ಬಿ.ಆರ್. ಪಂತುಲು ಅವರು ಪದ್ಮಿನಿ ಪಿಕ್ಚರ್ಸ್‍ನಲ್ಲಿ ತಯಾರಿಸಿದ ಚಿತ್ರ.
ಎಳೆಯ ವಯಸ್ಸಿನ ಭಾರತಿ, ಗುಬ್ಬಿ ವೀರಣ್ಣ ಅವರ ಬಂಧು ಜಿ.ವಿ.ಲತಾದೇವಿ ನಾಯಕಿರಾಗಿ, ಡಿಕ್ಕಿ ಮಾಧವರಾವ್ ವಿಲನ್ ಆಗಿ, ಪಂತುಲು, ಎಂ.ವಿ.ರಾಜಮ್ಮ. ನರಸಿಂಹರಾಜು ಒಂದು ರೀತಿಯ ಸೂತ್ರಧಾರಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಡಾ. ರಾಜ್‍ಕುಮಾರ್ ಮುರಳಿ ಮತ್ತು ತಮ್ಮಣ್ಣ ಎಂಬ ದ್ವಿಪಾತ್ರಗಳಲ್ಲಿದ್ದಾರೆ.
ತಂತ್ರಜ್ಞಾನ ಇನ್ನೂ ಅಷ್ಟೊಂದು ಅಭಿವೃದ್ಧಿ ಹೊಂದದ ಆ ಸಮಯದಲ್ಲೇ ರಾಜ್‍ರ ಎರಡು ಪಾತ್ರಗಳು ಒಂದು ಮಂಚದ ಮೇಲೊಂದು ಕೆಳಗೊಂದು ಮಲಗುವುದು, ಎದುರೆದುರಿಗೆ ಬಹಳ ಹೊತ್ತು ಸಂಭಾಷಿಸುವುದನ್ನು ಚಿತ್ರಿಸಿರುವುದು ಶ್ಲಾಘನೀಯ.
ಹಾಡುಗಳೆಲ್ಲಾ ಚಂದ. ಎಮ್ಮೆ ಎಲ್ಲಾ ಎಲ್ಲಣ್ಣ ಎಮ್ಮೆ ಕಾಯೋ ತಮ್ಮಣ್ಣ, ನೀನಾರಿಗಾದೆಯೋ ಎಲೆ ಮಾನವಾ, ಬೆಳ್ಳಿ ಹಕ್ಕಿಯಾಗುವ, ಕಣ್ಣೆರಡು ಕರೆಯುತಿದೆ, ಕೊಳಲನೂದಿ ಕುಣಿವ, ಕತ್ತರಿಸು ಕತ್ತರಿಸು ಎಲ್ಲವೂ ಮಧುರಮಯ.
ಓದಿರುವ ವಕೀಲನಿಗೆ ಓದಿದ ಹುಡುಗಿ ಸಿಗುತ್ತಾಳೆ. ಓದಿರುವ ಮತ್ತೊಂದು ಹುಡುಗಿಯೂ ಓದಿರುವ ಹುಡುಗನನ್ನು ಬೇಕೆಂದಾಗ ಏನೂ ಓದದ ತಮ್ಮಣ್ಣನನ್ನು ವಿದ್ಯಾವಂತನಾಗಿಸುತ್ತಾನೆ ಮುರಳಿ.
ಒಂದೇ ಮನೆಯಲ್ಲಿ ಅವಿತು ಇಬ್ಬರೂ ಒಬ್ಬರ ನಂತರ ಒಬ್ಬರು ಪಂತುಲು, ರಾಜಮ್ಮ ಮತ್ತು ಭಾರತಿ ಅವರಿಗೆ ಮೋಸ ಮಾಡುವುದು ಮುದ ಕೊಡುತ್ತದೆ.
ನರಸಿಂಹರಾಜು ಹಾಕುವ ನಾನಾ ವೇಷಗಳಲ್ಲಿ ಅಡುಗೆ ಭಟ್ಟನಾಗಿ ಅರೆಬರೆ ತಮಿಳು ಭಾಷೆಯಲ್ಲಿ ಮಾತಾಡುವುದು ನಗೆ ಬರಿಸುತ್ತದೆ.
ಯತಿರಾಜ್ ವೀರಾಂಬುಧಿ
ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!