ನೆಚ್ಚಿನ ಮಿತ್ರರೇ ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿ ಮೆರೆದ “ಹಾಸ್ಯ ದಿಗ್ಗಜ ಹಾಸ್ಯ ಚಕ್ರವರ್ತಿ” ನರಸಿಂಹರಾಜು ರವರ ಜನುಮ ದಿನ ಇಂದು ಅವರಿಗೆ ಮೊದಲು ಶುಭಾಶಯಗಳು ಹೇಳೋಣ🌹
ಹುಟ್ಟಿದ್ದು ತಿಪಟೂರಿನಲ್ಲಿ ತಂದೆ ರಾಮರಾಜು ಮತ್ತು ತಾಯಿ ವೆಂಕಟಲಕ್ಷ್ಮಮ್ಮ. ಚಿಕ್ಕಂದಿನಿಂದಲೇ ನಾಟಕದ ಆಸಕ್ತಿ ಬೆಳೆಯಿತು, ಪ್ರಹ್ಲಾದ, ಲೋಹಿತಾಶ್ವ, ಕ್ರಿಷ್ಣ, ಗೋರ, ಕುಂಬಾರ, ಹರಿಶ್ಚಂದ್ರ, ವಿಶ್ವಾಮಿತ್ರ, ರಾಮ, ರಾವಣ ಮತ್ತು ಭರತ ಮುಂತಾದ ಪಾತ್ರಗಳು ಮಾಡಿದ್ದಾರೆ.
ಇವರ ಮೂಲ ಹೆಸರು ತಿಪಟೂರು ರಾಮರಾಜು ನರಸಿಂಹ ರಾಜು ಇವರನ್ನು ನಾವು “ಕನ್ನಡದ ಚಾರ್ಲಿ ಚಾಪ್ಲಿನ್” ಅಂತ ಕೂಡ ಕರೀಬೋದು “ನಗಬೇಕು ನಗಿಸಬೇಕು ಅದೇ ನನ್ನ ಧಮ೯, ನಗಲಾರೆ ಎಂದರೆ ಅದು ನಿಮ್ಮ ಕಮ೯” ಅನ್ನೋದೇ ಇವರ ಮೂಲಮಂತ್ರ .
ಇವರನ್ನು ನೋಡಿದರೆ ಹಾಸ್ಯದ ಪಾತ್ರಗಳಿಗೆ ಹೇಳಿ ಮಾಡಿಸಿದ ಕಲಾವಿದರು ಅನ್ನಿಸುತ್ತದೆ ತಮಗೆಷ್ಟೇ ನೋವಿದ್ದರೂ ಇನ್ನೊಬ್ಬರ ಮುಂದೆ ತೋರಿಸಿಕೊಳ್ಳದೇ ಅಷ್ಟೇ ಅಮೋಘವಾಗಿ ಪಾತ್ರ ನಿವ೯ಹಿಸುತ್ತಿದ್ದರು ಇದುವರೆಗೂ 250 ಚಿತ್ರಗಳಲ್ಲಿ ಹಾಸ್ಯದ ರಸದೌತಣ ಪ್ರೇಕ್ಷಕರಿಗೆ ನೀಡುತ್ತಿದ್ದರು ತೆರೆಯ ಮೇಲೆ ಇವರು ಒಮ್ಮೆ ಬಂದರೆ ಪ್ರೇಕ್ಷಕರಿಂದ ಶಿಲ್ಲೆ ಚಪ್ಪಾಳೆ ತಪ್ಪುತ್ತಿರಲಿಲ್ಲ ಯಾವುದೇ ಒಂದು ದೃಶ್ಯವನ್ನು ನಟಿಸಿ ಅಭಿಮಾನಿಗಳ ಮನವನ್ನು ಗೆಲ್ಲುತ್ತಿದ್ದರು .
ನಮ್ಮ ಅಣ್ಣಾವ್ರ ಜೊತೆ ಹಾಸ್ಯ ದಿಗ್ಗಜರುಗಳ ಜೋಡಿಯೇ ಬಾಲಕೃಷ್ಣರವರು ಜಿ ವಿ ಅಯ್ಯರ್ ಇನ್ನೂ ಮುಂತಾದವರು ಇವರೆಲ್ಲ ನಮ್ಮ ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳು.
ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಅಣ್ಣಾವೃ, ನರಸಿಂಹ ರಾಜು, ಜಿ ವಿ ಅಯ್ಯರ್ ಎಲ್ಲರೂ ಸೇರಿ “ಬೇಡರ ಕಣ್ಣಪ್ಪ ” ನಾಟಕವಾಡುತ್ತಿದ್ದರು.
ಅಣ್ಣಾವ್ರ ಜೊತೆ ಬಹಳ ಚಿತ್ರ ನಟಿಸಿದ್ದಾರೆ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ
ಬೇಡರ ಕಣ್ಣಪ್ಪ ,ಶ್ರೀ ಕೃಷ್ಣದೇವರಾಯ,ರಣಧೀರ ಕಂಠೀರವ , ದೇವರ ಗೆದ್ದ ಮಾನವ, ಕಸ್ತೂರಿ ನಿವಾಸ , ಸೋದರಿ, ಹರಿ ಭಕ್ತ ,ಭಕ್ತ ಪ್ರಹ್ಲಾದ ,ಧಮ೯ ವಿಜಯ ,ದಶಾವತಾರ ,ಸ್ವಣ೯ಗೌರಿ, ಸತಿಶಕ್ತಿ,ಸಾಕುಮಗಳು ,ದೇವರ ಗೆದ್ದ ಮಾನವ ,ಭಕ್ತ ಕನಕದಾಸ, ಲಘ್ನ ಪತ್ರಿಕೆ ,ರೌಡಿ ರಂಗಣ್ಣ, ಕುಲಗೌರವ ,ಗಂಧದ ಗುಡಿ, ದೇವರು ಕೊಟ್ಟ ತಂಗಿ ,ವೀರಕೇಸರಿ, ರಾಜಶೇಖರ ,ಭೂಪತಿರಂಗ ,ಹಸಿರು ತೋರಣ , ಬಂಗಾರದ ಹೂವು, ಚಂದ್ರಹಾಸ, ಸಾಕ್ಷಾತ್ಕಾರ, ಅಮ್ಮ ಇನ್ನೂ ಮುಂತಾದವು.
( ಮುಂದುವರೆಯುವುದು )