ಆಯುಶ್ಮಾನ್ಭವ ಚಿತ್ರದ ವಿಮರ್ಶೆ
“ದೇಹದಲ್ಲಿ ನೂನ್ಯತೆ ಇರುವನಲ್ಲ ರೋಗಿ,ಮನಸ್ಸಿನಲ್ಲಿ ನೂನ್ಯತೆ ಇರೋನೇ ರೋಗಿ “
ಕಟೌಟ್ ಗಳ ಸರದಾರ ತಂದೆಯಂತೆ ಮಗ ಅನ್ನೋದನ್ನ ಸಾಬೀತುಪಡಿಸಿದ ನಮ್ಮ ದೊಡ್ಮನೆ ದೊರೆ ಡಾ. ಶಿವರಾಜ್ ಕುಮಾರ್ ಸರ್ ಕೃಷ್ಣ ಹೆಸರಿನ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಿದ್ದಾರೆ, ಪರಿಚಯದ ಸನ್ನಿವೇಶ ರೈಲಿನಲ್ಲಿ ಫೈಟಿಂಗ್ ಅಬ್ಬಬ್ಬಾ 👌👌👌 ಪ್ರೇಕ್ಷಕರ ಶಿಲ್ಲೆ, ಚಪ್ಪಾಳೆ, ಜೈಕಾರ 😊 ಆ ಹುಲಿ ಚೇಸಿಂಗ್ ದೃಶ್ಯ ಎಂಥವರಿಗೂ ಮೈರೋಮಾಂಚನ ಗೊಳಿಸುತ್ತೆ, ಜೊತೆಗೆ ಒಂದು ಸನ್ನಿವೇಶವನ್ನು ಅವರ ಮನೆಯಲ್ಲಿ ಚಿತ್ರೀಕರಿಸಿರುವುದು ಅಭಿಮಾನಿಗಳಾದ ನಮಗೆ ಖುಷಿ ಕೊಟ್ಟಿದೆ, ಒಂದು ಹಾಡಿನಲ್ಲಿ ದೊಡ್ಡ ಜಲಪಾತ ಅಬ್ಬಾ ನೋಡಿದರೆ ತಲೆ ತಿರುಗುತ್ತೆ ಆದರೆ ನಮ್ಮ ಶಿವಣ್ಣ ಮಿಂಚಿನ ಹಾಗೆ ಸಲೀಸಾಗಿ ಹತ್ತುವುದು ಸೂಪರ್ ಬಾಸ್ ❤ ಕೊನೆ ದೃಶ್ಯ ಅವರು ಮತ್ತೆ ಪುನಃ ಬರುವುದು ಮತ್ತು ಅವರ ಉಡುಗೆ ಸ್ಟೈಲ್ ಎಲ್ಲವೂ ಚಿಂದಿ…
ಲಕ್ಷ್ಮಿ ಪಾತ್ರದಲ್ಲಿ ಗುಳಿಕೆನ್ನೆ ಚೆಲುವೆ ಮಾನಸಿಕ ಅಸ್ವಸ್ಥೆ ಯಾಗಿ ಅಭಿನಯ ಮಾಡಿರೋದು ಮೆಚ್ಚುಗೆ ಗಳಿಸಿದೆ.
ಜ್ಯೋತಿಷ್ಯ ಪಾತ್ರದಲ್ಲಿ ರಂಗಾಯಣ ರಘು ರವರು ಎಲ್ಲರನ್ನೂ ನಕ್ಕು ನಗಿಸುತ್ತಾರೆ.ಸಾಧು ಕೋಕಿಲ ರವರ ಕಾಮಿಡಿ ಝಲಕ್ ಮತ್ತು ಪದೇ ಪದೇ ಎಲ್ಲರ ಜೊತೆ ಹೊಡೆಸಿಕೊಳ್ಳುವ ಪಾತ್ರ ಕಚಗುಳಿ ಇಟ್ಟಹಾಗಿದೆ.
ಹಿರಿಯ ಕಲಾವಿದರು ಅನಂತ್ ನಾಗ್, ಅವಿನಾಶ್, ಸುಹಾಸಿನಿ ಮೇಡಂ, ನಿಧಿ ಸುಬ್ಬಯ್ಯ ಮತ್ತಿತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ಯಾವುದೇ ಮುಜುಗರವಿಲ್ಲದೆ ನೋಡಬಯಸುವ ಚಿತ್ರ ” ಆಯುಶ್ಮಾನ್ ಭವ”
ಚಿತ್ರದ ಕೇಂದ್ರ ಬಿಂದು ನಿದೇ೯ಶಕರು ಪಿ. ವಾಸು ಒಳ್ಳೆಯ ಸಂಭಾಷಣೆಗಳನ್ನು ಕಥೆಗೆ ತಕ್ಕ ಹಾಗೆ ನೀಡಿದ್ದಾರೆ, ದ್ವಾಕೀ೯ಶ್ ರವರ ನಿಮಾ೯ಣ ಮೆಚ್ಚಲೇಬೇಕು.
🌹ಕೃಷ್ಣ ನೀ ಬೇಗನೆ ಬಾರೋ, ಕೃಷ್ಣ ನೀ ಬೇಗನೆ ಬಾರೋ 🌹 ಹಾಡು ಕೇಳಲು ಎಷ್ಟು ಇಂಪಾಗಿದೆಯೋ ಅಷ್ಟೇ ಚೆನ್ನಾಗಿ ಸಂಗೀತ ನಿದೇ೯ಶನ ಮಾಡಿದ್ದಾರೆ, ಅವರ 100 ನೇ ಚಿತ್ರ ಶತಕ ಬಾರಿಸುವಲ್ಲಿ ಯಶಸ್ವಿಯಾಗಿರುವ ಗುರುಕಿರಣ್ ರವರಿಗೆ ಅಭಿನಂದನೆಗಳು ತಿಳಿಸೋಣ 💜
ಒಂದು ಕೊನೆಯ ಮಾತು ಸಂಗೀತದಿಂದ ಏನನ್ನು ಬೇಕಾದರೂ ಗೆಲ್ಲಬಹುದು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ 😊