ಅರಸು @ 14 ವಷ೯ಗಳು 💐🏍👑

ಎನಿ ಟೈಮ್ ಬಿಂದಾಸಾಗಿರೋದು, ಹೆವಿ ಮನಿ ಸ್ಪೆಂಡ್ ಮಾಡೋದು, ಪಾಟಿ೯ ಮೋಜು ಮಸ್ತಿಲೀ ಕಾಲ ಕಳೆಯೋರಿಗೆ ನಿಜವಾದ ಜೀವನ ಅಂದ್ರೇನು, ಅದರ ಮೌಲ್ಯಗಳೇನು ಗೊತ್ತಿರದೇ ಇರೋ ಶಿವರಾಜ್ ಆರಸ್ (ಪುನೀತ್ ರಾಜ್ ಕುಮಾರ್ )

ನೊ ಟೆನ್ಷನ್ ಲೈಫ್ ಒಂಥರ ಟೆಂಪ್ಟೇಷನ್, ನಾನಂತೂ ಬಾಳೋದೆ ನನಗಾಗಿ..

ಕಂಪನಿ ವ್ಯವಹಾರ ನಡೆಸಲು ಅವರ ವ್ಯವಸ್ಥಾಪಕ ರಾಮಣ್ಣ (ಶ್ರೀನಿವಾಸ್ ಮೂರ್ತಿ) ಅರಸ್ ವ್ಯವಹಾರದ ಕಡೆ ಗಮನ ನೀಡದೆ ಫಾರಿನಲ್ಲಿ ಇರೋರಿಗೆ ರಾಮಣ್ಣ ಇಂಡಿಯಾಗೆ ಬಂದು ಸ್ವಲ್ಪ ಬಿಸಿನೆಸ್ ಕಡೆ ನೋಡೋಕೇಳಿ ಒಪ್ಪಿಸಿ ಕರಿಸ್ತಾರೆ.

ಒಮ್ಮೆ ಸುಂದರವಾದ ಹುಡುಗಿ ನೋಡಿದ ತಕ್ಷಣ ಇಷ್ಟವಾಗೋ ಆ ಹುಡುಗಿ ಶೃತಿ (ರಮ್ಯ)

ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ, ಇದು ಪ್ರೀತಿ ಅಂತ ತಿಳಿದಮೇಲೆ..

ಅವರ ಮೇಲೆ ಮನಸಾಗಿ ಅವರಿಗೆ ಐ ಲವ್ ಯೂ.. ಹೇಳೋ ಸೀನ್ ರಮ್ಯ ಒಪ್ಪಲ್ಲ ಅರಸ್ ಗೆ ಆದ್ರೆ ಮದ್ವೆ ಇವರನ್ನೇ ಆಗ್ಬೇಕು ಅನ್ನೋ ಡಿಷಿಷನ್ ಹುಡುಗಿ ಬಗ್ಗೆ ಎಲ್ಲಾ ಡಿಟೇಲ್ಸ್ ಕಲೆಕ್ಟ್ ಮಾಡೋ ದಾಸ್ (ಕೋಮಲ್) ನಂತ್ರ ಆ ಹುಡುಗಿ ಮ್ಯಾನೇಜರ್ ಮಗಳು, ಮನೆ ಹೋಗಿ ನಿಮ್ಮ ಮಗಳನ್ನು ಇಷ್ಟ ಪಡ್ತಿದೀನಿ, ರಮ್ಯಗೆ ಮೊದಲೇ ಹೇಳಿದ್ರೂ ಒಪ್ಪದೆ ಇವಾಗಲೂ ಒಪ್ಪದೆ ಅರಸ್ ಗೆ ಜೀವನದ ಬೆಲೆ ಗೊತ್ತಿಲ್ಲ ಸುಮ್ಮನೆ ಟೈಂ ಪಾಸ್ ಮಾಡ್ತೀರಾ, ನನಗೆ ನೀವು ಇಷ್ಟವಿಲ್ಲ, ರೆಜೆಕ್ಟ್ ಮಾಡೋದು, ದೊಡ್ಡ ಶ್ರೀಮಂತ ಎಲ್ಲರ ಥರ ಬದುಕಿ ತೋರಿಸಿ 5000 ದುಡಿದು ನಂತರ ಪ್ರೀತಿ ಯೋಚನೆ, ಅರಸ್ ಒಪ್ಪಿಗೆ ಎಲ್ಲಾ ಬಿಟ್ಟು ಸಾಮಾನ್ಯರಂತೆ ಬರೋ ಸನ್ನಿವೇಶ.
ಸುತ್ತಾಡಿ ಒಂದು ಕಡೆ ಹಸಿವಾಗಿ ಅಜ್ಜಿ ಬಾಳೆಹಣ್ಣು ಮಾರುತ್ತಿದ್ದನ್ನು ನೋಡಿ ಹಸಿವು ಬಾಳೆಹಣ್ಣು ಕೊಟ್ಟರೆ ಇನ್ನೂ ಒಂದು ತಿಂಗಳಲ್ಲಿ 1 ಲಕ್ಷ ಕೊಡ್ತೀನಿ ಮಾತ್ ಹೇಳಿ ಅಜ್ಜಿ ಇವನ್ಯಾರೋ ಹುಚ್ಚ ಅಂದ್ಕೊಂಡು ಬಾಳೆಹಣ್ಣು ಕೊಡ್ತಾರೆ.

ಹೀಗೇ ಓಡಾಡಿ ತುಂಬಾ ಸುಸ್ತಾಗಿ ತಲೆ ಸುತ್ತಿ ಬಿದ್ದೋಗ್ತಾರೆ, ಮಧ್ಯಮ ವರ್ಗದ ಹುಡುಗಿ ಐಶ್ವರ್ಯ (ಮೀರಾ ಜಾಸ್ಮಿನ್) ನೋಡಿ ಸಹಾಯ ಮಾಡೋದು, ತಂದೆ ತಾಯಿ ಯಾರು ಇಲ್ಲ ಅನ್ನೋ ಮಾತು ಕರುಳು ಚಿವುಟೋಹಾಗೆ, ಕೆಲಸ ಕೊಡಿಸೋದು, ಮಧ್ಯಮ ವರ್ಗದ ಜೀವನ ಹೇಗಿರುತ್ತೆ ಕಲಿತ ಪಾಠ, ಅಂಗಡಿಯಲ್ಲಿ ಸೀರೆ ವ್ಯಾಪಾರ ಮಾಡೋ ಶೈಲಿ, ಆಕಸ್ಮಿಕ ಐಶ್ವರ್ಯ ಮತ್ತು ಶೃತಿ ಭೇಟಿ ಇಬ್ಬರೂ ಫ್ರೆಂಡ್ಸ್, ನಂತರ ಎಲ್ಲರೂ ಏಕಾಏಕಿ ಭೇಟಿ ಇಬ್ಬರ ಸವಾಲ್ ಬಗ್ಗೆ ಐಶ್ವರ್ಯ ಗೆ ಹೇಳದೇ ಇರೋ ಹಾಗೆ ಹೇಳೋದು, ಅರಸ್ ಹೇಳಿದಾಗೆ 5000 ದುಡಿದು ತೋರಿಸೋ ಸೀನ್, ರಮ್ಯಗೆ ಅರಸ್ ಮೇಲಿಷ್ಟವಾಗೋದು, ಮೀರಾಗೂ ಸಹ ಅರಸ್ ಮೇಲೆ ಪ್ರೀತಿ, ಹಾಗೋಹೀಗೂ ಅರಸ್ ಯಾರು ಅವರ ಮನೆತನ ಎಂಥದೂ ಗೊತ್ತಾಗೋದು, ಇಬ್ಬರೂ ಫ್ರೆಂಡ್ಸ್ ಯಾರಿಗೂ ಬೇಜಾರಾಗಬಾರದು, ಅರಸುಗೆ ಗೊತ್ತಾಗೋದು ಇಬ್ಬರೂ ಇಷ್ಟ ಪಡ್ತಿರೋದು, ಆಮೇಲೆ ಒಬ್ಬರಿಗೊಬ್ಬರು ಏನು ಗೊತ್ತಿಲ್ಲದಂತೆ ಇರೋದು, ಮೀರಾ ರಮ್ಯ ಮದುವೆ ಆಗು ಅನ್ನೋದು, ರಮ್ಯ ಮೀರಾ ಮದುವೆ ಆಗು ಅನ್ನೋದು, ಫ್ರೆಂಡ್ಶಿಪ್ ಗಾಗಿ ಪ್ರೀತಿ ಬಿಟ್ಟುಕೊಡೋ ನಾಯಕಿಯರು, ಅರಸ್ ಗೆ ಗೊಂದಲ ಯಾರನ್ನು ಮದುವೆ ಆಗೋದು..

ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ನಿನ್ನ ಆಟ ಸಾಕು ನಿಲ್ಲಿಸು..

ಒಂದೊಳ್ಳೆ ಉಪಾಯ ತನ್ನ ಫ್ರೆಂಡ್ಶಿಪ್ ಉಳಿಸೋಕೆ ಜೀವದ ಗೆಳೆಯ ದಶ೯ನ್ ಜೊತೆ ರಮ್ಯ ಮದುವೆ, ಮೀರಾ ಜೊತೆ ಅರಸ್ ಮದ್ವೆ ಆಗ್ತಾರೆ ಅನ್ನೋ ಮಾತು ಕೊಟ್ಟ ಮೇಲೆ, ಆದಿತ್ಯ ಜೊತೆ ಮೀರಾ ಮದುವೆ. ಮೀರಾಕೂಡ ರಮ್ಯ ಜೊತೆ ಅರಸ್ ಮದ್ವೆ ಆಗ್ತಾರೆ ಅನ್ನೋ ಮಾತು ಆದರೆ ಫ್ರೆಂಡ್ಸ್ ಗೆ ಹೇಳಿ ಪ್ರಾಮಿಸ್ ತಗೊಂಡಿರೋದು ,ಇಲ್ಲಿ (ಶಿವರಾಜ್ ಅರಸ್ ತಂತ್ರ ಪ್ರೇಕ್ಷಕರಿಗೆ ಸೀಕ್ರೆಟಾಗಿಟ್ಟಿರೋದು) ಅದರಂತೆ ಅವರೂ ಕೂಡಾ ಮದ್ವೆ ಆದ್ಮೇಲೆ ಅವರು ತೋರಿಸಿದ ಹುಡುಗಿ ಜೊತೆ ಮದುವೆ ಮಾಡ್ಕೊಳೋ ಮಾತು.

ಇಬ್ಬರಿಗೂ ಮದುವೆ ಮಾಡಿಸಿ ಹೊರ ಬಂದ ಮೇಲೆ ಒಬ್ಬ ಗ್ಲಾಮರ್ ಹುಡುಗಿ ಇವರಿಗೆ ಐ ಲವ್ ಯೂ ಪ್ರಪೋಸ್ ಮಾಡೋದು. ಹುಡುಗಿ ಕರೆಸಿದ್ದು ಅರಸ್ ಫ್ರೆಂಡ್ಸ್, ಈ ವಿಷಯ ಸೀಕ್ರೇಟಾಗಿಟ್ಟಿದ್ದು.

ಫ್ರೆಂಡ್ಶಿಪ್ ನಲ್ಲಿ ನೋ ಸಾರಿ ನೋ ಥ್ಯಾಂಕ್ಸ್..

ಅರಸು ಚಿತ್ರ ಬಿಡುಗಡೆಯಾಗಿ ಇಂದಿಗೆ 14 ವಷ೯ಗಳು, ಹಾಗಾಗಿ ನನ್ನ ಸಣ್ಣ ಲೇಖನ ಪ್ರಯತ್ನ..

ಚಿತ್ರದ ಇತರೆ ಮಾಹಿತಿಗಳು :-

🏇ನಿದೇ೯ಶನ : ಮಹೇಶ್ ಬಾಬು.
🦋ನಿಮಾ೯ಪಕರು : ಪಾವ೯ತಮ್ಮ ರಾಜ್ ಕುಮಾರ್.
🌹ಚಿತ್ರಕಥೆ : ಜನಾಧ೯ನ ಮಹಷಿ೯, ಎಂ ಎಸ್ ರಮೇಶ್, ಆರ್ ರಾಜಶೇಖರ್.
💐ಸಂಗೀತ : ಜೋಶುವಾ ಶ್ರೀಧರ್.
👒ನಿಮಾ೯ಣ: ಪೂಣಿ೯ಮಾ ಎಂಟರ್ಪ್ರೈಸಸ್.
🦚ಛಾಯಾಗ್ರಹಣ : ರಮೇಶ್ ಬಾಬು.
🌲ವಿತರಕರು : ವಜ್ರೇಶ್ವರಿ ಕಂಬೈನ್ಸ್.
👑ಬಿಡುಗಡೆ ದಿನಾಂಕ : 25 ಜನವರಿ 2007.

ಕೋಮಲ್, ಅದಿ ಲೋಕೇಶ್, ಸತ್ಯಜಿತ್, ಪಿ ಎನ್ ಸತ್ಯ, ಯತಿರಾಜ್, ಶ್ರೀಯಾ ಸರನ್ ಮತ್ತಿತರರು..

🎩ಅತ್ಯುತ್ತಮ ನಟ ಫಿಲಂ ಫೇರ್ ಪ್ರಶಸ್ತಿ ಪುನೀತ್ ರಾಜಕುಮಾರ್.

ಬಿಡುಗಡೆಯಾದ ಸಂತೋಷ್ ಮತ್ತಿತರ ಚಿತ್ರಮಂದಿರಗಳಲ್ಲಿ ಸತತ 100 ದಿನ ಪ್ರದಶ೯ನ ಕಂಡಿದೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply