ವಾರಕ್ಕೆ 2 ದಿನ ಬಿಗ್ ಬಾಸ್ ಶೂಟಿಂಗ್ ಕೆಲಸ ಇನ್ನುಳಿದ ಐದೂ ದಿನ ಸಿನಿಮಾ ಕೆಲಸದಲ್ಲಿ ಬಿಡುವಿಲ್ಲದೆ ನಿರತರಾದ ಕಾರಣ ಕಿಚ್ಚಾ ಸುದೀಪ್ ಅವರ ಆರೋಗ್ಯ ಕೊಂಚ ಏರುಪೇರಾಗಿದೆ, ಜ್ವರದಿಂದ ಬಳಲುತ್ತಿರುವ ನಟನಿಗೆ ವೈದ್ಯರು ಚಿಕಿತ್ಸೆ ನೀಡುವುದರ ಜೊತೆಗೆ ಸಲಹೆ ನೀಡಿದ್ದಾರೆ ಅದರ ಅನುಸಾರ ಕಡ್ಡಾಯವಾಗಿ ಅವರು ಇನ್ನು ಒಂದು ವಾರಗಳ ಕಾಲ ಮನೆಯಲ್ಲೇ ಉಳಿದು ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ಈ ವಾರದ ಬಿಗ್ ಬಾಸ್ ಎಪಿಸೋಡ್ ನಲ್ಲಿ ಕಿಚ್ಚಾ ಸುದೀಪ್ ಅವರು ಭಾಗವಹಿಸಲು ಆಗದ ಕಾರಣ ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಏನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು.
.ಮತ್ತೊಂದೆಡೆ ತಮಿಳಿನ ಖ್ಯಾತ ನಟ ಹಿರಿಯ ಹಾಸ್ಯ ಕಲಾವಿದ “ವಿವೇಕ್” ಹೃದಯಾಘಾತದಿಂದಾಗಿ ತಮಿಳುನಾಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯುಡ್ಯೂರಪ್ಪ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ಪತ್ತೆಯಾಗಿದ್ದು ಇಂದು ಮುಂಜಾನೆಯಿಂದ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.