( ಮುಂದುವರೆದ ಭಾಗ )
ಇವರು ಜಿಲ್ಲಾ ಉತ್ಸವ, ಮೈಸೂರು ದಸರಾ, ವಿಶ್ವ ಕನ್ನಡ ಸಮ್ಮೇಳನ – ಬಳ್ಳಾರಿ, ಕಲಬುರ್ಗಿ, ಸಿಂಗಾಪುರ, ಲಂಡನ್, ಹಂಪಿ ಉತ್ಸವ, ಅಕ್ಕ ಸಮ್ಮೇಳನ, ಬೆಂಗಳೂರು ಗಣೇಶೋತ್ಸವ ಮುಂತಾದ ಜನಪ್ರಿಯ ಮತ್ತು ಘನತೆವೆತ್ತ ಸಮಾರಂಭಗಳಲ್ಲಿ ಸಂಗೀತ ರಸಸಂಜೆ ನೀಡಿರೋದು ಅಭಿಮಾನಿಗಳಿಗೆ ಖುಷಿಯ ವಿಚಾರ ತಾನೆ…
“ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ, ಅಪ್ಪ ಐ ಲವ್ ಯೂ ಪಾ ಅಪ್ಪ ಐ ಲವ್ ಯೂ ಪಾ”
ಚಿಕ್ಕ ಮಗುವಿನಿಂದಲೂ ಇವರು ನೋಡೋಕೆ ಎಷ್ಟು ಮುದ್ದಾಗಿ ಕಾಣಿಸುತ್ತಿದ್ದರು, ಹೇಗಿದ್ದರು ಅನ್ನೋದಕ್ಕೆ ಕೆಲವು ಭಾವಚಿತ್ರಗಳನ್ನು ಹಾಕಿರುವೆ, ನೀವೇ ನೋಡಿ ನಿಮಗೆ ಅನ್ನಿಸುತ್ತೆ , ಹೀಗೆ ನಂದಿತ ಗಾಯಕಿಯ ಬಗ್ಗೆ ಹೇಳುವಾಗ ಅವರು ಎಂಥ ಸುಸಂಸ್ಕೃತ ಹೆಣ್ಣು ಅನ್ನೋದನ್ನ ಪ್ರಸ್ತಾಪಿಸಿರುವೆನೋ ಹಾಗೆ ಇವರೂ ಕೂಡ.
ಇವರ ಗಾಯನಕ್ಕೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ, ಅವುಗಳಲ್ಲಿ ಕೆಲವು…
🌺ಜ್ನಾನಜ್ಯೋತಿ (ಲಿಟಲ್ ಮಾಸ್ಟರ್) ಚಿತ್ರ ಗೀತೆಗೆ ಕನಾ೯ಟಕ ಸಕಾ೯ರ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ನೀಡಿದೆ .
🌲ಉಗ್ರಂ ಚಿತ್ರದ “ಚನನ ಚನನ” ಗಾಯನಕ್ಕೆ ಫಿಲಂ ಫೇರ್ ದಕ್ಷಿಣ ಪ್ರಶಸ್ತಿ ಲಭಿಸಿದೆ.
🐿ಬಹುಪರಾಕ್ ಚಿತ್ರದ “ಉಸಿರಾಗುವೆ ” ಗೀತೆಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿ ಜೀ ಮ್ಯೂಸಿಕ್ ವತಿಯಿಂದ ನೀಡಿದ್ದಾರೆ.
🐯ಅಖಿಲ ಕರ್ನಾಟಕ ಪತ್ರಿಕಾ ವರದಿಗಾರರ ಸಂಘದಿಂದ ಮಾಧ್ಯಮ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ನೀಡಲಾಗಿದೆ.
🦆ಬೆಂಕಿಪಟ್ಣ ಚಿತ್ರದ “ಇರಲಿ ಹೇಗೆ “ಗಾಯನಕ್ಕೆ ಕನಾ೯ಟಕ ಚಿತ್ರ ರಸಿಕರ ಸಂಘದವರಿಂದ ಪ್ರಶಸ್ತಿ.
🦜ರೆಡ್ ಎಫ್ ಎಂ ರವರು ತುಳು ಚಿತ್ರದ ಗಾಯನಕ್ಕೆ ಪ್ರಶಸ್ತಿ .
🦆ಗಾಯನ ಸೇವೆಗೆ ಆಯ೯ಭಟ ಅಂತರ ರಾಷ್ಟ್ರೀಯ ಪ್ರಶಸ್ತಿ ಗೌರವ.
🦄ಚೌಕ ಚಿತ್ರದ “ಅಪ್ಪ ಐ ಲವ್ ಯೂ ಪಾ ” ಗಾಯನಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು ಗುರುತಿಸಿ ಫಿಲಂ ಫೇರ್ ಪ್ರಶಸ್ತಿ.
🌸ಇದೇ ಗೀತೆಗೆ ಸಂತೋಷಂ ಪ್ರಶಸ್ತಿ ನೀಡಿಕೆ.
🌻ಸೈಮಾ ಪ್ರಶಸ್ತಿ ಅಪ್ಪಾ ಐ ಲವ್ ಯೂ ಪಾ ಹಾಡಿಗೆ ನೀಡಲಾಗಿದೆ. 🏵ಮಿಚಿ೯ ಮ್ಯೂಸಿಕ್ ಅವಾಡ್೯ ಮತ್ತೆ ಚೌಕ ಚಿತ್ರದ “ಅಪ್ಪ ಐ ಲವ್ ಯೂ ಪಾ ” ಹಾಡಿಗೆ ನೀಡಿರೋದು.
ಈ ಗೀತೆಯ ಬಗ್ಗೆ ಹೇಳಲೇಬೇಕು ಚೌಕ ಚಿತ್ರ, ತರುಣ್ ಸುಧೀರ್ ನಿದೇ೯ಶನ,ಅಜು೯ನ್ ಜನ್ಯ ಕಂಪೋಸ್ ಮಾಡಿರೋದು, ರಚನೆ ನಾಗೇಂದ್ರ ಪ್ರಸಾದ್, ಹಾಡನ್ನು ಎಷ್ಟು ಪ್ರೀತಿಸಿ ಹಾಡಿದ್ದಾರೆ ಅನ್ನೋದಕ್ಕೆ ಇಷ್ಟೋಂದು ಹೆಸರುವಾಸಿಯಾಗಿರೋದು, ತಂದೆ ತನ್ನ ಮಗಳಿಗೆ ಸವ೯ಸ್ವ, ಅವರು ಹೇಳಿಕೊಟ್ಟಂತೆ ಒಳ್ಳೆಯ ದಾರಿಯಲ್ಲಿ ನಡೆಯಲು ಸಾಧ್ಯ ಮತ್ತು ಎಲ್ಲಾ ತಂದೆಯರಿಗೆ ಈ ಹಾಡು ಸಮಪ೯ಣೆ ಮಾಡಿರೋದು, ಅಷ್ಟೇ ಚೆನ್ನಾಗಿ ಹಾಡಿರುವ ಅವರ ಕೋಗಿಲೆಯಂತ ಧ್ವನಿ.
ಇವರು ಅನುಪಮ ಭಟ್ (ಜೀ ಕನ್ನಡ ನಿರೂಪಕಿ) ಅಕ್ಕ, ತಂಗಿ ನಿರೂಪಕಿ ಕ್ಷೇತ್ರದಲ್ಲಿ ಕಾಯ೯ ನಿವ೯ಹಿಸಿದರೆ ಅಕ್ಕ ಗಾಯನ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ, ಇವರ ಗಾಯನ ಪಯಣ ಹೀಗೆ ಮುಂದುವರಿಯಲಿ
ಇವರನ್ನು ಸಂಗೀತ ಸಮಾರಂಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿ ಮಾಡಿದ ಕ್ಷಣ ಸಂತಸ ತಂದಿದೆ.
ಇವರಿಗೆ ಮತ್ತೊಂದು ಹೆಸರಿದೆ “ಕನಾ೯ಟಕದ ಕೋಗಿಲೆ ” ನಿಜಕ್ಕೂ ಅವರ ಧ್ವನಿ ಕೋಗಿಲೆನೇ ಏನಂತೀರಿ ಓದುಗರೆ…