ಒಂದಾಗಲಿದೆಯ K.G.F &ಮುಫ್ತಿತಂಡ!!

K.G.Fನಂತರ ಯಾವ ಸಿನಿಮಾ ಮಾಡ್ತೀರಾ!! ಅನ್ನೋದು ಯಶ್ ಅವರ ಬಳಿ ಎಲ್ಲರು ಕೇಳುತ್ತಿರುವ ಪ್ರಶ್ನೆ.!

ಈ ಪ್ರಶ್ನಗೆ ಇಲ್ಲಿಯ ತನಕ ಖಚಿತವಾದ  ಉತ್ತರವನ್ನಾಗಲಿಸುಳಿವನ್ನಾಗಲಿನೀಡದಯಶ್, ಎಲ್ಲವನ್ನು ಬಹಳ ಗೌಪ್ಯವಾಗಿಇರಿಸಿದ್ದಾರೆ.

ಗಾಂಧೀನಗರದೆಲ್ಲೆಡೆಸಧ್ಯಕ್ಕೆ ಒಂದು ಸುದ್ದಿ  ಹರಿದಾಡುತ್ತಿದೆ,ಅದರ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರಕ್ಕೆ  ಮಫ್ತಿ ಖ್ಯಾತಿಯ ನಿರ್ದೇಶಕ” ನರ್ತನ” ಆಕ್ಷನ್-ಕಟ್ಹೇಳಲಿದ್ದಾರಂತೆ.

ಚಿತ್ರಕ್ಕೆತಮ್ಮನ್ನನಾಯಕಿಯಾಗಿದ್ದು, ಥ್ರಿಲ್ಲರ್ಆಕ್ಷನ್ ಕಥೆ ಆಧಾರಿತ ಸಿನಿಮಾ ಇದಾಗಿರುತ್ತದೆಯಂತೆ.ಕಥೆ ಮಾಡುವ ಕೆಲಸದಲ್ಲಿ ನಿರ್ದೇಶಕ ನರ್ತನ ತೊಡಗಿದ್ದಾರೆಎಂಬುವುದು ಕೂಡ ಸುದ್ದಿಯಾಗಿದೆ..ಯಶ್ ಅವರು ನರ್ತನ ಬಳಿ ಈ ಹಿಂದೆ “ಒಳ್ಳೆ ಕಥೆ ಮಾಡಿಕೊಂಡು ಬಾ” ಎಲ್ಲವೂ ಒಗ್ಗೂಡಿದರೆಮುಂದುವರೆಯೋಣ ಅನ್ನೋ ಸಮ್ಮತಿಯ ಮಾತನ್ನುಕೂಡಹೇಳಿದ್ದರಂತೆ.

ಕನ್ನಡದಲ್ಲಿ ಮುಫ್ತಿ ಸಿನಿಮಾಗೆ ಸಿಕ್ಕಉತ್ತಮಮನ್ನಣೆಯನ್ನು ಕಂಡು ಅದನ್ನು ತಮಿಳ್ ಮತ್ತು ತೆಲುಗು ಭಾಷೆಗಳಲ್ಲಿ ರೀಮೇಕ್ ಮಾಡಲು ಅಲ್ಲಿಯ ನಿರ್ಮಾಪಕರು ಸಜ್ಜಾದರು..ನಿರ್ದೇಶಕ ನರ್ತನರಿಗೆ ಆ ಸಿನಿಮಾಗಳನ್ನನಿಭಾಯಿಸುವ ಜವಾಬ್ದಾರಿ ಯನ್ನು ಹೊರಸಿದರು.ಈಗ ಆ ಕೆಲಸಜವಾಬ್ದಾರಿಯನ್ನು ಮುಗಿಸಿ ಹೊಸ ಯೋಜನೆಯ ಕಡೆ “ನರ್ತನ” ಕಾರ್ಯನಿರತರಾಗಿದ್ದರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply