ಕನ್ನಡ ಚಿತ್ರರಂಗದ ಮಾಂತ್ರಿಕ ಚಿತ್ರಗಳ ರಾಜ ಬಿ.ವಿಠಲಾಚಾರ್ಯ

ಮುಂದುವರಿದ ಭಾಗ

1953 ರಲ್ಲಿ  ಒಂದು ಕೆಟ್ಟ ಸಂದರ್ಭದಲ್ಲಿ ತಮ್ಮ ಸ್ನೇಹಿತರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಇವರು ಮಹಾತ್ಮ ಪಿಕ್ಚರ್ಸ್ ನಿಂದ ಹೊರಗೆ ಬಂದು ತಮ್ಮದೇ ವಿಠಲ್ ಪ್ರೊಡಕ್ಷನ್  ಎಂಬ ಕಂಪನಿಯನ್ನು ಸ್ಥಾಪಿಸಿ ರಾಜ್ಯ ಲಕ್ಷ್ಮಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
    1954 ರಲ್ಲಿ ವಿಭಿನ್ನ ಕಥೆಯನ್ನು ಹೊಂದಿದ್ದ ಕನ್ಯಾಧನ ಎಂಬ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಈ ಚಿತ್ರವು ತೆರೆ ಕಂಡ ನಂತರ ಒಂದು ಕ್ರಾಂತಿಯನ್ನು ಹುಟ್ಟಿಸಿತಲ್ಲದೆ ಭರ್ಜರಿ ಯಶಸ್ಸನ್ನು ಪಡೆದಿತ್ತು. ಅಲ್ಲದೇ ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ರಿಮೇಕ್ ಮಾಡಲು ನಿರ್ಧರಿಸಿ ಮದ್ರಾಸ್ ಗೆ ಪ್ರಯಾಣವನ್ನು ಬೆಳೆಸಿ ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಹೂಡಿದ್ದರು. ಇವರು ಮದ್ರಾಸ್ ಪ್ರವೇಶಿಸಿದ ಸಮಯದಲ್ಲಿ ಆಗ ತಾನೇ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ್ದ ಹಿರಿಯ ನಟ ಎನ್.ಟಿ.ಆರ್ ನಟಿಸಿದ್ದ ಇಂಗ್ಲೀಷ್ ಅನುವಾದ ಫ್ಯಾಂಟಸಿ ಕಥೆಯನ್ನು ಹೊಂದಿದ್ದ ಪಾತಾಳ ಭೈರವಿ ಚಿತ್ರವು ತೆರೆ ಕಂಡು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿತ್ತು.  ನಂತರ ನಮ್ಮ  ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ಡಾ.ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ವೀರ ಕೇಸರಿ ಎಂಬ ಚಿತ್ರವನ್ನು ತಯಾರಿಸಿ ಬಿಡುಗಡೆ ಮಾಡಿದ್ದರಲ್ಲದೆ ನಂತರ ಕಂಡ ಯಶಸ್ಸು ಸಾಮಾನ್ಯವಾಗಿರಲಿಲ್ಲ. ಮತ್ತು ತೆಲುಗು ಚಿತ್ರರಂಗದ ಹಿರಿಯ ನಟ ಎನ್.ಟಿ.ಆರ್ ಜೊತೆ ಅಗ್ಗಿ ಭರಾಟಾ, ಗಂಡಿ ಕೋಟ ರಹಸ್ಯಂ, ಲಕ್ಷ್ಮಿ ಕಟಾಕ್ಷ, ಪಿಡುಗು ರಾಮುಡು, ನಿನ್ನೆ ಪೆಳ್ಳಾಡುತ ಮತ್ತು ಗುಂಡಮ್ಮ ಕಥಾ ಸೇರಿ 15 ಚಿತ್ರಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದ ಇವರು ಸೂಪರ್ ಸ್ಟಾರ್ ಕೃಷ್ಣ ಜೊತೆ ಮೋಸಗಾಳಕು ಮೋಸಗಾಡು ಚಿತ್ರದಲ್ಲಿ ಕೂಡ ಕೆಲಸವನ್ನು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ನಟ ಜೆಮಿನಿ ಗಣೇಶನ್ ಮತ್ತು ನಟಿ ಎಂ.ಎನ್. ರಾಜಮ್ಮ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಪೆನ್ನು ಕುಲತಿನ್ ಮೊನ್ವಿಲಕ್ಕು ಎಂಬ ತಮಿಳು ಚಿತ್ರವನ್ನು ನಿರ್ದೇಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ತಮಿಳು ಚಿತ್ರರಂಗದಲ್ಲಿ ಕೂಡ ಸಾಬೀತು ಪಡಿಸಿದ್ದರು. ಆದರೆ ಗಮನಿಸಬೇಕಾದ ವಿಷಯವೇನೆಂದರೆ ಇವರು ನಿರ್ದೇಶಿಸಿದ ಮತ್ತು ನಿರ್ಮಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡಿದ್ದರೂ ಒಂದೇ ಒಂದು ಪ್ರಶಸ್ತಿಯನ್ನು ಪಡೆಯದೇ ಇರುವುದು ಆಶ್ಚರ್ಯಕರ ಸಂಗತಿಯೂ ಆಗಿದೆ. ಇಂತಹ ಅಗಾಧವಾದ ಪ್ರತಿಭೆಯನ್ನು ಹೊಂದಿದ್ದ ಇವರು ಚೆನ್ನೈನಲ್ಲಿ ಮೇ 28, 1999 ರಂದು ತಮ್ಮ 79 ನೇ ವಯಸ್ಸಿನಲ್ಲಿ   ಮರಣಹೊಂದಿದರು.


   ಆದರೆ ಚಿತ್ರ ಪ್ರೇಮಿಗಳು ನೀಡಿದ ಬಿರುದುಗಳು ಈ ರೀತಿಯಾಗಿವೆ
1) ಕನ್ನಡ ಚಿತ್ರರಂಗ ಕಂಡ ಮಾಂತ್ರಿಕ ಚಿತ್ರಗಳ ರಾಜ
2) ತೆಲುಗು ಚಿತ್ರರಂಗ ಕಂಡ ಜನಪದ ಬ್ರಹ್ಮ
3) ತಮಿಳು ಚಿತ್ರರಂಗ ಕಂಡ ಮಾಯಾಜಾಲಾ ಮನ್ನನ್

          ಈ ರೀತಿಯಾಗಿ ಬಿರುದುಗಳು ದೊರೆಯುವುದು  ಅಪರೂಪವೇ ಆದರೂ, ಅದರಲ್ಲೂ ಕನ್ನಡಿಗನಿಗೆ ದೊರಕಿರುವುದು ಕನ್ನಡಿಗರ ಆದ ನಮಗೆ ಹೆಮ್ಮೆಯ ಸಂಗತಿಯಾಗಿದೆ.
  (ದೊರೆತ ಅಲ್ಪ ಮಾಹಿತಿ ಆಧರಿಸಿ ಈ ಲೇಖನವನ್ನು ರಚಿಸಿದ್ದೇನೆ

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply