ಲೂಸ್ ಮಾದ “ಯೋಗಿ” ನಟಿಸಿರುವ ದಯಾಳ್ಪದ್ಮನಾಭನ್ ನಿರ್ದೇಶನದ ಸಸ್ಪೆನ್ಸ್- ಥ್ರಿಲ್ಲರ್ ಸಿನಿಮಾ “ಒಂಬತ್ತನೇ ದಿಕ್ಕು” ಸಂಪೂರ್ಣವಾಗಿ ತಯಾರಾಗಿದ್ದು ,ಸೆನ್ಸಾರ್ಮಂಡಲಿಯವ್ರು ಸಿನಿಮಾನ ವೀಕ್ಷಿಸಿ, ಯಾವುದೇ ಕಟ್ಸ್ ಇಲ್ಲದೆ U/A ನೀಡಿದ್ದಾರೆ. ರಾಜಾಹುಲಿ ಖ್ಯಾತಿಯಗುರುದೇಶಪಾಂಡೆ ಸಿನಿಮಾಗೆ ನಿರ್ಮಾಪಕರಾಗಿದ್ದು, ಮಣಿಕಾಂತ್ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಯೋಗಿಗೆನಾಯಕಿಯಾಗಿಜೊತೆಯಾಗಿದ್ದರೆ ಅದಿತಿ ಪ್ರಭುದೇವ. ಮುಖ್ಯಪಾತ್ರದಲ್ಲಿ ಸಾಯಿ ಕುಮಾರ್ ಕಾಣಿಸಲಿದ್ದಾರೆ.
ಥ್ರಿಲ್ಲರ್ಸಿನಿಮಾಗಳನ್ನನಿರ್ದೇಶಿಲುವುದರಲ್ಲಿ ನಿಪುಣರಾದ “ದಯಾಳ್” ಇದಕರ ಮುನ್ನ “ಆ ಕರಾಳ ರಾತ್ರಿ”, ಪುಟ್109, ತ್ರಯಂಬಕಮ್, ರಂಗನಾಯಕಿ ಅನ್ನುವ ಸಿನಿಮಗಳನ್ನನಿರ್ದೇಶಿಸಿ ರಾಜ್ಯ ಪ್ರಶಸ್ತಿ, SIIMA ಆವಾರ್ಡ್ಸ್ ಪಡೆದಿದ್ದಾರೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ