೇಶಕ ಎಚ್ ಎಲ್ ಎನ್ ಸಿಂಹ ನಟಿಸಿದ್ದಾರೆ ಕೂಡ. ರಾಜಾಶಂಕರ್ ಮೈನಾವತಿ ಪತಿಯಾಗಿ ಹೆಚ್ಚಿನ ಫುಟೇಜ್ ಪಡೆದಿದ್ದಾರೆ. ಬಿ. ಆರ್ ಪಂತುಲು ಇದ್ದಾರೆ. ಡಿಕ್ಕಿ ಮಾಧವರಾವ್ ಇದ್ದಾರೆ.
ಶೇಕ್ಸ್‌ಪಿಯರ್‍ನ ದ ಟೇಮಿಂಗ್ ಆಫ್ ದ ಶ್ರ್ಯೂ (ಇದರ ಆಧಾರಿತ ಮತ್ತೊಂದು ಸಿನಿಮಾ ರಾಜ್ ಮತ್ತು ಜಯಂತಿ ಅಭಿನಯದ ‘ಬಹದ್ದೂರ್ ಗಂಡು’ ) ಮತ್ತು ಪುರಾಣದ ಚಂಡೀಕಥೆ ಈ ‘ಅಬ್ಬಾ ಆ ಹುಡುಗಿ’ ಚಿತ್ರಕ್ಕೆ ಮೂಲ. ಅನೇಕ ಹಾಡುಗಳಿವೆ. ರಾಜ್ ಕುಮಾರ್ ಅವರಿಗೆ ಒಂದೆರಡು ನಾಟಕೀಯ ಸನ್ನಿವೇಶ, ಒಂದೆರಡು ಹಾಡು ಮತ್ತು ಮತ್ತೆ ಶುಭಂ ಸಮಯದಲ್ಲಿ ದರ್ಶನ.
ಯತಿರಾಜ್ ವೀರಾಂಬುಧಿ
ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!
ನಂಜನಗೂಡಿನ ಮೂಲ ನಿವಾಸೀಯಾಯಾದ ಶ್ರೀಮತಿ ನಾಗರತ್ನಮ್ಮ ಅವರು ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.. ಅದು ಕೇವಲ ಬೆರಳೆಣಿಕಯಷ್ಟು ಜನರಿಗೆ ಮಾತ್ರ ತಿಳಿದಿರುವುದು. ಆಕೆ ಮಹಾನ್ ನೃತ್ಯಗಾರ್ತಿ,ವಿದುಷಿ.ಓರ್ವ…