“ಅಮ್ಮ ನೀನು ನಮಗಾಗೀ
ಸಾವಿರ ವರುಷ ಸುಖವಾಗೀ
ಬಾಳಲೆ ಬೇಕು ಈ ಮನೆ ಬೆಳಕಾಗಿ”
“ಅಮ್ಮ ಎಂದರೆ ಮೈಮನವೆಲ್ಲ
ಹೂವಾಗಿದೆಯಮ್ಮ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವವರಾರಮ್ಮ “
“ಅಮ್ಮ ಎಂದರೆ ಏನೋ ಹರುಷವೂ
ನಮ್ಮ ಪಾಲಿಗೆ ಅವಳೇ ದೈವವೂ
ಅಮ್ಮ ಎಂದರೆ ಏನೋ ಹರುಷವೂ
ಎಂದೂ ಕಾಣದ ಸುಖವ ಕಂಡೆವೂ “
ಅಮ್ಮ ಎಂಬ ಎರಡಕ್ಷರದಲ್ಲಿ ನಮ್ಮ ಜೀವನ ಅಡಗಿದೆ, ಅವಳಿಲ್ಲದೆ ನಾವಿಲ್ಲ, ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿ ನಮ್ಮನ್ನು ಉತ್ತಮ ಪ್ರಜೆಯಾಗಿ ಮಾಡುವ ಮಹಾತಾಯಿಗೆ ಮತ್ತು ಇಡೀ ಎಲ್ಲಾ ಮಾತೆಯರಿಗೆ ವಿಶ್ವ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು 🌹💞💐
ತಮಗೆ ಎಷ್ಟೇ ಕಷ್ಟವಾದರೂ ಮಕ್ಕಳು ಚೆನ್ನಾಗಿ ಬಾಳಿ ಬದುಕಬೇಕೆಂಬ ಮಮತೆಯ ಮಮಕಾರವನ್ನು ತೋರಿಸುವವಳೆ “ಅಮ್ಮ” ಹೆಂಡತಿ ಬಂದ ತಕ್ಷಣ ತಾಯಿಯನ್ನು ಮರೆತು ಅವರವರ ಜೀವನದಲ್ಲಿ ನಿರತರಾಗೋ ಜನರಿಗೊಂದು ಕಿವಿಮಾತು “ತಾಯಿಗಿಂತ ದೇವರಿಲ್ಲ” ಒಂದು ವೇಳೆ ಹೆಂಡತಿ ನಮ್ಮನ್ನು ಬಿಟ್ಟು ಹೋದರೆ ಬೇರೆ ಮದುವೆ ಆಗಬಹುದು ಆದರೆ ತಾಯಿ ಯನ್ನು ತಾತ್ಸಾರ ಮಾಡಿದರೆ ಮತ್ತೆ ಸಿಗೋದಿಲ್ಲ 😥
“ತಾಯಿ ತಾಯಿ ಲಾಲಿ ಹಾಡೋ
ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ
ಹೆತ್ತ ತಾಯಿಗೆ
ಹೊರುವಳು ಭುಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯೀ ತಾಯಿ “
ಇನ್ನೂ ಕೆಲವರು ತಾಯಿಗೆ ವಯಸ್ಸಾಗಿದೆ ಅಂತ ತಿಳಿದು ವೃಧ್ಧಾಶ್ರಮಕ್ಕೆ ಬಿಟ್ಟು ತಮಗಿಷ್ಟ ಬಂದಂತೆ ಜೀವನ ಮಾಡೋರು ತಾಯಿಯ ಋಣ ತೀರಿಸಲಾಗದು, ಹೆತ್ತ ತಾಯಿಯ ಜೊತೆ ನಾವಿದ್ದರೆ ನಮ್ಮ ಕುಟುಂಬ ಆನಂದ ಸಾಗರ.
“ತಾಯೀನೆ ಎಲ್ಲ ಬದಲಾಗೊದಿಲ್ಲ
ಯುಗ ಉರುಳಿ ಕಳೆದೋದರೂ
ಹಣೆಬರಹ ಬದಲಾದರೂ “
ಒಂದು ಮಾತು : ನಾವು ಅವರಿರೋವರೆಗೂ ಚೆನ್ನಾಗಿ ನೋಡಿಕೊಂಡರೆ ಸಾಕು ಅದುಕ್ಕಿನ್ನ ದೊಡ್ಡ ಉಡುಗೊರೆ ಇನ್ನೊಂದಿಲ್ಲ.
ಎಲ್ಲಾ ಅಮ್ಮಂದಿರಿಗೆ ನಮ್ಮ ನಮನಗಳು 🙏
ಚಂದದ ಬರವಣಿಗೆ ಸರ್… ನಿಮ್ಮ ಬರಹಗಳು ಹೀಗೆಯೇ ಮುಂದುವರೆಯಲಿ..
ಆತ್ಮೀಯ ಮಿತ್ರರೇ ಅತ್ಯುತ್ತಮ ಅದ್ಬುತ ಮರೆಯಲಾಗದ ಸಂಚಿಕೆ ನಿಜಕ್ಕೂ ತಮ್ಮ ಬರವಣಿಗೆ ಶೈಲಿ ಮೆಚ್ಚುವಂತಹದು ಕನ್ನಡ ಚಿತ್ರ ರಂಗದ ಮೈಸೂರಿನ ಶಕ್ತಿ ಧಾಮ ಅನ್ನ ಪೂರ್ಣೇಶ್ವರಿ ಪಾರ್ವತಮ್ಮ ರಾಜಕುಮಾರ್ ಅವರು ಒಂದು ಶಕ್ತಿ ದೇವತೆ ಇಂದು ಕನ್ನಡ ಚಿತ್ರ ರಂಗ ಬೆಳವಣಿಗೆಗೆ ಅಮ್ಮ ಅವರ ಕೊಡುಗೆ ಅಪಾರ ವಿಶ್ವ ಅಮ್ಮಂದಿರ ದಿನಾಚರಣೆಯ ವಿನೂತನ ಶೈಲಿಯ ಉಡುಗೊರೆ ಕೊಟ್ಟ ತಮಗೆ ಕೋಟಿ ರಾಜ್ ಧನ್ಯವಾದಗಳು ನಮಸ್ತೆ ಹೀಗೆಯೇ ತಮ್ಮ ಕಾಯಕ ಮುಂದುವರಿಯಲಿ ನಮಸ್ತೆ ಸರ್