ಸುಶ್ರಾವ್ಯವಾಗಿ ಹಾಡುವ ಗಾಯಕಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಅನ್ನೋದಕ್ಕೆ ಮತ್ತೊಂದು ಹೆಸರೇ ಅನುರಾಧ ಭಟ್. ಇವರು ಹಾಡಿರುವ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ.
ಇವರು ಶ್ರೀಕೃಷ್ಣ ಭಟ್ ಮತ್ತು ಗಾಯತ್ರಿ ಭಟ್ ರವರ ಮೊದಲ ಮಗಳು, ತಂದೆ ತಾಯಿಗೆ ಸಂಗೀತವೆಂದರೆ ಆಸಕ್ತಿ. ಓದಿದ್ದು ಕಾಮೆ೯ಲ್ ಇಂಗ್ಲೀಷ್ ಸ್ಕೂಲ್, ಸೆಂಟ್ ಆನ್ ಗಲ್ಸ್೯ ಹೈ ಸ್ಕೂಲ್, ಬಿ ಎಸ್ ಸಿ ಮತ್ತು ಎಂ ಬಿ ಎ ಪದವೀಧರೆ. ಅಂತರರಾಷ್ಟ್ರೀಯ ಕಂಪನಿಗೆ ಹೆಚ್ ಆರ್ ಡಿಪಾಟ್೯ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಸಂಗೀತದ ಮೇಲೆ ಹೆಚ್ಚಿನ ಒಲವಿದ್ದ ಕಾರಣ ಕೆಲಸ ಬಿಟ್ಟು ತಮ್ಮ ಎಲ್ಲಾ ಸಮಯವನ್ನು ಸಂಗೀತ ಕ್ಷೇತ್ರದಲ್ಲಿ ಮೀಸಲಾಗಿಟ್ಟು ಎಲ್ಲಾ ಪ್ರಕಾರಗಳನ್ನು ತಿಳಿದುಕೊಳ್ಳುವ, ಕಲಿಯುವ ನಿಧಾ೯ರ ಕೈಗೊಂಡರು.
ಕಮಲಾ ಭಟ್ ರವರ ಹತ್ತಿರ ಭರತ ನಾಟ್ಯ ತರಬೇತಿ ಪಡೆದು ಅದರಲ್ಲಿ ವಿದ್ವತ್ ರಾಗಿ, ಕನಾ೯ಟಿಕ್ ಶಾಸ್ತ್ರೀಯ ಸಂಗೀತ , ಭಕ್ತಿ ಗೀತೆ, ಲಘು ಸಂಗೀತವನ್ನು ದಿ.ಶ್ರೀನಾಥ್ ಮರಾಟೆ ರವರ ಬಳಿ ಕಲಿತಿದ್ದರು, ಅದಲ್ಲದೆ ವೀಣೆ ನುಡಿಸುವುದನ್ನು ರಂಗನಾಯಕಿ ವರದರಾಜನ್ ರವರ ಬಳಿ ಬಾಲ್ಯದಿಂದ ಕಲಿತದ್ದರಿಂದ ಹಲವಾರು ಪ್ರಶಸ್ತಿಗಳನ್ನು ಗಳಿಸಲು ಸಾಕ್ಷಿಯಾಗಿವೆ.
ಮಂಗಳೂರಿನ ಶಾಲಾ ದಿನಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರು ತೀಪು೯ಗಾರರಾಗಿ ಹೋದಾಗ ಇವರ ಗಾಯನವನ್ನು ಕೇಳಿ ಮೆಚ್ಚಿ ಇವರಿಗೆ ಹಾಡಲು ಮೊದಲ ಅವಕಾಶ ನೀಡಿದರು ನಂತರ ಗುರುಕಿರಣ್ ರವರ ಸಂಗೀತ ಕಾಯ೯ಕ್ರಮಗಳಲ್ಲಿ ಇವರು ಹಾಡೋದು ನಿರಂತರವಾಗಿ ನಡೆಯಿತು, ಭಾರತದ ಮತ್ತು ಪ್ರಪಂಚಾದ್ಯಂತ ಸಂಗೀತ ಸುಧೆ ನೀಡುವಂತಾಯಿತು, ಕಾಲೇಜು ದಿನಗಳಲ್ಲಿ ಯುಗಳ ಗೀತೆಗಳನ್ನು ಹಾಡೋ ಅವಕಾಶ ದಿಗ್ಗಜ ಗಾಯಕರು ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಜೊತೆ ಹಾಡುವ ಸುವಣಾ೯ವಕಾಶ “ಎದೆ ತುಂಬಿ ಹಾಡುವೆನು ” ಶೋನಲ್ಲಿ.
ಈ ಟಿವಿ ಕನ್ನಡ “ಅನ್ವೇಷಣೆ ” ಶೋನ ನಡೆಸಿಕೊಡುತ್ತಿದ್ದರು, ನಂತರ ಹಂಸಲೇಖ ರವರ ಬಳಿ ಆಡಿಷನ್ ನಡೆದು ಆಯ್ಕೆಯಾಗಿ “ನೆನಪಿರಲಿ ” ಚಿತ್ರದ ಬಿಟ್ ಹಾಡೋಕೆ ಅವಕಾಶ ನೀಡಿದರು. ಹಂಸಲೇಖ ರವರ ತಂಡದಲ್ಲಿ ಹಲವಾರು ಗೀತೆಗಳಿಗೆ ಕೋರಸ್ ನೀಡಿದ್ದಾರೆ
( ಮುಂದುವರೆಯುವುದು )