ಅಭಿಮನ್ಯುವಿನ ದಾರಿ ಯಾವುದು?

ಕನ್ನಡಾ ಸಿನಮಾ ಜಗತ್ತಿನಲ್ಲಿ ಹೊಸ ಬಗೆಯ ಸಿನಿಮಾಗಳ ಅಲೆ ಎಬ್ಬಿಸಿದ ನಟ ನಿರ್ದೇಶಕ ಕಾಶಿನಾಥ್ ಇಂದಿಗೂ ಹಲವರಿಗೆ ಮಾರ್ಗದರ್ಶಿ. ಅವರ ಒಬ್ಬನೇ ಮಗನಾದ “ಅಭಿಮನ್ಯುಕಾಶಿನಾಥ್” ತಂದೆಯಂತೆ ಸಿನಿಮಾ ಜಗತ್ತಿನಲ್ಲಿ ಬೆಳೆದು ಕೀರ್ತಗಳಿಸಬೇಕು ಅನ್ನೋ ಆಸೆಯ ಹೊತ್ತು ಅದಕ್ಕಾಗಿ  ಶ್ರಮಿಸುತ್ತಿದ್ದಾರೆ.

10 ವರ್ಷದ ಮುನ್ನ ಬಾಜಿ,12 AM ಅನ್ನೋ ಎರಡು ಸಿನಿಮಗಳಲ್ಲಿ ನಟಿಸಿದ್ದರು.ಕ್ರಿಕೆಟ್ ಆಡುವ  ಅಭ್ಯಾಸವು ಇದ್ದು CCLನ “ಕರ್ನಾಟಕ   ಬುಲ್ಡೋಜರ್ಸ್”  ತಂಡದ ಸ್ಟಾರ್ ಆಟಗಾರ ಕೂಡ ಆಗಿದ್ದರು. 2018ರಲ್ಲಿ ತಂದೆಯ ಅಗಲಿಕೆಯ ತರುವಾಯ ಸ್ವಲ್ಪ ದಿನಗಳ ಕಾಲ ಸಿನಿಮಾದಿಂದ ದೂರ ಇದ್ದರು.

ಒಳ್ಳೆಯ ಕಥೆ, ಸ್ಕರ್ಪ್ಟ್ಗಾಗಿಕಾಯ್ತಾಇದ್ರು , ಆ ಹುಡುಕಾಟಕ್ಕೆ, ತಾಳ್ಮೆಗೆ  ಇದೀಗ ಕಾಲ ಕೂಡಿ ಬಂದಂತಿದೆ…” ಎಲ್ಲಿಗೆ ಪಯಣ ಯಾವುದೋ ದಾರಿ” ಅಂತಿದ್ದ ಅವರ ಬದುಕಿಗೆ  ಅದೇ ಶೀರ್ಷಿಕೆಯ ಅಡಿಯಲ್ಲಿ ಒಂದು ಥ್ರಿಲ್ಲರ್ಲೊವ್ಡ್ರಾಮಾ ಚಿತ್ರ ಸಿದ್ಧವಾಗ್ತಾಇದೆ. ಸಿನಿಮಾಸೆಟ್ಟೇರಿ ಅದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಖುದ್ದಾಗಿ ಬಂದು ಹರಸಿಹೋಗಿದ್ದಾರೆ. ಈ ಸಿಕ್ಕ ಅವಕಾಶವನ್ನಸದ್ಬಳಿಕೆಮಾಡಿಕೊಳ್ಳುವುದಾಗಿ ಪತ್ರಿಕಾ ಘೋಷಿತಿಯಲ್ಲಿ ಹೇಳಿದ್ದಾರೆ.

ಸಿನಿಮಾಗೆ ಕಿರಣ್ ಸೂರ್ಯ ಅಕ್ಷನ್ಕಟ್ಹೇಳಲಿದ್ದು, ನಂದೀಶ್ ಗೌಡ ಮತ್ತು ಜತಿನ್ ಪಟೇಲ್ ಹಣ ಹೂಡಿದ್ದಾರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply