“ಗೋಳ್ಡೆನ್ಕ್ವೀನ್ ನಟಿ ಅಮೂಲ್ಯಾ” ಎಲ್ಲರಿಗೂ ಚಿರಪರಿಚಿತ. ಮದುವೆಯಾದ ನಂತರ ಆಕಟಿಂಗ್ಗ್ ಗೆ ವಿದಾಯ ಹೇಳಿ ಸಧ್ಯಕ್ಕೆ ಹೌಸ್ವೈಫ್ ಆಗಿದ್ದರೆ. ಅಮೂಲ್ಯರಿಗೆ ಓರ್ವ ಸೋದರನಿದ್ದು(ದೀಪಕ್ ಅರಸ್) ಅವರಿಗೂ ಸಿನಿಮಾದ ನಂಟಿದೆ ಎನ್ನುವುದು ಹಲವರಿಗೆ ತಿಳಿಯದ ಸಂಗತಿ.
10 ವರ್ಷದ ಕೆಳೆಗೆ ದೀಪಕ ಅರಸ್, “ಮನಸೋಲೊಜಿ” ಅನ್ನೋ ಸಿನಿಮಾ ನಿರ್ದೇಶಿಸಿದ್ದರು,ರಾಕೇಶ್ ಅಡಿಗ ಮತ್ತು ಅಮೂಲ್ಯ ಮುಖ್ಯ ಭೂಮಿಕೆಯಲ್ಲಿದ್ದರು.ಅದರ ಬಳಿಕ ಸಿನಿರಂಗದಿಂದ ಸ್ವಲ್ಪ ದಿನಗಳ ಕಾಲ ದೂರವಿದ್ದು, ತಮ್ಮದೇ ಆದ ಈವೆಂಟ್ಮನೆಜ್ಮೆಂಟ್ಕಂಪನಿಯನ್ನ ಕಟ್ಟಿ ಬೆಳೆಸುವುದರಲ್ಲಿನಿರತರಾದರು, ದೊಡ್ಡಯಶಸ್ಸನ್ನು ಕೂಡ ಕಂಡರು.ಈಗ ಮತ್ತೆ ಸಿನಿಮಾವೊಂದಕ್ಕೆನಿರ್ದೇಶಕನಾಗಿ ಕೆಲಸ ಮಾಡಲು ಸಿದ್ಧವಾಗಿದ್ದಾರೆ.
ಲಾಕ್ಡೊನ್ ಅವಧಿಯಲ್ಲಿ ಒಳ್ಳೆ ಲೊವ್, ಡ್ರಾಮ ಕಥೆಯನ್ನತಾಯಾರಿಸಿ, ಬಿಡುವಿನ ಸಮಯವನ್ನಉಪಯೋಗಿಸಿಕೊಂಡಿದ್ದಾರೆ.
ಚಿತ್ರದ ನಾಯಕ,ನಾಯಕಿಪಾತ್ರಗಳ ಆಯ್ಕೆ ಪ್ರಕ್ರಿಯ್ರ್ನಡೆಯುತ್ತಿದೆ.ನಾಯಕನ ಪಾತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರನ್ನ ಸಂಪರ್ಕಿಸಿ ಕಥೆಯ ಎಳೆಯನ್ನ ತಿಳಿಸಿದ್ದಾರೆ ಎನ್ನುವ ಸುದ್ದಿ ಹರಿದಿದೆ.
ಕನ್ನಡದಲ್ಲಿ ಹೊಸ ಪ್ರಯೋಗಗಳಿಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿರುವ ಈ ಸಮಯದಲ್ಲಿ, ದೀಪಕ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಚಿತ್ರೋದ್ಯಮ.ಕಾ0 ಶುಭ ಹಾರೈಸುತ್ತದೆ.