ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಿರಿಯ ನಟ ಲೋಕೇಶ್

  ಲೋಕೇಶ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾನ್ವಿತ ಹಿರಿಯ ನಟರಲ್ಲದೆ ನಿರ್ಮಾಪಕರೂ ಮತ್ತು ನಿರ್ದೇಶಕರಾಗಿಯು ಪ್ರಸಿದ್ಧರಾಗಿದ್ದ ಇವರು ತಮ್ಮ ಚಿತ್ರರಂಗದ ಜೀವನದಲ್ಲಿ ಎಂದಿಗೂ  ಪರಭಾಷೆ ಚಿತ್ರಗಳಲ್ಲಿ ನಟಿಸಲಿಲ್ಲ. ಆದರೂ ನನಗೆ ದೊರೆತ ಅಲ್ಪ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ರಚಿಸಿದ್ದೇನೆ.

      ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಅಬ್ಬಯ್ಯ ನಾಯ್ಡು ಅವರ ಮಗನಾಗಿ ೧೯೪೭ ರಲ್ಲಿ ಜನಿಸಿದರು. ಇವರದು ಕಲಾವಿದರ ಕುಟುಂಬವಾಗಿದ್ದು ಇವರ ತಂದೆ ಅಬ್ಬಯ್ಯ ನಾಯ್ಡು ಹೆಸರಾಂತ ರಂಗ ಭೂಮಿಯ ಕಲಾವಿದರಲ್ಲದೆ ನಿರ್ದೇಶಕರಾಗಿದ್ದರು. ಇವರು ೧೯೫೮ ರಲ್ಲಿ ಬಿಡುಗಡೆಯಾದ ಭಕ್ತಿ ಪ್ರಹ್ಲಾದ ಚಿತ್ರದಲ್ಲಿ ಪ್ರಹ್ಲಾದನ ಪಾತ್ರದಲ್ಲಿ ನಟಿಸುವುದರ ಮೂಲಕ ಬಾಲ ಕಲಾವಿದನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಈ ಚಿತ್ರದಲ್ಲಿ ನಟಿಸಿದ ಹತ್ತು ವರ್ಷಗಳ ನಂತರ ೧೯೬೮ ರಲ್ಲಿ ಬಿಡುಗಡೆಯಾದ ಹುಣಸೂರು ಕೃಷ್ಣಮೂರ್ತಿ ಅವರ ಅಡ್ಡದಾರಿ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದರು. ದುರದೃಷ್ಟವಶಾತ್ ಯಾರಿಗೂ ಇವರಲ್ಲಿದ್ದ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಆದರೆ ೧೯೭೪ ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದಲ್ಲಿ ಮೂಡಿ ಬಂದ ಕಾಡು ಚಿತ್ರದಲ್ಲಿ ನಟಿಸುವುದರ ಮೂಲಕ ಇವರ ಪ್ರತಿಭೆಯ ಸಾಮರ್ಥ್ಯದ ಪರಿಚಯವಾಯಿತು. ಇವರ ತಂದೆಯ ನಿಧನದ ನಂತರ ನಟರಂಗ ಎಂಬ ನಾಟಕ ಮಂಡಳಿಯನ್ನು ಕಟ್ಟಿ ತುಘಲಕ್, ಕಾಕನಕೋಟೆ, ಶಹಜಾನ್ ಮತ್ತು ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಮುಂತಾದ ನಾಟಕಗಳನ್ನು ಪ್ರದರ್ಶಿಸಿ ಯಶಸ್ವಿಯಾಗಿದ್ದರು.

ಜೊತೆಗೆ ಚಿತ್ರ ರಂಗದಲ್ಲಿ ಕೂಡ ಸಕ್ರೀಯವಾಗಿದ್ದರು. ಪರಸಂಗದ ಗೆಂಡೆ ತಿಮ್ಮ, ಪಟ್ಟಣಕ್ಕೆ ಬಂದ ಪತ್ನಿಯರು, ದೇವರ ಕಣ್ಣು, ಪರಿವರ್ತನೆ ಈ ರೀತಿ ಹಲವಾರು ಚಿತ್ರಗಳಲ್ಲಿ  ನಟಿಸಿ ನಟರಾಗಿ ಗುರುತಿಸಿಕೊಂಡಿದ್ದರು. ಆದರೆ ೧೯೭೪ ರಲ್ಲಿ ತೆರೆಗೆ ಬಂದ ಇವರು ನಟಿಸಿದ ಭೂತಯ್ಯನ ಮಗ ಅಯ್ಯು ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತ್ತೆಂದರೆ ಇವರ ನಟನೆ ಪ್ರೇಕ್ಷಕರ ಮನಸ್ಸಿನ ಮೇಲೆ ಎಂತಹ ಪ್ರಭಾವ ಬೀರಿತ್ತೆಂದರೆ ಇದು ಅವರ ಅದ್ಭುತ ನಟನೆಗೆ ಸಾಕ್ಷಿಯಾಗಿದೆ.

  ರಂಗಭೂಮಿಯಲ್ಲಿ ತೋರಿಸಿದ್ದ ನಟನೆಯ ಶಕ್ತಿಯನ್ನು ಈ ಚಿತ್ರದಲ್ಲಿ ಕೂಡ ತೋರಿಸಿದ್ದರು‌. ಅಲ್ಲದೇ ಈ ಚಿತ್ರ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಿಗೆ ಕೂಡ ರಿಮೇಕ್ ಆಗಿತ್ತು. ಈ ಚಿತ್ರ ಬಿಡುಗಡೆಯಾದ ಮೂರು ವರ್ಷಗಳ ನಂತರ ೧೯೭೭ ರಲ್ಲಿ ಬಿಡುಗಡೆಯಾದ  ಕಾಕನಕೋಟೆ ಚಿತ್ರದಲ್ಲಿ ನಟಿಸುವುದರ ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದರು.

ಇವರ ಚಿತ್ರ ರಂಗದ ಪಯಣದ ಮಾರ್ಗ ಅಷ್ಟು ಸುಲಭವಾಗಿರಲಿಲ್ಲ. ತಮಗೆ ದೊರೆತ ಪಾತ್ರಕ್ಕೆ ನಟಿಸಿ ಅದಕ್ಕೆ ಜೀವ ತುಂಬುವುದರ ಮೂಲಕ ಅಪಾರ ಅಭಿಮಾನಿಗಳ ಪ್ರೀತಿ ಗೌರವವನ್ನು ಗಳಿಸಿದ್ದರು. ಕಷ್ಟ ಕಾರ್ಪಣ್ಯಗಳ ಮೂಲಕ ಹೋರಾಡಿ ಕನ್ನಡ ಚಿತ್ರರಂಗದ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಇವರು ತಮ್ಮ ಖಾಸಗಿ ಜೀವನದಲ್ಲಿ ಸರಳತೆಗೆ ಎಷ್ಟು ಮಹತ್ವ ಕೊಡುತ್ತಿದ್ದರೆಂದರೆ ನಟಿ ಗಿರಿಜಾ ಅವರನ್ನು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು.

ಇವರ ಮಗ ಸೃಜನ್ ಲೋಕೇಶ್ ಮತ್ತು ಮಗಳು ಪೂಜಾ ಲೋಕೇಶ ಕೂಡ ಅನೇಕ ಚಿತ್ರಗಳಲ್ಲಿ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ೧೯೯೧ ರಲ್ಲಿ ಭುಜಂಗಯ್ಯನ ದಶಾವತಾರ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು ಅಲ್ಲದೆ ಅಭಿನಯಿಸಿದ್ದರು. ಇವರು ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆ ತಿಮ್ಮ ಮತ್ತು ಬ್ಯಾಂಕರ್ ಮಾರ್ಗಯ್ಯ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸ್ಟೇಟ್ ಫಿಲಂ ಪ್ರಶಸ್ತಿಯನ್ನು ಪಡೆದಿದ್ದರು. ನಿನಗಾಗಿ ನಾನು, ದೇವರ ಕಣ್ಣು, ಪರಿವರ್ತನೆ ಇತ್ಯಾದಿ ಈ ರೀತಿಯಾಗಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದು ಇವರು ತಮ್ಮ ಚಿತ್ರರಂಗದ ಜೀವನದಲ್ಲಿ ಎಂದಿಗೂ ಪರಭಾಷೆ ಚಿತ್ರಗಳಲ್ಲಿ ನಟಿಸಲಿಲ್ಲ. ಮಕ್ಕಳಾದ ಸೃಜನ್ ಲೋಕೇಶ್, ಪೂಜಾ ಲೋಕೇಶ ಮತ್ತು ಪತ್ನಿ ಗಿರಿಜಾ ಲೋಕೇಶ್ ಜೊತೆ ತೃಪ್ತಿಕರವಾದ ಜೀವನವನ್ನು ನಡೆಸುತ್ತಿದ್ದ ಇವರು ತಮ್ಮ  ೫೭ ನೇ ವಯಸ್ಸಿನಲ್ಲಿ ಅಕ್ಟೋಬರ್ ೧೪, ೨೦೦೪ ರಂದು ಮರಣ ಹೊಂದಿದರು. ಆದರೂ ಇವರ ಕೆಲ ಚಿತ್ರಗಳ ಪಾತ್ರಗಳು ಇಂದಿಗೂ ಅಭಿಮಾನಿಗಳನ್ನು ಕಾಡುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply